ಆರ್ ಯೂ ಕಿಂಗ್, ಸೇನಾಧಿಪತಿ, ಜೇಮ್ಸ್ ಬಾಂಡ್ ರೀತಿ ಫೈರ್ ಮಾಡುತ್ತೀರಾ.? ಯೂ ಆರ್ ನಾಟ್ ಎ ರೌಡಿ.! ಎಂದು ಗರಂ.
ಶಿಡ್ಲಘಟ್ಟ : ತಾಲ್ಲೂಕು ಕಛೇರಿಯ ಸಭಾಂಗಣದಲ್ಲಿ ಇಂದು ಚಿಕ್ಕಬಳ್ಳಾಪುರ ಜಿಲ್ಲಾ ಲೋಕಾಯುಕ್ತ ಅಧೀಕ್ಷಕರಾದ ಆಂಟೋನಿ ಜಾನ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಲ್ಲೂಕು ಆರೋಗ್ಯ ಇಲಾಖೆಯ ಬಗ್ಗೆ ಕೇಳಿ ಬಂದ ಗಂಭೀರ ಆರೋಪಕ್ಕೆ ಗರಂ ಆದ ಲೋಕಾಯುಕ್ತ ಎಸ್ ಪಿ ಅವರು ತಾಲ್ಲೂಕು ಆರೋಗ್ಯಾಧಿಕಾರಿ ವೆಂಕಟೇಶ್ ಮೂರ್ತಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಚಳಿ ಬಿಡಿಸಿದರು.
ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಸಣ್ಣ ಪುಟ್ಟ ವಿಚಾರಕ್ಕೂ ಚಿಕ್ಕಬಳ್ಳಾಪುರ ಅಥವಾ ಬೆಂಗಳೂರು ಆಸ್ಪತ್ರೆಗೆ ರೋಗಿಗಳನ್ನು ಶಿಫಾರಸ್ಸು ಮಾಡುತ್ತಾರೆ. ಎಲ್ಲರೂ ಖಾಸಗಿ ಆಸ್ಪತ್ರೆಗಳು, ಲ್ಯಾಬ್ ಗಳ ಕನೆಕ್ಷನ್ ಇಟ್ಟುಕೊಂಡಿದ್ದಾರೆ. ಅಂಬ್ಯುಲೆನ್ಸ್ ಡ್ರೈವರ್ ರವಿ ಎಂಬುವವರು ನಂದಿಯಲ್ಲಿ ಕೆಲಸ ಮಾಡಬೇಕು. ಆದರೆ ಅವರು ಶಿಡ್ಲಘಟ್ಟದ ಅಂಬ್ಯುಲೆನ್ಸ್ ಡ್ರೈವರ್ ಆಗಿ ಕೆಲಸ ಮಾಡಿಕೊಂಡು ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಬಿಟ್ಟು ಕಮೀಷನ್ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ತಾಲ್ಲೂಕಿನಲ್ಲಿ ನಕಲಿ ಕ್ಲನಿಕ್ ಗಳ ಹಾವಳಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕುವ ಕೆಲಸ ಮಾಡುತ್ತಿಲ್ಲವೆಂದು ಮಕ್ಸೂದ್ ಎಂಬುವವರು ಲೋಕಾಯುಕ್ತರ ಗಮನಕ್ಕೆ ತಿಳಿಸಿದರು.
ತಕ್ಷಣ ಸ್ಪಂಧಿಸಿದ ಲೋಕಾಯುಕ್ತ ಅಧೀಕ್ಷಕರು ಸಭೆಯಲ್ಲಿ ಇದ್ದ ತಾಲ್ಲೂಕು ಆರೋಗ್ಯಾಧಿಕಾರಿ ಡಾ ವೆಂಕಟೇಶ್ ಮೂರ್ತಿ ಅವರಿಂದ ಮಾಹಿತಿ ಕೇಳಿದಾಗ ಈ ತಿಮ್ಮಸಂದ್ರ ಬಳಿ ಒಂದು ಕ್ಲಿನಿಕ್ ಮತ್ತು ಹಂಡಿಗನಾಳ ಬಳಿ ಒಂದು, ಎರಡು ಕ್ಲಿನಿಕ್ ಗಳಿಗೆ ವಾರ್ನ್ ಮಾಡಿ ಮುಚ್ಚಿಸಲಾಗಿದೆಯೆಂದು ಉತ್ತರ ನೀಡಿದರು. ನಿಮ್ಮ ಐದು ವರ್ಷದ ಅವಧಿಯಲ್ಲಿ ಎಷ್ಟು ಕೇಸ್ ಮಾಡಿದ್ದೀರಿ, ಕೇಸ್ ಮಾಡಿಲ್ಲವೆಂದಾಗ ಗರಂ ಆದ ಲೋಕಾಯುಕ್ತ ಅಧೀಕ್ಷಕರು ಇದರಲ್ಲಿ ನಿಮ್ಮ ನೆಗ್ಲಜೆನ್ಸಿ ( ನಿರ್ಲಕ್ಷ್ಯ) ಇದೆಯಲ್ಲಾ.? ಒಬ್ಬ ತಾಲ್ಲೂಕು ಆರೋಗ್ಯಾಧಿಕಾರಿ ಕರ್ತವ್ಯ ನಕಲಿ ಕ್ಲಿನಿಕ್ ಗಳು ವಿರುದ್ದ ಕೇಸ್ ದಾಖಲಿಸಬೇಕು. ಕೇಸ್ ಮಾಡದೇ ನಕಲಿ ಕ್ಲಿನಿಕ್ ಗಳಿಗೆ ಹೇಗೆ ಕಡಿವಾಣ ಹಾಕುತ್ತೀರಿ, ಆರ್ ಯೂ ಕಿಂಗ್, ಸೇನಾಧಿಪತಿ, ಜೇಮ್ಸ್ ಬಾಂಡ್ ರೀತಿ ಫೈರ್ ಮಾಡುತ್ತೀರಾ.? ಯೂ ಆರ್ ನಾಟ್ ಎ ರೌಡಿ.! ಎಂದು ತರಾಟೆಗೆ ತೆಗೆದುಕೊಂಡರು. ನೀವು ಯಾವಾಗ ಕೇಸ್ ಮಾಡುವುದಿಲ್ಲವೋ ನಿಮ್ಮ ಕಂಟ್ರೋಲ್ ಗೆ ಬರುವುದಿಲ್ಲ. ನೀವು ನೆಗ್ಲೆಜೆನ್ಸಿ ತೋರಿಸಿದ್ದೀರಿ, ನಿಮ್ಮ ಕಡೆಯಿಂದಲೇ ನೂರಕ್ಕೆ ನೆಗ್ಲಜೆನ್ಸಿ ಆಗಿದೆ ಎಂದು ಎಚ್ಚರಿಸಿದರು.
ನಿವೇನಾದರು ಜೇಮ್ಸ್ ಬಾಂಡ್ ರೀತಿ ಪಟ್ ಪಟ್ ಅಂತ ಫೈರ್ ಮಾಡ್ತೀರಾ ನೀವು? ಮತ್ತೆ ನಿಮಗೆ ಯಾಕೆ ಎದುರುತ್ತಾರೆ. ಎಷ್ಟು ಕೇಸ್ ಮಾಡಿದ್ದೀರಿ ಎಂದು ಕೇಳಿದಾಗ ಒಂದು ಮಾಡೋದಕ್ಕೆ ಹೋಗಿದ್ದೆ , ಯಾವೂದು ಕೇಸ್ ಮಾಡಿಲ್ಲವೆಂದು ಹೇಳಿದ್ದಾರೆ.