ಮುಂದಿನ 24 ಗಂಟೆಗಳ ಕಾಲ ಫೆಂಗಲ್ ಚಂಡಮಾರುತ ಹೆಚ್ಚು ತೀವ್ರತೆ.!
ಚಿಕ್ಕಬಳ್ಳಾಪುರ : ಫೆಂಗಲ್ ಚಂಡುಮಾರತದಿಂದ ಜಡಿ ಮಳೆ ವಿಪರೀತ ಚಳಿ, ಗಾಳಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಜಿಲ್ಲೆಯ ಶಾಲಾ ಕಾಲೇಜುಗಳ ಮಕ್ಕಳ ಆರೋಗ್ಯ ದೃಷ್ಟಿಯಿಂದ ಮತ್ತೊಂದು ದಿನ ಅಂದರೆ ನಾಳೆ ಡಿಸೆಂಬರ್ 3 ಮಂಗಳವಾರದಂದು ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ, ಅಂಗನವಾಡಿ ಮಕ್ಕಳಿಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಡಾ. ಪಿ.ಎನ್ ರವೀಂದ್ರ ಅವರು ನಾಳೆ ರಜೆಯನ್ನ ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಫೆಂಗಲ್ ಸೈಕ್ಲೋನಿಂದ ವಿಪರೀತ ಚಳಿ, ಜಡಿ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಈ ನಿಟ್ಟಿನಲ್ಲಿ ಮುಂಜಾಗ್ರತ ಕ್ರಮವಾಗಿ ಶಾಲಾ ಕಾಲೇಜುಗಳ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಡಿಸೆಂಬರ್ 2 ಸೋಮವಾರದಂದು ರಜೆಯನ್ನು ಘೋಷಣೆ ಮಾಡಲಾಗಿತ್ತು.
ಫೆಂಗಲ್ ಚಂಡಮಾರುತವು ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಮುಂದಿನ 24 ಗಂಟೆಗಳ ಕಾಲ ತೀವ್ರವಾಗಿ ಅಪ್ಪಳಿಸುವುದಾಗಿ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿರುತ್ತದೆ. ಫೆಂಗಲ್ ಚಂಡಮಾರುತವು ಅತಿಯಾದ ಮಳೆ, ಚಳಿ ಹಾಗೂ ಗಾಳಿಯಿಂದ ತೀವ್ರತೆ ಹೆಚ್ಚಾಗುವುದರಿಂದ ಶಾಲಾ ಕಾಲೇಜು ವಿಧ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಗೊಳಪಡುವ ಎಲ್ಲಾ ಶಾಲಾ ಕಾಲೇಜುಗಳಿಗೆ, ಅಂಗನವಾಡಿ ಮಕ್ಕಳಿಗೆ ನಾಳೆ ಡಿಸೆಂಬರ್ 03 ( ದಿನಾಂಕ 03/12/2024) ರಂದು ಸಾರ್ವತ್ರಿಕ ರಜೆಯನ್ನು ಘೋಷಿಸಿದ್ದಾರೆ.
ಈ ರಜಾ ದಿನವನ್ನು ಮುಂದಿನ ರಜಾ ದಿನದಲ್ಲಿ ಸರಿದೂಗಿಸಿ, ಪಾಠ ಬೋದನೆ ಮಾಡುವ ಷರತ್ತಿಗೊಳಪಟ್ಟಿರುತ್ತದೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.