ಚಿಕ್ಕಬಳ್ಳಾಪುರ : ಪೋಕ್ಸೋ ಪ್ರಕರಣದಲ್ಲಿ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಇಬ್ಬರು ಅಪರಾಧಿಗಳಿಗೆ 20 ವರ್ಷಗಳ ಕಠಿಣ ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
22 ಫೆಬ್ರವರಿ 2021 ರಂದು ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಮೊ.ಸಂ: 82/2021 ಪೋಕ್ಸೋ ಪ್ರಕರಣ ದಾಖಲಾಗಿರುತ್ತದೆ. ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ-1 ಚಿಕ್ಕಬಳ್ಳಾಪುರದಲ್ಲಿ ಸುಧೀರ್ಘ ಮೂರು ವರ್ಷಗಳ ಕಾಲ ವಿಚಾರಣೆ ನಡೆದು 22 ಅಕ್ಟೋಬರ್ 2024 ರಂದು ಪ್ರಕರಣದಲ್ಲಿನ ಆರೋಪಿಗಳಾದ ಎ1 ಯಾಸಿನ್, ಎ2 ಶಬೀನಾ ಚಿಕ್ಕಬಳ್ಳಾಪುರ ನಗರ ನಿವಾಸಿಗಳಿಗೆ ನ್ಯಾಯಾಲಯವು ಇಬ್ಬರಿಗೂ ಅನುಕ್ರಮವಾಗಿ 20 ವರ್ಷಗಳು ಕಠಿಣ ಶಿಕ್ಷೆ ಮತ್ತು 5000 ರೂ ದಂಡವನ್ನು ವಿಧಿಸಿ ತೀರ್ಪು ಹೊರಡಿಸಿರುತ್ತದೆ.
ಈ ಪ್ರಕರಣದಲ್ಲಿ ತನಿಖಾಧಿಕಾರಿಗಳಾಗಿ ಪಿಐ ನಾರಾಯಣಸ್ವಾಮಿ ಅವರು ಕರ್ತವ್ಯ ನಿರ್ವಹಿಸಿದ್ದು, ವಿಶೇಷ ಸರ್ಕಾರಿ ಅಭಿಯೋಜಕರಾಗಿ ಶ್ರೀ ಲಕ್ಷ್ಮಿ ನರಸಿಂಹಪ್ಪ ಅವರು ನ್ಯಾಯಾಲಯದಲ್ಲಿ ವಾದವನ್ನು ಮಂಡಿಸಿ ಅರೋಪಿಗಳಿಗೆ ಶಿಕ್ಷೆಯನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕುಶಾಲ್ ಚೌಕ್ಸೆ ಅವರು ಪತ್ರಿಕಾ ಪ್ರಕಣೆ ಹೊರಡಿಸುವ ಮೂಲಕ ಮಾಹಿತಿ ನೀಡಿದ್ದಾರೆ.