ಶಿಡ್ಲಘಟ್ಟ : ರೈಲು ಹಳಿಗೆ ತಲೆಕೊಟ್ಟು ಹಾಡ ಹಗಲೇ ವ್ಯಕ್ತಿಯೊರ್ವ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.
ಇಂದು (ಮಂಗಳವಾರ) ರೈಲ್ವೆ ನಿಲ್ದಾಣದ ಸಮೀಪದ ರೈಲ್ವೆ ಹಳಿಗಳ ಮೇಲೆ ರುಂಡ- ಮುಂಡ ಬೇರೆ ಬೇರೆಯಾಗಿ ವ್ಯಕ್ತಿಯೊಬ್ಬರ ಮೃತ ದೇಹ ಪತ್ತೆಯಾಗಿದ್ದು. ಮದ್ಯಾಹ್ನ ಪಾಳಿಯ ರೈಲಿಗೆ ತಲೆಗೆ ಕೊಟ್ಟು ಜೀವ ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ.
ಮೃತ ದೇಹ ರೈಲು ಹಳಿಗಳ ಮೇಲೆ ಕಂಡುಬಂದಿದ್ದು ಸಾರ್ವಜನಿಕರು ಗಮನಿಸಿ ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದು, ಶಿಡ್ಲಘಟ್ಟ ಬೈಪಾಸ್ ರಸ್ತೆಯ ನಿವಾಸಿ ಶೋಭನ್ ಬಾಬು (35 ವರ್ಷ) ಬಿನ್ ಸತ್ಯನಾರಾಯಣಪ್ಪ ಎಂದು ತಿಳಿದು ಬಂದಿದ್ದು, ಮೃತರು ಇಬ್ಬರು ಚಿಕ್ಕ ಹೆಣ್ಣು ಮಕ್ಕಳು, ಹೆಂಡತಿ, ಮತ್ತು ನಾಲ್ಕು ಅಣ್ಣ ತಮ್ಮಂದಿರನ್ನು ಹೊಂದಿದ್ದಾರೆ.
ಬೆಂಗಳೂರು ನಿಂದ – ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಮಾರ್ಗವಾಗಿ ಬಂಗಾರ ಪೇಟೆ, ಕೋಲಾರಕ್ಕೆ ತೆರಳುವ ಮದ್ಯಾಹ್ನ ಪಾಳಿಗೆ ಸಂಚರಿಸುವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪ್ರಾಥಮಿಕವಾಗಿ ತಿಳಿದು ಬಂದಿದೆ.
ಮೃತ ವ್ಯಕ್ತಿ ಮರಗೆಲಸ ( ಕಾರ್ಪೆರಂಟರ್) ಮಾಡುತ್ತಿದ್ದು, ಸುಮಾರು 15 ರಿಂದ 20 ಲಕ್ಷದವರೆಗೂ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಕುಟುಂಬದವರು ಜಮೀನು ಮಾರಾಟ ಮಾಡಿ ಸಾಲ ತೀರಿಸುವುದಾಗಿ ತಿಳಿಸಿದ್ದರು ಎನ್ನಲಾಗಿದ್ದು, ಆದರೆ ಸಾಲಗಾರರ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಪೊಲೀಸರ ತನಿಖೆಯಿಂದ ಪ್ರಕರಣದ ಸತ್ಯಾ ಸತ್ಯತೆ ತಿಳಿದು ಬರಬೇಕಾಗಿದೆ. ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.