Monday, December 23, 2024
Homeಜಿಲ್ಲೆಧ್ಯಾನದಿಂದ ಉತ್ತಮ ಆರೋಗ್ಯ : ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ

ಧ್ಯಾನದಿಂದ ಉತ್ತಮ ಆರೋಗ್ಯ : ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ

ಜಿಲ್ಲಾಡಳಿತದಿಂದ ವಿಶ್ವ ಧ್ಯಾನ ದಿನಾಚರಣೆ ಕಾರ್ಯಕ್ರಮ.

ಚಿಕ್ಕಬಳ್ಳಾಪುರ : ಪ್ರತಿಯೊಬ್ಬರು ಪ್ರತಿದಿನ 10 ನಿಮಿಷ ಧ್ಯಾನ ಮಾಡುವುದರಿಂದ ಆರೋಗ್ಯದ ಮೇಲೆ ಹತ್ತು ಹಲವು ಉಪಯೋಗಗಳು ಲಭಿಸಲಿವೆ ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಅವರು ತಿಳಿಸಿದರು.

ಶನಿವಾರದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಹಾರ್ಟ್ ಫುಲ್ ನೆಸ್ ಸಂಸ್ಥೆಯ ಇವರ ಸಂಯುಕ್ತಾಶ್ರಯದಲ್ಲಿ ನಗರದ ಸರ್.ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದ ಕಬ್ಬಡಿ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ “ವಿಶ್ವ ಧ್ಯಾನ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗರ್ಭಾವಸ್ಥೆಯ ಶಿಶುವಿನಿಂದ ಜೀವಿತದ ಅಂತ್ಯದವರೆಗೂ ಎಲ್ಲರಿಗೂ ಧ್ಯಾನದ ಅತ್ಯವಶ್ಯಕತೆ ಇದೆ. ಧ್ಯಾನದ ಪೂರ್ವದಲ್ಲಿ ಹಾಗೂ ಧ್ಯಾನಾವಸ್ಥೆಯ ಅವಧಿಯಲ್ಲಿ ಮತ್ತು ಧ್ಯಾನದ ನಂತರದಲ್ಲಿ ವಿಭಿನ್ನ ಅನುಭವ ನಮಗೆ ಗಮನಕ್ಕೆ ಬರಲಿದೆ. ಅದು ಅಘಾದವಾದ ಅದಮ್ಯ ಶಕ್ತಿಯನ್ನು ನೀಡುತ್ತದೆ. ಧ್ಯಾನ ಮಾಡುವುದರಿಂದ ಮಾನಸಿಕ ಸ್ಪಷ್ಟತೆ, ಭಾವನಾತ್ಮಕ ಸ್ಥಿರತೆ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಸಕ್ರಿಯಗೊಳಿಸುತ್ತದೆ. ವೈಯಕ್ತಿಕ ಪ್ರಯೋಜನಗಳನ್ನು ಮೀರಿ, ಸಾಮೂಹಿಕ ಧ್ಯಾನವು ಮಾನಸಿಕ ಶಾಂತಿಯನ್ನು ನೀಡುತ್ತದೆ. ಮಾನಸಿಕ ಮತ್ತು ದೈಹಿಕ ಒತ್ತಡವನ್ನು ನಿವಾರಿಸಿ ಪ್ರಶಾಂತತೆಯನ್ನಾಗಿ ಮೂಡಿಸುತ್ತದೆ ಎಂದರು.

ನಿರ್ಧಾರ ತೆಗೆದುಕೊಳ್ಳಲು ಧ್ಯಾನ ಸೂಕ್ತ
ಮನಸ್ಸಿನ ಭಾವನೆಯ ಏರುಪೇರುಗಳನ್ನು ಸಮಾಧಾನದ ಸ್ಥಿತಿಯಲ್ಲಿ ಗ್ರಹಿಸಬಹುದು. ಸಮಾಧಾನದ ಅವಸ್ಥೆಗೆ ಧ್ಯಾನದ ಅಗತ್ಯವಿರುತ್ತದೆ. ಸಮಚಿತ್ತದ ಭಾವನೆ ಮೂಡಿದಾಗ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸುಲಭವಾಗುತ್ತದೆ. ಧ್ಯಾನವು ಏಕಾಗ್ರತೆಯನ್ನು ಸಾಧಿಸಲು ಸಹಾಯಮಾಡುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲಕರ. ಆಡಳಿತ ವರ್ಗದ ಅಧಿಕಾರಿಗಳು, ಉದ್ಯೋಗಿಗಳು ನಿರ್ಧಾರಗಳನ್ನು ತೆಗೆದುಕೊಳ್ಳಲು ಧ್ಯಾನ ಸಹಕಾರಿ. ನಿವೃತ್ತರಿಗೆ ವಿಶ್ರಾಂತಿ ಜೀವನ ನಡೆಸಲು ಧ್ಯಾನ ಬಹಳ ಮುಖ್ಯವಾಗಿರುತ್ತದೆ ಎಂದು ಉದ್ಯೋಗಿಗಳು ಹೆಚ್ಚಾಗಿ ಧ್ಯಾನಕ್ಕೆ ಪ್ರಾಮುಖ್ಯತೆ ನೀಡಬೇಕು. ಇದರಿಂದ ಸಮರ್ಥವಾಗಿ ಹಾಗೂ ತ್ವರಿತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರು ಪ್ರತಿದಿನ 10 ನಿಮಿಷ ಬೆಳಿಗ್ಗೆ ಅಥವಾ ರಾತ್ರಿ ಧ್ಯಾನ ಮಾಡುವುದಕ್ಕೆ ಸಮಯ ಮೀಸಲಿಟ್ಟು ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಬೇಕು. ಇದರಿಂದ ದೇಹದ ರಕ್ತದೊತ್ತಡ, ಮಧುಮೇಹ, ಥೈರಯಿಡ್, ಹೃದಯ ಸಂಬಂಧಿ ಕಾಯಿಲೆಗಳು ಬೇರೆ ಎಲ್ಲ ಕಾಯಿಲೆಗಳಿಗೆ ಧ್ಯಾನವು ಒಂದು ಮೂಲ ಪರಿಹಾರವಾಗಿದೆ ಎಂದು ತಿಳಿಸಿದರು.

ಧ್ಯಾನ ತಜ್ಞರ ಸೂಚನೆಗಳಂತೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಎನ್. ಎಂ.ಜಗದೀಶ, ತಹಶಿಲ್ದಾರ್ ಅನಿಲ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ಹಾರ್ಟ್ ಫುಲ್ ನೆಸ್ ಜಿಲ್ಲಾ ಟ್ರೈನರ್ ಡಾ.ಪ್ರಕಾಶ್, ಬೆಂಗಳೂರು ಹಾರ್ಟ್ ಫುಲ್ ನೆಸ್ ಟ್ರೈನರ್ ಬಿ.ಜಿ ಪ್ರಸನ್ನ ಕೃಷ್ಣ, ಯೋಗ ಗುರುಗಳಾದ ಲೋಕನಾಥ್ ರವಿವರ್ಮಾ, ರಾಮಚಂದ್ರರೆಡ್ಡಿ, ಮಹೇಶ್, ಪ್ರಭಾಕರ್, ಡ್ಯಾನ್ಸ್ ಶ್ರೀನಿವಾಸ್, ಗೋವಿಂದರಾಜು, ಜಿಲ್ಲಾ ಹಾರ್ಟ್ ಫುಲ್ ನೆಸ್ ಸಂಸ್ಥೆಯ ಸದಸ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಲಾ ಮಕ್ಕಳು, ಸಾರ್ವಜನಿಕರು ಧ್ಯಾನವನ್ನು ಮಾಡಿದರು.

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!