Monday, December 23, 2024
Homeಮನರಂಜನೆ150 ರೂಪಾಯಿಗೆ ಪೋಟೋ ಸಿನಿಮಾ

150 ರೂಪಾಯಿಗೆ ಪೋಟೋ ಸಿನಿಮಾ

ಕೋವಿಡ್ ಲಾಕ್ ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರು ಅನುಭವಿಸಿದ ಕಷ್ಟಗಳನ್ನು ಬಿಚ್ಚಿಡುವ ಫೋಟೋ ಸಿನಿಮಾ ಮಾರ್ಚ್ 15ರಂದು ಬಿಡುಗಡೆಯಾಗುತ್ತಿದೆ.

ಖಾಸಗಿ ಹೋಟೆಲ್‌ನಲ್ಲಿ ಫೋಟೋ ಹಾಡು ಬಿಡುಗಡೆ ಮಾಡಿರುವ ಈ ಚಿತ್ರ ಪ್ರೆಸೆಂಟ್ ಮಾಡುತ್ತಿರುವ ಪ್ರಕಾಶ್ ರಾಜ್ ಹಾಗೂ ನಿರ್ದೇಶಕ ಉತ್ಸವ ಸಿನಿಮಾ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಪ್ರಕಾಶ್ ರಾಜ್ ಮಾತನಾಡಿ, ನಾನು ಏನು ದೊಡ್ಡ ಕೆಲಸ ಮಾಡಿಲ್ಲ. ಈ ತರ ಕೆಲಸ ಮಾಡಿಸಿಕೊಳ್ಳುವ, ಈ ತರ ಸಾಥ್ ಕೊಡುವ ಅರ್ಹತೆ ಆ ಸಿನಿಮಾಗೆ ಇದೆ. ನಾನು ಸಿನಿಮಾ ನೋಡಿದೆ. ಬಹಳ ದಿನಗಳಿಂದ ನೋಡಬೇಕಿತ್ತು.

ಹಲವಾರು ಕಾರಣಗಳಿಂದ ನೋಡಲು ಆಗಿರಲಿಲ್ಲ. ಉತ್ಸವ್ ಹಾಗೂ ಅವರ ತಂಡದವರು ಪ್ರಕಾಶ್ ರೈಗೆ ತೋರಿಸಬೇಕು ಅಂದಾಗ, ನಮಗೆ ಸಾರ್ಥಕ ಅನಿಸುತ್ತದೆ. ಸಿನಿಮಾ ನೋಡಿದ ಬಳಿಕ ಹದಿನೈದು ನಿಮಿಷ ಮಾತು ಬರಲಿಲ್ಲ. ಕೆಲವೊಮ್ಮೆ ಯಾಕೆ ಅಳುತ್ತೇವೆ ಅಂತಾ ಗೊತ್ತಿಲ್ಲ. ಪ್ರಾಮಾಣಿಕ ಪ್ರಯತ್ನಕ್ಕೆ ಹೇಗೆ ರಿಯಾಕ್ಟ್ ಮಾಡಬೇಕು ಅನ್ನುವುದು ಗೊತ್ತಿರಲಿಲ್ಲ. ಈ ಸಿನಿಮಾ ಥಿಯೇಟರ್‌ಗೆ ಬರ್ತಿದೆ. ಒಬ್ಬ ಯುವಕರ ತಂಡ ಮಾಡಿರುವ ಸಿನಿಮಾ. ಈ ರೀತಿ ಯುವಕರು ಹಾಗೂ ಈ ರೀತಿ ಸಿನಿಮಾಗಳು ಬೆಳೆಯಬೇಕು. ವರ್ಲ್ಡ್ ಸಿನಿಮಾದಲ್ಲಿ ಕಂಟೆಂಟ್ ಮುಖ್ಯವಾಗಿದೆ. ಸಿನಿಮಾ ಇದೇ 15ಕ್ಕೆ ಬಿಡುಗಡೆಯಾಗುತ್ತಿದೆ. ಎಲ್ಲಾ ಮಲ್ಬಪ್ಲೆಕ್ಸ್ ನಲ್ಲಿ ಚಿತ್ರ ಬಿಡುಗಡೆ ಮಾಡುತ್ತೇವೆ. ಸಿಂಗಲ್ ಥಿಯೇಟರ್‌ನಲ್ಲಿ ಅಲ್ಲ. 22ರ ನಂತರ ಉತ್ತರ ಕರ್ನಾಟಕದ ಸಿಂಗಲ್ ಥಿಯೇಟರ್‌ನಲ್ಲಿ ರಿಲೀಸ್ ಮಾಡುತ್ತೇವೆ. ಫೋಟೋ ಸಿನಿಮಾ ಎಲ್ಲರಿಗೆ ತಲುಪಲು 150ರೂ ಟಿಕಟ್ ರೇಟ್ ಫಿಕ್ಸ್ ಮಾಡಿದ್ದೇವೆ ಎಂದರು.

ನಿರ್ದೇಶಕ ಉತ್ಸವ್ ಮಾತನಾಡಿ ಪೊಟೋ ಸಿನೆಮಾ ರಿಲೀಜ್ ಮಾಡುವುದು ಹೇಗೆ ಎಂಬ ಪ್ರಶ್ನೆ ಇತ್ತು. ಪ್ರಕಾಶ್ ಸರ್ ಬಂದಿದ್ದು, ನಮಗೆ ದೊಡ್ಡ ಶಕ್ತಿ, ಉತ್ಸವ್‌ಗೆ ಶಕ್ತಿ ಆಗಲ್ಲ, ನನ್ನ ತರ ಸಿನಿಮಾ ಮಾಡುವವರಿಗೆ ನಂಬಿಕೆ. ಮುಂದಿನ ಸಿನಿಮಾ ಮಾಡಲು ಪ್ರಕಾಶ್ ಸರ್ ಧೈರ್ಯ ಕೊಟ್ಟಿದ್ದಾರೆ ಎಂದರು.

ನಿಮ್ಮ ಸಂಗ ಎಂಬ ಜನಪದ ಶೈಲಿಯ ಹಾಡು ಫೋಟೋ ಸಿನಿಮಾದ ಅಂತರಂಗವನ್ನು ಬಿಚ್ಚಿಟ್ಟಿದೆ. ನಿರ್ದೇಶಕ ಉತ್ಸವ್ ಸಾಹಿತ್ಯ ಬರೆದಿರುವ ಹಾಡಿಗೆ ಶಿಲಾ ಮುಡಿ ಧ್ವನಿಯಾಗಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಎದುರಿಸಿ ಕಷ್ಟಗಳನ್ನು ಹಾಡಿನಲ್ಲಿ ಕಟ್ಟಿಕೊಡಲಾಗಿದೆ.

ಫೋಟೋ ಸಿನಿಮಾವನ್ನು ನಿರ್ದಿಗಂತ’ದ ಮೂಲಕ ಪ್ರಕಾಶ್ ರಾಜ್ ಪ್ರೆಸೆಂಟ್ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ಉತ್ಸವ್ ಗೋನವಾರ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಮಸಾರಿ ಟಾಕೀಸ್’ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಆಗಿದೆ.

ಮಹಾದೇವ ಹಡಪದ್, ಜಹಾಂಗೀರ್, ಸಂಧ್ಯಾ ಅರಕೆರೆ. ಮತ್ತು ವೀರೇಶ್ ಗೊನ್ಸಾರ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ದಿನೇಶ್ ವಿನಾಕರನ್ ಛಾಯಾಗ್ರಹಣ, ರವಿ ಹಿರೇಮಠ ಶಬ್ದ ವಿನ್ಯಾಸ, ಶಿವರಾಜ್ ಮೆಹೂ ಸಂಕಲನ ಮಾಡಿದ್ದಾರೆ. ಮಾರ್ಚ್ 15ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!