ನವದೆಹಲಿ: ದೇಶದಲ್ಲಿ ಲೋಕಸಭೆ ಚುನಾವಣೆಗೆ ದಿನ ಗಣನೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ಪಕ್ಷಗಳ ಚಟುವಟಿಕೆಗಳು ಗರಿಗೆದರಿವೆ. ಪ್ರಚಾರದ ಕಾವು ಜೋರಾಗಿಯೇ ಏರಲಿದ್ದು, ಅದಕ್ಕೆ ಬೇಕಾದ ಪೂರಕ ಸೌಕರ್ಯಗಳಿಗೆ ಬೇಡಿಕೆ ಹೆಚ್ಚುತ್ತಿದೆ.
ಪ್ರಚಾರದ ಸುಲುವಾಗಿ ರಾಜಕೀಯ ನಾಯಕರನ್ನು ಗಗನದಲ್ಲೆ ಹೊತ್ತಿಕೊಂಡು ಹಾರುವ ಹೆಲಿಕಾಪ್ಟರುಗಳಿಗೂ ಎಲ್ಲಿಲ್ಲದ ಬೇಡಿಕೆ ಹೆಚ್ಚಾಗಿದೆ. ತೆಲಂಗಾಣದಲ್ಲಿ ಮುಂಬೈ ಮೂಲದ ವಿಮಾನಯಾನ ಸಂಸ್ಥೆ ಫೈಯಿಂಗ್ ಬರ್ಡ್‌ಗೆ ಬೇಡಿಕೆ ಹೆಚ್ಚಿದೆ. ಈ ಸಂಸ್ಥೆಯು 2019 ರಲ್ಲಿ ಅವಳಿ ಎಂಜಿನ್ ಹೆಲಿಕಾಪ್ಟರ್‌ಗಳಿಗೆ ಗಂಟೆಗೆ 55,000 ರೂ.ನಿಂದ 1.3 ಲಕ್ಷ ರೂ. ವರೆಗೆ ಬಾಡಿಗೆ ನಿಗದಿಪಡಿಸಿತ್ತು. ಸಿಂಗಲ್ ಇಂಜಿನ್ ಹೆಲಿಕಾಪ್ಟರ್‌ಗಳಿಗೆ ಗಂಟೆಗೆ 1.50-ರೂ.ನಿಂದ 1.75 ಲಕ್ಷ ರೂ. ಬೆಲೆ ನಿಗದಿಪಡಿಸಿತ್ತು.
ಈ ಬಾರಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಾಡಿಗೆ ವಿಮಾನ ಮತ್ತು ಹೆಲಿಕಾಪ್ಟರುಗಳ ಬೇಡಿಕೆ ಶೇ 40ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೆಲಿಕಾಪ್ಟರ್‌ಗಳು ಗ್ರಾಮೀಣ ಪ್ರದೇಶಗಳಿಗೆ ತ್ವರಿತವಾಗಿ ತಲುಪುವ ಸಾಮರ್ಥ್ಯದಿಂದಾಗಿ ಹೆಚ್ಚು ಜನಪ್ರಿಯವಾಗುವ ನಿರೀಕ್ಷೆಯಿದೆ. ಚಾರ್ಟರ್ಡ್ ವಿಮಾನ ಮತ್ತು ಹೆಲಿಕಾಪ್ಟರ್ ಸೇವೆಗಳಿಗೆ ಗಂಟೆಯ : ಬಾಡಿಯಲ್ಲಿ ವ್ಯತ್ಯಾಸವಿದೆ. ಚಾರ್ಟರ್ಡ್ ಏರ್ಕಾಗಳಿಗೆ ಗಂಟೆಗೆ 4.5 ಲಕ್ಷದಿಂದ 5.25 ಲಕ್ಷ ರೂಪಾಯಿ ವೆಚ್ಚವಾಗಲಿದ್ದು, ಹೆಲಿಕಾಪ್ಟರ್‌ಗಳಿಗೆ ಗಂಟೆಗೆ 1.5 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ತಜ್ಣರು ಅಂದಾಜಿಸಿದ್ದಾರೆ.
ಈ ಬೇಡಿಕೆಯಿಂದಾಗಿ, ಅನೇಕರು ಈಗಾಗಲೇ ಚಾರ್ಟರ್ಡ್ ವಿಮಾನಗಳು ಮತ್ತು ಹೆಲಿಕಾಪ್ಟರ್ ಗಳನ್ನು ಬಾಡಿಗೆಗೆ ಪಡೆದಿದ್ದಾರೆ. ಸದ್ಯ ನಾನ್ ಶೆಡ್ಯೂಲ್ಡ್ ಆಪರೇಟರ್ಸ್ ಪರ್ಮಿಟ್ ಹೊಂದಿರುವ ಸಂಸ್ಥೆಗಳು 3 ರಿಂದ 37 ಆಸನ ಸಾಮರ್ಥದೊಂದಿಗೆ 450 ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ನಿರ್ವಹಿಸುತ್ತವೆ. ಮುಂಬರುವ ಚುನಾವಣೆಯಲ್ಲಿ ಹೆಲಿಕಾಪ್ಟರ್ / ಚಾರ್ಟರ್ಡ್ ವಿಮಾನ ವಹಿವಾಟು 1.20 ಲಕ್ಷ ಕೋಟಿ ರೂ.ಗೆ ತಲುಪುವ ನಿರೀಕ್ಷೆಯಿದೆ.
2019-20ರ ಹಣಕಾಸು ವರ್ಷಕ್ಕೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವಾರ್ಷಿಕ ಲೆಕ್ಕ ಪರಿಶೋಧನೆಯಲ್ಲಿ ಆಡಳಿತಾರೂಢ ಬಿಜೆಪಿ ಹೆಲಿಕಾಪ್ಟರ್ ಅಥವಾ ವಿಮಾನ ಸೇವೆಗಳಿಗೆ 250 ಕೋಟಿ ರೂ.ವರೆಗೆ ಖರ್ಚು ಮಾಡಿದೆ ಎಂದು ಹೇಳಿಕೊಂಡಿತ್ತು. ಕಾಂಗ್ರೆಸ್ ಪಕ್ಷವು ಆ ವರ್ಷ ಚುನಾವಣಾ ಪ್ರಚಾರಕ್ಕಾಗಿ 126 ಕೋಟಿ ರೂ.ಗಳನ್ನು ಖರ್ಚು ಮಾಡಿರುವುದಾಗಿ ಹೇಳಿತ್ತು