ಸರ್ಕಲ್ ಇನ್ಸ್ ಪೆಕ್ಟರ್ ಎಂ ಶ್ರೀನಿವಾಸ್ ಸುದ್ದಿಗೋಷ್ಟಿ.
ಶಿಡ್ಲಘಟ್ಟ : ರೈತರ ಟ್ರ್ಯಾಕ್ಟರ್ ಇಂಜಿನ್ ಗಳನ್ನು ಲೀಜ್ ಗೆ ತೆಗೆದುಕೊಂಡು ಮಾರಾಟ ಮಾಡಿ ಮೋಸ ಮಾಡುತ್ತಿದ್ದ ಅಂತರರಾಜ್ಯ ನಯವಂಚಕ ಖತರ್ನಾಕ್ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಆರಕ್ಷಕ ವೃತ್ತ ನಿರೀಕ್ಷಕರ ಕಛೇರಿಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀನಿವಾಸ್ ಎಂ ಅವರು ಇಂದು ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ಮಾರ್ಚ್ 15, 2024 ರಂದು ತಾಲ್ಲೂಕಿನ ಮಲ್ಲಶೆಟ್ಟಹಳ್ಳಿ ಗ್ರಾಮದ ಶ್ರೀನಿವಾಸ್ ಎಂಬುವವರು ನೀಡಿದ ದೂರಿನ ಮೇರೆಗೆ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 420 ರೀತ್ಯಾ ಪ್ರಕರಣವನ್ನ ದಾಖಲಿಸಿಕೊಂಡು ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ತನಿಖೆಗೆ ಕೈಗೊಂಡಿದ್ದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗಳನ್ನು ಕೆಲವೇ ದಿನಗಳಲ್ಲಿ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಇನ್ನು ಉಳಿದ ಆರೋಪಿಗಳಿಗೆ ಬಲೆ ಬೀಸಿದ್ದಾರೆ.
Swaraj ಕಂಪನಿಯ 07 ಟ್ರ್ಯಾಕ್ಟರ್ ಇಂಜಿನ್ ಗಳು ಹಾಗೂ Johan Deere ಕಂಪನಿಯ 03 ಐಚರ್-650 ಕಂಪನಿಯ 01 , ಸುಮಾರು 97,00,000= 00 ಲಕ್ಷ ಬೆಲೆ ಬಾಳುವ ಒಟ್ಟು 11 ಟ್ರ್ಯಾಕ್ಟರ್ ಗಳನ್ನು ಪೊಲೀಸರು ಅಮಾನತ್ತುಪಡಿಸಿಕೊಂಡಿರುತ್ತಾರೆ. ಅಂತರ ಜಿಲ್ಲೆಯ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಬಂಧಿತ ಆರೋಪಿಗಳ ವಿವರ : ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲ್ಲೂಕು ಚಾಕವೇಲು ಗ್ರಾಮದ ರಿಯಲ್ ಎಸ್ಟೇಟ್ ಕೆಲಸ ಜಯಚಂದ್ರರೆಡ್ಡಿ( 43 ವರ್ಷ) ಮತ್ತು ಕರ್ನೂಲ್ ಜಿಲ್ಲೆಯ ನಂದ್ಯಾಲ ತಾಲ್ಲೂಕು ಗೋಸುಪಾಡು ಮಂಡಲಂ, ಶ್ರೀನಿವಾಸಪುರ ಗ್ರಾಮದ ಡ್ರೈವರ್ ಕೆಲಸ ತಲಾರಿ ರಾಮಲಿಂಗೇಶ್ವರ ರಾವ್ (39 ವರ್ಷ ) ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದರು ಮಾಹಿತಿ ತಿಳಿಸಿದರು.
ಚಿಕ್ಕಬಳ್ಳಾಪುರ ಪೊಲೀಸ್ ಅಧೀಕ್ಷಕರಾದ ನಾಗೇಶ್ ಅವರ ಸಾರಥ್ಯ ಉಪ ಅಧೀಕ್ಷಕರಾದ ರಾಜಾ ಇಮಾಮ್ ಖಾಸಿಂ, ಉಪಾಧೀಕ್ಷಕರಾದ ಮುರಳೀದರ್ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀನಿವಾಸ್ ಎಂ. ಹಾಗೂ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ಯಾಮಲಾ, ನಾಗರಾಜ ಎಂ. ರವರ ನೇತೃತ್ವದ ತಂಡದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಸಿಬ್ಬಂದಿ ನರಸಿಂಹಯ್ಯ, ನಂದಕುಮಾರ್, ಮುರಳಿಕೃಷ್ಣ, ಕೃಷ್ಣಪ್ಪ, ಚಂದ್ರಶೇಖರ್, ಸೇರಿದಂತೆ ತಾಂತ್ರಿಕ ಸಿಬ್ಬಂದಿಯನ್ನ ಶ್ಲಾಘಿಸಿದ್ದಾರೆ.
ಈ ಸಂದರ್ಭದಲ್ಲಿ ದಿಬ್ಬೂರಹಳ್ಳಿ ಪಿ.ಎಸ್.ಐ. ಶ್ಯಾಮಲಾ ಹಾಜರಿದ್ದರು.
Good work police department