Wednesday, January 29, 2025
Homeಜಿಲ್ಲೆವಾಹನ ಸವಾರರು ಸಂಚಾರಿ ನಿಯಮಗಳು ತಪ್ಪದೇ ಪಾಲಿಸಿ : ಡಿವೈಎಸ್ಪಿ .ಪಿ ಮುರಳಿಧರ್

ವಾಹನ ಸವಾರರು ಸಂಚಾರಿ ನಿಯಮಗಳು ತಪ್ಪದೇ ಪಾಲಿಸಿ : ಡಿವೈಎಸ್ಪಿ .ಪಿ ಮುರಳಿಧರ್

ಪೊಲೀಸ್ ಇಲಾಖೆಯಿಂದ ದಿಬ್ಬೂರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಅಭಿಯಾನ.

‘ಸಂವಿಧಾನ ಶಕ್ತಿ ನ್ಯೂಸ್’ ಶಿಡ್ಲಘಟ್ಟ : ವಾಹನ ಸವಾರರು ತಪ್ಪದೇ ಹೆಲ್ಮೆಟ್ ಧರಿಸಿ, ಮದ್ಯಸೇವನೆ ಮಾಡಿ ವಾಹನಗಳು ಚಾಲನೆ ಮಾಡುವುದು ಅಪರಾಧ. ಇದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ದಂಡ ವಿಧಿಸಲಾಗುತ್ತದೆ. ನಿಮ್ಮ ಕುಟುಂಬವು ನಿಮ್ಮ ಮೇಲೆ ಅವಲಂಭಿತವಾಗಿರುತ್ತದೆ. ಪೊಲೀಸರು ದಂಡ ಹಾಕುತ್ತಾರೆಂದು ಹೆಲ್ಮೆಟ್ ಹಾಕುವುದಕ್ಕಿಂದ ನಿಮ್ಮ‌ ಕುಟುಂಬದವರಿಗಾಗಿ ನಿಮ್ಮ ಜೀವದ ಸುರಕ್ಷತೆಗಾಗಿ ತಪ್ಪದೇ ಸಂಚಾರಿ ನಿಯಮಗಳು ಪಾಲಿಸಿ ಎಂದು ಚಿಂತಾಮಣಿ ಉಪ ವಿಭಾಗದ ಡಿವೈಎಸ್ಪಿ. ಪಿ ಮುರಳಿಧರ್ ತಿಳಿಸಿದರು.

ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ (ಇಂದು) ಹಮ್ಮಿಕೊಂಡಿದ್ದ “ರಸ್ತೆ ಸುರಕ್ಷಾ ಸಪ್ತಾಹ” ಅಭಿಯಾನದ ಮೂಲಕ ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯಿಂದ ಅರಿವು ಮೂಡಿಸಲಾಯಿತು.

ಈ ವೇಳೆಯಲ್ಲಿ ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿ ರಾತ್ರಿ ವೇಳೆ ಮೋಟರ್ ಸೈಕಲ್ ಸವಾರರು ವಾಹನ ಚಾಲನೆ ಮಾಡಿಕೊಂಡು ಹೋಗುವಂತಹ ಸಂದರ್ಭದಲ್ಲಿ ರೇಡಿಯಂ ಜಾಕೆಟ್ ಧರಿಸಿ, ಇದರಿಂದ ಹಿಂಬಂದಿಯ ಸವಾರರಿಗೆ ಮುಂದೆ ಹೋಗುತ್ತಿರುವ ವಾಹನಗಳ ಬಗ್ಗೆ ಗೊತ್ತಾಗಲಿದೆ. ಜೊತೆಗೆ ಟ್ರ್ಯಾಕ್ಟರ್ ಹೊಂದಿರುವ ರೈತರು ಹಿಂಬಂದಿಯ ಟ್ರೈಲರ್ ಗೆ ರೇಡಿಯಮ್ ಸ್ಟಿಕ್ಕರ್ ಅಳವಡಿಸಬೇಕು. ರೇಡಿಯಮ್ ಇಲ್ಲದೆ ಇದ್ದರೆ ಅಪಘಾತಗಳು ಸಂಭವಿಸುತ್ತವೆ. ಜೊತೆಗೆ ಮದ್ಯಪಾನ ಮಾಡಿಕೊಂಡು ವಾಹನೆ ಚಾಲನೆ ಮಾಡುವುದು ಅಪರಾಧ‌. ಪೊಲೀಸರ ಕೈಗೆ ಸಿಕ್ಕಾಕಿಕೊಂಡಾಗ ಯಾರಿಂದಲೂ ಪೋನ್ ಕರೆಗಳು ಮಾಡಿಸುವುದು ಅಗತ್ಯವಿಲ್ಲ. ಕಾನೂನುಗಳು ತುಂಬಾ ಕಠಿಣವಾಗಿವೆ. 15 ಸಾವಿರದವರೆಗೂ ದಂಡದ ಪ್ರಮಾಣ ಇದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ ಜೊತೆಗೆ ನಿಮ್ಮ ಜೀವದ ಸುರಕ್ಷತೆಗಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ಪ್ರತಿಯೊಬ್ಬರೂ ಸಂಚಾರಿ ನಿಯಮಗಳು ತಪ್ಪದೆ ಪಾಲಿಸಿ ಎಂದು ಮನವಿ ಮಾಡಿದರು.

ಇನ್ನೂ ಡ್ರೈವಿಂಗ್ ಲೈಸೆನ್ಸ್ (ವಾಹನ ಚಾಲನಾ ಪರವಾನಗಿ) ಹೊಂದಿಲ್ಲದವರು ದಾಖಲೆಗಳು ತೆಗೆದುಕೊಂಡು ಬಂದು ಠಾಣೆಯಲ್ಲಿ ನೀಡಿದರೆ, ಮದ್ಯವರ್ತಿಗಳ ಹಾವಳಿ ಇಲ್ಲದೆ ಪೊಲೀಸ್ ಇಲಾಖೆಯಿಂದ ಆರ್.ಟಿ.ಓ ಕಛೇರಿಯಿಂದ ಡ್ರೈವಿಂಗ್ ಲೈಸೆನ್ಸ್ ಉಚಿತವಾಗಿ ಕೊಡಿಸಲಾಗುವುದು ಎಂದು ತಿಳಿಸಿದರು.

ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಿಂದ ಸುಮಾರು 32 ಮಂದಿ ಸಾರ್ವಜನಿಕರಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸಲಾಯಿತು. ಠಾಣೆಯ ಇನ್ಸ್ ಪೆಕ್ಟರ್ ಶ್ಯಾಮಲ ಅವರ ಕಾರ್ಯವನ್ನ ಶ್ಲಾಘಿಸಿದರು.

ಸರ್ಕಲ್ ಇನ್ಸ್ ಪೆಕ್ಟರ್ ಎಂ. ಶ್ರೀನಿವಾಸ್ ಮಾತನಾಡಿ ಇತ್ತೀಚೇಗೆ ದೇಶ, ರಾಜ್ಯ, ಜಿಲ್ಲೆಯಲ್ಲಿ ಹೆಚ್ಚು ರಸ್ತೆ ಅಪಘಾತಗಳಿಂದ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆಯು ಸಾರ್ವಜನಿಕರಿಗೆ ಸಂಚಾರಿ ನಿಯಮಗಳ‌ ಕುರಿತು ಹಾಗೂ ಕಾನೂನು ಅರಿವು ಮೂಡಿಸಲಾಗುತ್ತಿದೆ. ಮಕ್ಕಳ ಕೈಗೆ ವಾಹನಗಳು ಕೊಡಬಾರದು ಅಪಘಾತಗಳು ಸಂಭವಿಸಿದರೆ, ಪೋಷಕರ ಮೇಲೆ ಪ್ರಕರಣ ದಾಖಲಾಗುತ್ತದೆ. ಪ್ರತಿಯೊಬ್ಬ ವಾಹನ ಸವಾರರು ಡ್ರೈವಿಂಗ್ ಲೈಸೆನ್ಸ್ , ಆರ್ ಸಿ ದಾಖಲೆಗಳು ಮತ್ತು ಇನ್ಶೂರೆನ್ಸ್ ಹೊದಿರಬೇಕು. ಇನ್ಶೂರೆನ್ಸ್ ಇಲ್ಲದೆ ಅಪಘಾತಗಳು ಸಂಭವಿಸಿದಾಗ ನಿಮಗೆ ಯಾವುದೇ ರೀತಿಯ ಪರಿಹಾರ ಸಿಗುವುದಿಲ್ಲ. ಅಪಘಾತದಲ್ಲಿ ಪ್ರಾಣ ಹಾನಿಯಾದಲ್ಲಿ ಪರಿಹಾರ ಕೊಡಬೇಕಾಗುತ್ತದೆ. ನ್ಯಾಯಾಲಯದಲ್ಲಿ ಜಮೀನು ಆಸ್ತಿ – ಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಪ್ರತಿಯೊಬ್ಬರು ಕಾನೂನುಗಳು ಪಾಲಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ದಿಬ್ಬೂರಹಳ್ಳಿ ಠಾಣೆಯ ಪಿಎಸ್ಐ ಶ್ಯಾಮಲ, ಎಎಸ್ಐ ಅನಂತ್ ಕುಮಾರ್, ದಪೇದರ್ ಮಂಜುನಾಥ್, ನರಸಿಂಹಯ್ಯ, ಶ್ರೀನಿವಾಸ್, ಕೃಷ್ಣಪ್ಪ, ಪೊಲೀಸ್ ಸಿಬ್ಬಂದಿ ಶ್ರೀನಿವಾಸ ಮೂರ್ತಿ, ಪ್ರತಾಪ್, ಕಿರಣ್, ಕೃಷ್ಣ ಸೇರಿದಂತೆ , ಸಾರ್ವಜನಿಕರು ವಾಹನ ಸವಾರರು ಇದ್ದರು.

ವರದಿ : ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!