Monday, December 23, 2024
Homeಬ್ರೇಕಿಂಗ್‌ ನ್ಯೂಸ್ಗ್ಯಾಸ್ ಟ್ಯಾಂಕರ್ ದುರಂತ‌ದ. ತುರ್ತು ಯಶಸ್ವಿ ಅಣಕು ಕಾರ್ಯಾಚರಣೆ ನಡೆಸಿದ ಅಧಿಕಾರಿಗಳ ತಂಡ.

ಗ್ಯಾಸ್ ಟ್ಯಾಂಕರ್ ದುರಂತ‌ದ. ತುರ್ತು ಯಶಸ್ವಿ ಅಣಕು ಕಾರ್ಯಾಚರಣೆ ನಡೆಸಿದ ಅಧಿಕಾರಿಗಳ ತಂಡ.

ತುರ್ತು ತಡೆಗಟ್ಟುವಿಕೆ ಮತ್ತು ಪ್ರತಿಕ್ರಿಯೆ – ಮಾಕ್ ಡ್ರಿಲ್ ಅಣಕು ಪ್ರಾಯೋಗಿಕ‌ ಪ್ರದರ್ಶನ.

ಶಿಡ್ಲಘಟ್ಟ : ಅನಿಲ ಟ್ಯಾಂಕರ್ ವಾಹನಗಳ ದುರಂತ ತುರ್ತು ಘಟನೆಯ ಸಂದರ್ಭಗಳಲ್ಲಿ ಯಾವ ರೀತಿಯಲ್ಲಿ‌ ನಿರ್ವಹಣೆ ಮಾಡಬೇಕು ಪರಿಸ್ಥಿತಿಯನ್ನ ನಿವಾರಿಸುವ ವಿಧಾನವನ್ನ ಇಂದು ತಾಲ್ಲೂಕು‌ ಆಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಅಗ್ನಿಶಾಮಕ ದಳ, ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ತುರ್ತು ತಡೆಗಟ್ಟುವಿಕೆ ಮತ್ತು ಪ್ರತಿಕ್ರಿಯೆ ಮಾಕ್ ಡ್ರಿಲ್ ಅಣಕು ಪ್ರದರ್ಶನ ನಡೆಯಿತು.

ತಾಲ್ಲೂಕಿನ‌ ಜಂಗಮಕೋಟೆ ಹೋಬಳಿ ದೇವಗಾನಹಳ್ಳಿ ಗ್ರಾಮದ ರಸ್ತೆಯ ಬಳಿ ಅನಿಲ ಟ್ರ್ಯಾಂಕರ್ ದುರಂತದ ತುರ್ತು ರಕ್ಷಣಾ ಕಾರ್ಯಾಚರಣೆ ನಡೆಸುವ ವಿಧಾನವನ್ನು ವಿವಿಧ ಇಲಾಖೆಯ ಅಧಿಕಾರಿಗಳು ಎನ್.ಡಿ.ಆರ್ ಎಫ್. ತಂಡ ನೈಜವಾದ ರೀತಿಯಲ್ಲೆ ಕಾರ್ಯಾಚರಣೆ ಮಾಡುವ ವಿಧಾನವನ್ನ ಪ್ರದರ್ಶಿಸಿ ಚಕಿತಗೊಳಿಸಿದರು. ತುರ್ತು ಪರಿಸ್ಥಿತಿಯ ಸಂದರ್ಭಗಳಲ್ಲಿ ಪ್ರಾಥಮಿಕವಾಗಿ ತಕ್ಷಣ ಯಾವೆಲ್ಲಾ ಕ್ರಮಗಳು ಕೈಗೊಳ್ಳಬೇಕಾಗುತ್ತದೆ ಜೊತೆಗೆ ಘಟನೆಗೆ ಸಂಬಂಧಿಸಿದಂತೆ ಯಾವ ರೀತಿಯಾಗಿ ತಕ್ಷಣ ಪ್ರತಿಕ್ರಿಯಿಸಬೇಕೆಂಬ ಕುರಿತು ಪ್ರಾಯೋಗಿಕವಾಗಿ ಅಣಕು ಪ್ರದರ್ಶನ ಅಚ್ಚುಕಟ್ಟಾಗಿ ನೀಡಲಾಯಿತು.

ತಹಶೀಲ್ದಾರ್ ಬಿ.ಎನ್ ಸ್ವಾಮಿ ಮಾತನಾಡಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಿಜವಾಗಿಯೂ ಈ ರೀತಿಯ ಘಟನೆಗಳು ಸಂಭವಿಸಿದಾಗ ಯಾವ ರೀತಿ ನಿರ್ವಹಣೆ ಮಾಡಬೇಕೆಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ,‌ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಸೇರಿದಂತೆ ಆರೋಗ್ಯ ಇಲಾಖೆ,‌ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಪ್ರಾಯೋಗಿಕವಾಗಿ ಅಣಕು ಪ್ರದರ್ಶನ ನೀಡಲಾಗಿದೆ. ಗ್ಯಾಸ್ ಟ್ರ್ಯಾಂಕರ್ ದುರಂತ ಸಂಭವಿಸಿದ ಸಂದರ್ಭದಲ್ಲಿ ಎನ್.ಡಿ.ಆರ್.ಎಫ್.ಸಿಬ್ಬಂದಿ, ಆರೋಗ್ಯ ಇಲಾಖೆಯು ಘಟನೆಯಲ್ಲಿ ಐದು‌ ಜನರನ್ನ ಯಾವ ರೀತಿ ರಕ್ಷಣೆ ಮಾಡುತ್ತಾರೆಂದು‌ ಮೊದಲೆ‌ಪೂರ್ವ ಸಿದ್ದತೆಗಳು‌ ಮಾಡಿಕೊಂಡು ಅಣಕು ಪ್ರದರ್ಶನ ಯಶಸ್ವಿ ಕಾರ್ಯಾಚರಣೆ ಮಾಡಲಾಗಿದೆ ಎಂದು ತಿಳಿಸಿದರು.

ಅಂತೂ ನೈಜ ಮಾದರಿಯಲ್ಲೆ ತುರ್ತು ರಕ್ಷಣೆ ಯಶಸ್ವಿ ಕಾರ್ಯಾಚರಣೆ ನಡೆಸಿ‌ ನಿಬ್ಬೆರಗಾಗುವಂತಹ ಪ್ರದರ್ಶನ ನೀಡಲಾಯಿತು.

ಈ ಕಾರ್ಯಕ್ರಮ ದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕುಮಾರ್ ತಹಶೀಲ್ದಾರ್ ಬಿ.ಎನ್ ಸ್ವಾಮಿ, ಡಿವೈಎಸ್ಪಿ, ತಾಲ್ಲೂಕು ತಾಲೂಕು ಆರೋಗ್ಯ ಅಧಿಕಾರಿ ಡಾ. ವೆಂಕಟೇಶ್ ಮೂರ್ತಿ , ಗ್ರಾಮಾಂತರ ಪೊಲೀಸ್ ಠಾಣೆಯ ಎಸ್.ಐ. ಸತೀಶ್, ಪೋಲಿಸ್ ಇಲಾಖೆ, ಕಂದಾಯ ಇಲಾಖೆ. NDRF ತಂಡ ಮತ್ತು ಅರಣ್ಯ ಇಲಾಖೆ . ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ‌

ವರದಿ: ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ 

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!