ಸಾಮೂಹಿಕ ನಾಯಕತ್ವದಲ್ಲಿ ನಡೆದ ಚುನಾವಣೆ ಯಶಸ್ವಿಯಾಗಿದೆ: ಕೆ.ಎನ್ ಸುಬ್ಬಾರೆಡ್ಡಿ ಅಭಿಮತ.
ಶಿಡ್ಲಘಟ್ಟ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಶಿಡ್ಲಘಟ್ಟ ತಾಲ್ಲೂಕು ಶಾಖೆಯ ಕಾರ್ಯಕಾರಿ ಸಮಿತಿಯ 2024-2029 ನೇ ಸಾಲಿನ ಅವಧಿಗೆ ಮೂರು ನಿರ್ದೇಶಕ ಸ್ಥಾನಗಳಿಗೆ ಸೋಮವಾರದಂದು ನಡೆದ ಚುನಾವಣೆಯಲ್ಲಿ ಕೆಂಪೇಗೌಡ, ಮಂಜುನಾಥ.ಎಂ, ನರಸಿಂಹರೆಡ್ಡಿ ಅವರು ಆಯ್ಕೆಯಾಗಿ ಜಯಶೀಲರಾಗಿದ್ದಾರೆ.
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಆವರಣದಲ್ಲಿ ಮತದಾನಕ್ಕೆ ಸಕಲ ಸಿದ್ದತೆಗಳು ಮಾಡಲಾಗಿತ್ತು. ಚುನಾವಣೆ ಪ್ರಕ್ರಿಯೆ ಸುಗಮವಾಗಿ ನಡೆಯಿತು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಶಿಡ್ಲಘಟ್ಟ ತಾಲ್ಲೂಕು 23 ಇಲಾಖೆಗಳಿಂದ 33 ನಿರ್ದೇಶಕರ ಸ್ಥಾನಗಳಿಗೆ ಆಯ್ಕೆ ಮಾಡುವಂತಹ ವ್ಯವಸ್ಥೆಯಿದೆ. ಈಗಾಗಲೇ 22 ಇಲಾಖೆ ವತಿಯಿಂದ 30 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನೂ ಮೂರು ಕ್ಷೇತ್ರಗಳಿಂದ ಮೂರು ಸ್ಥಾನಗಳಿಗೆ 8 ಮಂದಿ ಚುನಾವಣಾ ಕಣದಲ್ಲಿದ್ದು, ಸಾಮೂಹಿಕ ನಾಯಕತ್ವದಲ್ಲಿ ವೃಂದ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಒಂದೇ ತಂಡವಾಗಿ ಗುಂಪುಗಾರಿಕೆಗೆ ಅವಕಾಶ ಕೊಡದೆ ಸಾಮೂಹಿಕ ನಾಯಕತ್ವದಲ್ಲಿ ಕೆಲಸ ಮಾಡಿರುವುದರಿಂದ ಮೂರು ಸ್ಥಾನಗಳಿಂದ ಕೆಂಪೇಗೌಡ, ಮಂಜುನಾಥ.ಎಂ, ನರಸಿಂಹ ರೆಡ್ಡಿ ಅವರು ಆಯ್ಕೆಯಾಗಿದ್ದಾರೆ ಎಂದು ತಾಲ್ಲೂಕು ನೌಕರರ ಸಂಘದ ಅಧ್ಯಕ್ಷರಾದ ಕೆ.ಎನ್ ಸುಬ್ಬಾರೆಡ್ಡಿ ಅವರು ತಿಳಿಸಿದರು.
583 ಮತಗಳಿದ್ದು ಈ ಪೈಕಿ 559 ಮತದಾರರು ಮತವನ್ನು ಚಲಾಯಿಸಿದ್ದಾರೆ. ಮಂಜುನಾಥ್.ಎಂ ಅವರು 362 ಮತಗಳು ಪಡೆದುಕೊಂಡು ಮೊದಲ ಸ್ಥಾನಗಳಿಸಿದ್ದಾರೆ. ಕೆಂಪೇಗೌಡ ಅವರು 318 ಮತಗಳು ಪಡೆದುಕೊಂಡಿದ್ದು, ನರಸಿಂಹರೆಡ್ಡಿ ಅವರು 306 ಮತಗಳು ಪಡೆದುಕೊಂಡು ಜಯಶೀಲರಾಗಿ ನಿರ್ದೇಶಕ ಸ್ಥಾನಗಳಿಗೆ ಆಯ್ಕೆಯಾಗಿದ್ದಾರೆ.
ಚುನಾವಣೆ ಕಣದಲ್ಲಿದ್ದ ಅಶ್ವತ್ಥಕುಮಾರ್ ಎಸ್.ಎಂ. ಅವರು 154 ಮತಗಳು , ಗೋವಿಂದ ವಿ – 09 , ಮುಜಾಫೀರ್ ಎಸ್ – 170 ಮತಗಳು, ಮೋಹನ್ ಹೆಚ್ ಸಿ – 12 ಮತಗಳು, ಸುರೇಶ್ ಬಾಬು ಎಸ್ ಅವರು 264 ಮತಗಳು ಪಡೆಯುವ ಮೂಲಕ ಪರಾಜಿತರಾಗಿದ್ದಾರೆ.
ವರದಿ: ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ