ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು, ಕಳ್ಳರ ಪತ್ತೆಗೆ ಪೊಲೀಸರ ಬಲೆ.!
ಶಿಡ್ಲಘಟ್ಟ : ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಶಿಡ್ಲಘಟ್ಟದಿಂದ – ವಿಜಯಪುರಕ್ಕೆ ತೆರಳುವ ಬಸ್ ಹತ್ತುವಾಗ ತನ್ನ ಬ್ಯಾಗ್ ನಲ್ಲಿದ್ದ ಸುಮಾರು 166 ಗ್ರಾಂ ಚಿನ್ನದ ಒಡವೆಗಳ ಬಾಕ್ಸ್ ನ್ನು ಯಾರೋ ಕಳ್ಳರು ಹೊಂಚು ಹಾಕಿಕೊಂಡು ಲಕ್ಷ ಲಕ್ಷ ಬೆಲೆಬಾಳುವ ಚಿನ್ನದ ಒಡವೆಗಳು ಕಳ್ಳತನ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಹೌದು ನಗರದ ಅಂಜನಿ ಬಡಾವಣೆಯ ನಿವಾಸಿ ತೇಜಸ್ವಿನಿ ಎಂಬುವವರು 04 ನವೆಂಬರ್ 2024 ರಂದು ತವರು ಮನೆ ಶಿಡ್ಲಘಟ್ಟದಿಂದ ಗಂಡನ ಮನೆಗೆ ವಿಜಯಪುರಕ್ಕೆ ಬಸ್ ನಲ್ಲಿ ತೆರಳುವುದಕ್ಕೆ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದು, ತಮ್ಮ ಬ್ಯಾಗ್ ನಲ್ಲಿ ಚಿನ್ನದ ಒಡವೆಗಳ ಬಾಕ್ಸ್ ಇಟ್ಟು ಜಿಪ್ ಹಾಕಿಕೊಂಡಿರುತ್ತಾರೆ. ಇದನ್ನೆ ನೋಡಿಕೊಂಡು ಹೊಂಚುಹಾಕಿಕೊಂಡಿರುವ ಖದೀಮರು, ತೇಜಸ್ವಿನಿ ಅವರು ಬಸ್ ಹತ್ತುವಾಗ ಹಿಂಬದಿಯಿಂದ ಬ್ಯಾಗ್ ಜಿಪ್ ತೆಗೆದು ಸುಮಾರು 166 ಗ್ರಾಂ ಚಿನ್ನದ ಒಡವೆಗಳಿದ್ದ ಬಾಕ್ಸ್ ಕಳ್ಳರು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.
ಬ್ಯಾಗ್ ಜಿಪ್ ತೆಗೆದಿರುವುದನ್ನ ನೋಡಿಕೊಂಡ ತೇಜಸ್ವಿನಿ ಚಿನ್ನದ ಒಡವೆಗಳು ಇಲ್ಲದೆ ಇರುವುದನ್ನ ನೋಡಿ ಆತಂಕಗೊಂಡಿದ್ದಾರೆ. ಬ್ಯಾಗ್ ನಲ್ಲಿ ಚಿನ್ನದ ಒಡವೆಗಳಾದ ಸುಮಾರು 60 ಗ್ರಾಂ ಎರಡು ಲಾಂಗ್ ಚೈನ್, ಸುಮಾರು 30 ಗ್ರಾಂ ಒಂದು ಕೈ ಕಡಿಯ, ಸುಮಾರು 15 ಗ್ರಾಂ ಒಂದು ಚಿಕ್ಕ ನೆಕ್ಲೆಸ್, ಸುಮಾರು 25 ಗ್ರಾಂ ಒಂದು ಲಕ್ಷ್ಮಿ ನೆಕ್ಲೆಸ್, ಸುಮಾರು 4 ಗ್ರಾಂ ಮಾಟಿ, ಸುಮಾರು 8 ಗ್ರಾಂ ಒಂದು ಜೊತೆ ಜುಮಕಿ, ಸುಮಾರು 8 ಗ್ರಾಂ ಒಂದು ಜೊತೆ ಹ್ಯಾಂಗಿಂಗ್ಸ್, ಸುಮಾರು 10 ಗ್ರಾಂ ಸೈಡ್ ಮಾಟಿ ಎರಡು ಜೊತೆ, ಸುಮಾರು 6 ಗ್ರಾಂ ಮಣಿಗಳ ಸರಗಳನ್ನು ಬ್ಯಾಗ್ ನಲ್ಲಿ ಅಷ್ಟೂ ಒಡವೆಗಳನ್ನು ಕಳ್ಳರು ಎಗರಿಸಿದ್ದಾರೆ.
ಈ ಸಂಬಂಧ ಒಡವೆಗಳು ಕಳೆದುಕೊಂಡಿರುವ ತೇಜಸ್ವಿನಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನನ್ವಯ ಪೊಲೀಸರು ಎಫ್.ಐ.ಆರ್ ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದಾರೆ. ಅಪರಾಧ ವಿಭಾಗದ ಪಿಎಸ್ ಐ ಪದ್ಮಮ್ಮ ಅವರ ನೇತೃತ್ವದ ತಂಡ ತನಿಖೆ ಕೈಗೊಂಡಿದ್ದು, ಸಿಸಿ ಟಿವಿ, ಡಿವಿಆರ್ ಪರಿಶೀಲಿಸಿದ್ದು, ಕಳ್ಳರ ಚಲನವಲನಗಳು ಪತ್ತೆಯಾಗಿವೆ. ಆದಷ್ಟೂ ಬೇಗ ಕಳ್ಳರನ್ನು ಪತ್ತೆ ಮಾಡುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.