Tuesday, December 24, 2024
Homeಜಿಲ್ಲೆಹೃದಯ ಶ್ರೀಮಂತಿಕೆಯ ನಾಡು ಕರ್ನಾಟಕ: ಶಾಸಕ ಬಿ.ಎನ್ ರವಿಕುಮಾರ್ ಬಣ್ಣನೆ.

ಹೃದಯ ಶ್ರೀಮಂತಿಕೆಯ ನಾಡು ಕರ್ನಾಟಕ: ಶಾಸಕ ಬಿ.ಎನ್ ರವಿಕುಮಾರ್ ಬಣ್ಣನೆ.

ತಾಲ್ಲೂಕು ಆಡಳಿತ ವತಿಯಿಂದ 69 ನೇ ಕನ್ನಡ ರಾಜ್ಯೋತ್ಸವ ಆಚರಣೆ. 

ಶಿಡ್ಲಘಟ್ಟ : ನಾಡು, ನುಡಿ,ಜಲ, ಭಾಷೆಗೆ ಆದ್ಯತೆ ನೀಡಬೇಕು. ರಾಜ್ಯದಲ್ಲಿ ಏಳು ಕೋಟಿ ಜನ ನೆಮ್ಮದಿಯಾಗಿ ಬದುಕುವುದಕ್ಕೆ ಅವಕಾಶ ಕಲ್ಪಿಸಿ ಕೊಟ್ಟಂತಹ ಮಹನೀಯರನ್ನು ನಾವೆಲ್ಲರೂ ಸ್ಮರಿಸಬೇಕು ಎಂದು ಶಾಸಕ ಬಿ.ಎನ್ ರವಿಕುಮಾರ್ ಅಭಿಪ್ರಾಯಪಟ್ಟರು.

ತಾಲ್ಲೂಕು ಆಡಳಿತ ಸೌಧ ಸಭಾಂಗಣದಲ್ಲಿ ರಾಷ್ಟ್ರೀಯ ನಾಡ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 69 ನೇ ಕಾರ್ಯಕ್ರಮದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸರಳವಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಎನ್ ರವಿಕುಮಾರ್ ಅವರು ಮಾತನಾಡಿ ಜಗತ್ತಿನ ಎಲ್ಲಾ ದೇಶಗಳು, ರಾಜ್ಯಗಳಿಗೂ ಹೋಲಿಸಿದರು ಸುಭಿಕ್ಷವಾಗಿ ಇರುವಂತಹ ರಾಜ್ಯವೇ ನಮ್ಮ ಕರ್ನಾಟಕ. ಬೇರೆ ರಾಜ್ಯ ಪ್ರಾಂತ್ಯಗಳಲ್ಲಿ ಅವರವರ ಭಾಷೆಗೆ ಪ್ರಾಮುಖ್ಯತೆ ನೀಡುತ್ತಾರೆ. ಅವರ ಭಾಷೆಯನ್ನು ಮಾತನಾಡುತ್ತಾರೆ. ಬೇರೆ ಭಾಷೆಗೆ ಮಾತನಾಡಿದರೆ ಕೇಳಿಸಿಕೊಳ್ಳುವುದಲ್ಲೂ ಇಲ್ಲಮ ಆದರೆ ನಮ್ಮ ರಾಜ್ಯದಲ್ಲಿ, ಯಾವುದೇ ಭಾಷೆ ಮಾತನಾಡುವ ಜನರಿಗೆ ಅವಕಾಶ ಇದೆ. ಅವರ ಮಾತನ್ನೂ ಕೇಳುತ್ತೇವೆ. ಸರ್ವ ಜನಾಂಗದ ಶಾಂತಿಯ ತೋಟ ಕರ್ನಾಟಕ. ನಮ್ಮ ರಾಜ್ಯದ ಜನತೆಗೆ ಹೃದಯ ಶ್ರೀಮಂತಿಕೆ ಇರುವ ಜನ ಇದ್ದಾರೆ. ಅದೇ ಮಣ್ಣಿಗೆ ಇರುವ ಗುಣ ಎಂದು ಬಣ್ಣಿಸಿದರು.

ಡಾಕ್ಟರ್ ರಾಜಕುಮಾರ್ ಅವರ ಹಾಡಿರುವ ಗೀತೆಯಲ್ಲಿ ಹೇಳಿರುವಂತೆ ಹುಟ್ಟಿದರೆ ಕನ್ನಡ ನಾಡಲ್ಲೆ ಹುಟ್ಟಬೇಕು, ಮೆಟ್ಟಿದರೆ ಈ ಕನ್ನಡ ಮಣ್ಣಲ್ಲೇ ಮೆಟ್ಟಬೇಕು. ಈ ಸಾಲುಗಳು ನೂರಕ್ಕೆ ನೂರಕ್ಕೆ ಅಲ್ಲ ಸಾವಿರದಷ್ಟು ಸತ್ಯವಾದದ್ದು ಎಂದರು.

ತಹಶೀಲ್ದಾರ್ ಬಿ.ಎನ್ ಸ್ವಾಮಿ ಅವರು ಮಾತನಾಡಿ ಕನ್ನಡ ಮಾದ್ಯಮದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು. ಇದರಿಂದ ಕನ್ನಡ ಭಾಷೆ, ದೇಶ, ನಾಡಿನ ಬಗ್ಗೆ ಅಭಿಮಾನ ಹೆಚ್ಚಾಗುತ್ತದೆ. ಅವರು ಐ.ಎ.ಎಸ್. ಕೆ.ಎ.ಎಸ್ ದೊಡ್ಡ ದೊಡ್ಡ ಹುದ್ದೆಗಳಿಗೆ ಆಯ್ಕೆಯಾದಾಗ ನಿರ್ಧಾರ ತೆಗೆದುಕೊಳ್ಳುವ ಸ್ಥಾನಗಳಲ್ಲಿದ್ದಾಗ ಕನ್ನಡ ಭಾಷೆ, ದೇಶ, ರಾಜ್ಯಕ್ಕೆ ಕೊಡುಗೆ ನೀಡುವ ಕೆಲಸ ಮಾಡುತ್ತಾರೆ‌. ಶಿಡ್ಲಘಟ್ಟ ತಾಲ್ಲೂಕಿನ ಈ ಭಾಗದ ರೈತರ ಮಕ್ಕಳು ಉನ್ನತ ವಿಧ್ಯಾಭ್ಯಾಸ ಮಾಡಬೇಕು. ಉನ್ನತ ಸ್ಥಾನಗಳಿಗೆ ಆಯ್ಕೆಯಾಗಬೇಕು ಎಂದು ಸ್ಪೂರ್ತಿದಾಯಕ ಮಾತಗಳಿಂದ ಉಮ್ಮಸ್ಸು ತುಂಬಿದರು.

ತಾಲ್ಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲದುಮ್ಮನಹಳ್ಳಿ ಗ್ರಾಮದ ಐ.ಎಫ್.ಎಸ್ ಪರೀಕ್ಷೆಯಲ್ಲಿ ತೆರ್ಗಡೆಯಾಗಿರುವ ಆಕರ್ಷ ಬಿ ಎಂ
(ಭಾರತಿ ಅರಣ್ಯ ಸೇವೆ) ಐ ಎಫ್ ಸ್ ಡೆಹರಾಡೂನ್ ಉತ್ತರಖಂಡ ಇವರನ್ನ ತಾಲ್ಲೂಕು ಆಡಳಿತ ಹಾಗೂ ಶಾಸಕರಿಂದ ಸನ್ಮಾನಿಸಿ ಅಭಿನಂಧಿಸಲಾಯಿತು.

ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಎಂ. ಶ್ರೀನಿವಾಸ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ ವೆಂಕಟೇಶ್ ಮೂರ್ತಿ, ಗ್ರೇಡ್ – 2 ತಹಶೀಲ್ದಾರ್ ಪೂರ್ಣಿಮಾ, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್, ನಗರಸಭೆ ಅಧ್ಯಕ್ಷ ವೆಂಕಟಸ್ವಾಮಿ, ನಗರಸಭೆ ಪೌರಾಯುಕ್ತ ಮಂಜುನಾಥ, ವಕೀಲರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ , ಸೇರಿದಂತೆ ತಾಲ್ಲೂಕಿನ ರೈತಪರ, ಕನ್ನಡ ಪರ, ದಲಿತ ಪರ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಹಾಜರಿದ್ದರು.

ವರದಿ: ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!