Wednesday, January 29, 2025
Homeಜಿಲ್ಲೆಮೈಕ್ರೋ ಫೈನಾನ್ಸ್ ವಿರುದ್ಧ ಕ್ರಮಕ್ಕೆ ಒತ್ತಾಯ: ದ.ಸಂ.ಸ. ಪ್ರತಿಭಟನೆ.

ಮೈಕ್ರೋ ಫೈನಾನ್ಸ್ ವಿರುದ್ಧ ಕ್ರಮಕ್ಕೆ ಒತ್ತಾಯ: ದ.ಸಂ.ಸ. ಪ್ರತಿಭಟನೆ.

‘ಸಂವಿಧಾನ ಶಕ್ತಿ ನ್ಯೂಸ್ ‘ ಚೇಳೂರು ; ತಾಲ್ಲೂಕಿನಾದ್ಯಂತ ದಲಿತ ಕೇರಿಗಳಲ್ಲಿ ಮೂಲಭೂತ ಸೌಲಭ್ಯಗಳು ಸೇರಿದಂತೆ, ಬಡ ಕೂಲಿ ಕಾರ್ಮಿಕರನ್ನು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಅನ್ಯಾಯಕಾರಿ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕರಾದ ಜಿ ನರಸಿಂಹ ಒತ್ತಾಯಿಸಿದರು.

ತಾಲೂಕು ಕಚೇರಿ ಮುಂಬಾಗ ಸೋಮವಾರದಂದು ದಲಿತರ ಮೂಲಭೂತ ಸೌಲಭ್ಯಗಳು ಮತ್ತು ದಲಿತರ ಮೇಲಿನ ದೌರ್ಜನ್ಯಗಳ ಬಗ್ಗೆ ಜಿಲ್ಲಾಡಳಿತ ನಿರ್ಲಕ್ಷ್ಯ ಹಾಗೂ ದಲಿತ ವಿರೋಧಿ ನೀತಿಯನ್ನು ಖಂಡಿಸಿ,ಜಿಲ್ಲಾದ್ಯಂತ ಏಕ ಕಾಲದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನುದ್ದೇಶಿಸಿ ಅವರು ಮಾತನಾಡಿದರು

ನೆಮ್ಮದಿಯ ಬದುಕಿಗಾಗಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಹಣಕಾಸು ವಹಿವಾಟಿನ ಸಂಪೂರ್ಣ ಪರಿಶೀಲನೆ ಮಾಡಬೇಕು.ಗ್ರಾಮಗಳಲ್ಲಿ ಅನಧಕೃತವಾಗಿ ನಡೆಯುತ್ತಿರುವ ತಿಂಗಳ ಮೀಟರ್ ಬಡ್ಡಿಯ ಚೀಟಿ ವ್ಯವಹಾರ ಅಸಹ್ಯ ಶೋಷಣೆಯನ್ನು ತಕ್ಷಣವೇ ನಿಲ್ಲಿಸಬೇಕು. ಬಡ ಕೂಲಿ ಕಾರ್ಮಿಕರಿಗೆ ಸಮರ್ಥ ಉಳಿತಾಯ ಸಾಧನೆಗಾಗಿ ನೇರ ಹಣಕಾಸು ನೆರವು ನೀಡಬೇಕು ಎಂದರು.

ಮುಖಂಡ ಗೋಲ್ಲಪಲ್ಲಿ ಮಂಜುನಾಥ ಮಾತನಾಡಿ ಕಳೆದ ನಾಲ್ಕು ವರ್ಷಗಳಿಂದ ತಾಲುಕು ಘೋಷನೆಯಾಗಿದೆ ಹೊರೆತು ಯಾವುದೆ ಕಚೇರಿಗಳು ಪ್ರಾರಂಭವಾಗಿಲ್ಲ,. ಕಚೇರಿಗಳಲ್ಲಿ ಬಡವರ ಕೆಲಸಗಳು ನಡೆಯುತ್ತಿಲ್ಲ, ನಿವೇಶನ ರಹಿತರು ಹಾಗೂ ಭೂಮಿ ರಹಿತರು ಈಗಾಗಲೆ ಅರ್ಜಿ ಸಲ್ಲಿಸಿದ್ದು ಯಾವುದೇ ಭೂಮಿ ಮಂಜೂರು ಮಾಡಿರುವುದಿಲ್ಲ,ಹಲವು ಗ್ರಾಮಗಳಲ್ಲಿ ದಲಿತರು ಸತ್ತರೆ ಕರೆ ಕುಂಟೆಗಳಲ್ಲಿ ಅಂತ್ಯ ಕ್ರಿಯೆ ಮಾಡುವ ಸ್ಠಿತಿ ಎದುರಾಗಿದೆ, ಆದರೆ ಅಧಿಕಾರಿಗಳು ಮಾತ್ರ ದಲಿತರಿಗೆ ಸ್ಮಶಾನ ಭೂಮಿ ಗುರುತಿಸಿ ಕೊಡುವಲ್ಲಿ ವಿಫಲವಾಗಿದೆ ಎಂದರು.

ಡಿವಿ ವೆಂಕಟೇಶ್ ಮಾತನಾಡಿ ದಲಿತ ಕೆರಿಗಳಲ್ಲಿ ಮೂಲಭೂತ ಸೌಲಭ್ಯಗಳು ಸೇರಿದಂತೆ ಸುಮಾರು 25 ಬೇಡಿಕೆಗಳಿಗೆ ನ್ಯಾಯ ಸಿಗೋತನಕ ಹೋರಾಟ ಮುಂದುವರಿಸಲಾಗುವುದು ಎಂದರು.

ಮುಖಂಡರಾದ ಟಿ.ಎನ್ ಶ್ರೀನಿವಾಸ,ಆರ್ ನರಸಿಂಹಪ್ಪ,ಎಂ.ಈಶ್ವರ,ದುಬಾಯ್ ಶ್ರೀನಿವಾಸ,ಆರ್ ವಿ ವೆಂಕಟೇಶ್,ಪುಲ್ಲಗಲ್ಲು ವೆಂಕಟರವಣಪ್ಪ,ಪುಲ್ಲಗಲ್ಲು ನಾರಾಯಣಸ್ವಾಮಿ,ನರೇಶ್,ಗಂಗುಲಪ್ಪ,ಅಂಕಲಪ್ಪ, ಭಾಗವಹಿಸಿದ್ದರು.

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!