ಅಂಬ್ಯುಲೆನ್ಸ್ ವಾಹನ ದುರುಪಯೋಗ, ಪೊಲೀಸರನ್ನ ನಂಭಿಸುವ ಪ್ರಯತ್ನಕ್ಕೆ ಕ್ರಿಮಿನಲ್ ಐಡಿಯಾ ಮಾಡಿದ ಕುತಂತ್ರಿ.!
ಶಿಡ್ಲಘಟ್ಟ : ಹೆಣ್ಣು ಸಂಸಾರದ ಕಣ್ಣು ಎನ್ನುತ್ತಾರೆ. ಸಂಸಾರದಲ್ಲಿ ಸಣ್ಣ ಪುಟ್ಟ ಜಗಳ ಬಂದರೂ ಹೊಂದಾಣಿಕೆ ಮಾಡಿಕೊಂಡು ಹೆಣ್ಣು ಸಹನೆ, ತಾಳ್ಮೆಯಿಂದ ಕುಟುಂಬವನ್ನು ನಿರ್ವಹಿಸುತ್ತಾಳೆ. ಆದರೆ ಇಲ್ಲೊಬ್ಬ ಐನಾತಿ ಲೇಡಿ ತನ್ನ ಅತ್ತೆ- ಮಾವ ಗಂಡನಿಗೆ ಸಂಸಾರದಲ್ಲಿ ಕಿರುಕುಳ ನೀಡುವುದಲ್ಲದೇ ಪದೇ ಪದೇ ಆಕೆಯ ಅಕ್ರಮ ತಂಡದೊಂದಿಗೆ ತೆರಳಿ ವಿನಾಕಾರಣ ಪೊಲೀಸ್ ದೂರುಗಳು ನೀಡುವುದು ಜೊತೆಗೆ ಹಲ್ಲೆ ಮಾಡಿದ್ದಾರೆಂದು ಸುಳ್ಳು ಆರೋಪ ಮಾಡಿ ಗಂಡನ ಮನೆವರನ್ನ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸುವುದಾಗಿ ಹೆದರಿಸುವುದು ಮಾಡುತ್ತಿದ್ದಾಳೆಂಬ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಆಕೆಯ ಗಂಡ ಸಂಸಾರದಲ್ಲಿ ತನ್ನ ಹೆಂಡತಿಯಿಂದ ನೊಂದ ವ್ಯಕ್ತಿ ಗಿರೀಶ್ ಎಂಬುವವರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮದ ರಾಮಾಂಜಿನಪ್ಪ ಮತ್ತು ನಾಗರತ್ನಮ್ಮ ರವರ ಮಗ ಗಿರೀಶ್ ಎಂಬುವವರು ನಾಲ್ಕು ವರ್ಷಗಳ ಹಿಂದೆಯಷ್ಟೇ ಇದೇ ತಾಲ್ಲೂಕಿನ ಪೈಯಲಹಳ್ಳಿ ಗ್ರಾಮದ ಯುವತಿಯೊಂದಿಗೆ ಹಿರಿಯರು ನಿಶ್ಚಯಿಸಿದಂತೆ ವಿವಾಹವಾಗಿದ್ದಾರೆ. ತಮ್ಮ ವೈವಾಹಿಕ ಜೀವನದಲ್ಲಿ ಒಂದು ಗಂಡು ಮಗು ಜನನವಾಗಿದೆ. ತವರು ಮನೆಗೆ ಹೆರಿಗೆಗೆಂದು ಹೋದವಳು 2 ವರ್ಷವಾದರೂ ಗಂಡನ ಮನೆಗೆ ವಾಪಸ್ ಬಂದಿರುವುದಿಲ್ಲ. ತವರು ಮನೆಯಲ್ಲಿದ್ದರೂ ಸಹ ಗಂಡ ತನ್ನ ಮಗುವಿನ ಚಿಕಿತ್ಸೆ, ಅಗತ್ಯ ವಸ್ತುಗಳು, ಇನ್ನಿತರೆ ಖರ್ಚು ವೆಚ್ಚಗಳಿಗೆ ಹಣ ಕೊಟ್ಟು ಹಾರೈಕೆ ಮಾಡಿ ನೋಡಿಕೊಂಡಿದ್ದು. ಆದರೆ ಒಂಬತ್ತು ತಿಂಗಳು ಆದ ಬಳಿಕ ತನ್ನ ಗಂಡ ಮನೆಗೆ ಬರುವಂತೆ ಗಂಡ ತನ್ನ ಹೆಂಡತಿಯನ್ನು ಕೇಳಿಕೊಂಡರೂ ಬರುವುದಿಲ್ಲ ಹಠಕ್ಕೆ ಬಿದ್ದು ತವರು ಮನೆಯಲ್ಲಿ ಎರಡು ವರ್ಷಗಳ ಕಾಲ ಇದ್ದು, ಮತ್ತೆ ತನ್ನ ಗಂಡ ನನ್ನನ್ನು ಕರೆದುಕೊಂಡು ಹೋಗುತ್ತಿಲ್ಲವೆಂದು ಪೊಲೀಸರಿಗೆ ದೂರು ನೀಡಿರುತ್ತಾಳೆ.
ಎರಡು – ಮೂರು ಬಾರಿ ಇದೇ ರೀತಿ ಪೊಲೀಸ್ ದೂರು ನೀಡುವುದು ಮಾಡಿದಾಗ, ಹಲವು ಬಾರಿ ಹಿರಿಯರು ನ್ಯಾಯ ಪಂಚಾಯಿತಿ ಮಾಡಿ ಇಬ್ಬರಿಗೂ ಬುದ್ದಿವಾದ ಹೇಳಿದ್ದಾರೆ. ಆದರೂ ಸಹಾ ಈಕೆಯ ಗಮನ, ಉದ್ದೇಶ ಬೇರೆ ಇರುವುದರಿಂದ ಮನೆಯಲ್ಲಿ ಗಂಡ, ಅತ್ತೆ, ಮಾವ ಇವರ ಮೇಲೆ ವಿನಾಕಾರಣ ಜಗಳ ತೆಗೆದು ತಾನು ಪದೇ ಪದೇ ಅಂದರೆ ವಾರದಲ್ಲಿ ಕನಿಷ್ಟ 3-4 ಬಾರಿ ತವರು ಮನೆಗೆ ಹೋಗಲೇ ಬೇಕು ಎಂದು ಪಟ್ಟು ಹಿಡಿಯುವುದಲ್ಲದೆ, ಗಂಡನ ತಂದೆ ತಾಯಿಯನ್ನು ಪ್ರತ್ಯೇಕ ಮಾಡುವಂತೆ ಗಂಡನಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾಳೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಕಷ್ಟ ಪಟ್ಟು ಮನೆ ಕಟ್ಟಿ ತನಗೆ ಮದುವೆ ಮಾಡಿ ಜೀವನ ಕಲ್ಪಿಸಿಕೊಟ್ಟಿರುವ ತಂದೆ- ತಾಯಿಯನ್ನು ಬೇರೆ ಮಾಡುವುದಕ್ಕೆ ಮಗ ಒಪ್ಪುತ್ತಿಲ್ಲ. ಇದಕ್ಕೆ ಹೆಂಡತಿ ಸಂಸಾರದಲ್ಲಿ ರಗಳೆ ತೆಗೆದು ಕುಟುಂಬದವರಿಗೆ ಹಿಂಸೆ ನೀಡುವುದಲ್ಲದೆ ಪೊಲೀಸರಿಗೆ ಸುಳ್ಳು ದೂರುಗಳು ಸಲ್ಲಿಸುವ ರೂಢಿ ಮಾಡಿಕೊಂಡಿದ್ದಾಳೆ. ಈಕೆಯ ಕಿರುಕುಳದಿಂದ ನೊಂದಿರುವ ಗಂಡನ ಕುಟುಂಬದವರು ಜೀವನದ ಮೇಲೆ ಭರವಸೆ ಕಳೆದುಕೊಂಡು, ವಿಚ್ಚೇಧನ ಪಡೆಯುವ ತೀರ್ಮಾನಕ್ಕೆ ಬಂದಿದ್ದಾರೆ.
ಆದರೆ ತಮ್ಮ ಮನೆಯ ವಂಶೋದ್ದಾರಕ ತಮ್ಮ ಕುಡಿ ಮಗುವಿನ ಭವಿಷ್ಯದ ದೃಷ್ಟಿಯಿಂದ ಸೊಸೆಯಾದವಳು ಎಷ್ಟೇ ಕಿರುಕುಳ, ಸುಳ್ಳು ಪೊಲೀಸ್ ದೂರುಗಳು ನೀಡಿದರೂ ಸಹಾ ಸಹಿಸಿಕೊಂಡು ಎಲ್ಲವೂ ಸರಿಹೋಗುತ್ತದೆ ಎಂದು ನಂಬಿ ಸಹನೆಯಿಂದ ಇದ್ದರೂ ಸಹಾ ಸೊಸೆಯಾದವಳು ಮಾತ್ರ ತಾನು ಮಾಡಿದ್ದೇ ಸರಿ ನನ್ನ ಆಟವೇ ಗೆಲ್ಲಬೇಕು ಎಂಬ ದುರಾಲೋಚನೆಯಿಂದ ಅಕ್ರಮ ಗುಂಪಿನ ಮಾತುಗಳು ಕೇಳಿಕೊಂಡು ತನ್ನ ಇಷ್ಟದಂತೆ ನಡೆದುಕೊಳ್ಳುತ್ತಿದ್ದಾಳೆ. ಈ ವಿಚಾರವಾಗಿ ಹಲವು ಬಾರಿ ಸಂಬಂಧಿಕರು ಇಬ್ಬರನ್ನೂ ಒಂದು ಮಾಡುವ ದೃಷ್ಟಿಯಿಂದ ಬುದ್ದಿವಾದ ಹೇಳಿದರೂ ಸಹಾ ಆಕೆಯ ಅಕ್ರಮ ತಂಡ ಹೇಳುವಂತೆ ನಡೆದುಕೊಳ್ಳುತ್ತಿದ್ದು, ಪೊಲೀಸರ ಮುಂದೆ ನಾಟಕವಾಡಿ ಪೊಲೀಸರನ್ನೆ ನಂಬಿಸುವಂತೆ ವರ್ತಿಸುತ್ತಾಳೆ.
ನಿನ್ನೆಯಷ್ಟೇ ಶನಿವಾರ ತಾನು ಊರಿಗೆ ಹೋಗಬೇಕು ಎಂದು ಮನೆಯಲ್ಲಿ ಅತ್ತೆ- ಮಾವ ಇಲ್ಲದೇ ಇರುವ ಸಮಯದಲ್ಲಿ ಗಂಡನೊಂದಿಗೆ ಜಗಳ ತೆಗೆದು ಮಾತಿನಲ್ಲೆ ಗಲಾಟೆ ಮಾಡಿಕೊಂಡಿದ್ದಾರೆ. ಈ ವಿಚಾರವನ್ನ ಗಿರೀಶ್ ಸಂಬಂಧಿಕರಿಗೆ ತಿಳಿಸಿದಾಗ ಸಂಬಧಿಕರು ಇಬ್ಬರಿಗೂ ಬುದ್ದಿವಾದ ಹೇಳಿ ಇಬ್ಬರೂ ಜೀವನದಲ್ಲಿ ಪ್ರತ್ಯೇಕವಾಗಿ ಬಾಳಬೇಕು ಎಂಬ ಬಯಕೆ ಇದ್ದರೆ ನಿಮ್ಮ ವಯಸ್ಸಾದ ತಂದೆ- ತಾಯಿಗೆ ಮಾನಸಿಕ ವೇದನೆ ಕಿರುಕುಳ ನೀಡದೇ ಗಂಡ – ಹೆಂಡತಿ ನೀವು ಪ್ರತ್ಯೇಕವಾಗಿ ಜೀವನ ನಡೆಸುವುದಕ್ಕೆ ಅವಕಾಶವಿದೆ. ಪದೇ ಪದೇ ಸಂಸಾರದಲ್ಲಿ ಜಗಳ ಮಾಡುವುದು ಯಾರಿಗೂ ನೆಮ್ಮದಿ ಇರುವುದಿಲ್ಲವೆಂದು ತಿಳುವಳಿಕೆ ಹೇಳಿರುತ್ತಾರೆ.
ಇದನ್ನೆ ಪ್ರತಿಷ್ಟೆಯಾಗಿ ತೆಗೆದುಕೊಂಡ ಐನಾತಿ ಕಿಲಾಡಿ ಹೆಣ್ಣು ತನ್ನ ಮೇಲೆ ಯಾರೊಬ್ಬರು ಹಲ್ಲೆ ಮಾಡದೇ ಇದ್ದರೂ ಸಹ ತನ್ನ ಗಂಡ, ಅತ್ತೆ – ಮಾವ,ಹಾಗೂ ಸಂಬಂಧಿಕರು, ತನ್ನನ್ನು ಹಲ್ಲೆ ಮಾಡಿದ್ದಾರೆ. ತಲೆ ಕೂದಲು ಹಿಡಿದು ಎಳೆದಾಡಿ ಹೊರಗಡೆ ಹಾಕಿ ಒದ್ದಿದ್ದಾರೆಂದು ಆಕೆ ಯಾರೋ ಒಬ್ಬ ವ್ಯಕ್ತಿಗೆ ಕರೆ ಮಾಡಿ ಹೇಳಿದ ಬಳಿಕ, ಆಸಾಮಿಯ ಸೂಚನೆಯ ಮೇರೆಗೆ 112 ಗೆ ಕರೆ ಮಾಡಿದ್ದಲ್ಲದೆ, ಅಂಬ್ಯುಲೆನ್ಸ್ ಗೂ ಕರೆ ಮಾಡಿ ಕರೆಯಿಸಿಕೊಂಡಿರುವುದು ವಿಪರ್ಯಾಸವಾಗಿದೆ. ಆಕೆಗೆ ಯಾವುದೇ ಒಂದೇ ಒಂದು ಸಣ್ಣ ಗಾಯ, ಮೂಗೇಟು ಆಗದೇ ಇದ್ದರೂ ಸಹಾ ಅಂಬ್ಯಲೆನ್ಸ್ ನಲ್ಲಿ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಚಿಕಿತ್ಸೆಯ ನಾಟಕವಾಡಿ ಅಲ್ಲಿಂದ ಪೊಲೀಸ್ ಠಾಣೆಗೆ ಮೆಮೋ ಹೋದ ನಂತರ ತಾನು ಹೇಳಿಕೆ ನೀಡಿ, ಕೆಲವೇ ನಿಮಿಷಗಳಲ್ಲಿ ಆಸ್ಪತ್ರೆಯಿಂದ ತನ್ನ ಪಟಾಲಂ ಜೊತೆಯಲ್ಲಿ ಕಾರಿನಲ್ಲಿ ಸುತ್ತಾಡುತ್ತಿಕೊಂಡು ಪೊಲೀಸ್ ಠಾಣೆಗೆ ತನ್ನ ತಂಡದೊಂದಿಗೆ ತೆರಳಿ ತನ್ನ ಗಂಡ, ಅತ್ತೆ- ಮಾವನ ,ಹಾಗೂ ಬುದ್ದಿವಾದ ಹೇಳಿದ ಸಂಬಂಧಿಕರ ಮೇಲೂ ಸುಳ್ಳು ದೂರು ಸಲ್ಲಿಸಿದ್ದಾಳೆ ಅಕ್ರಮ ತಂಡದೊಂದಿಗೆ ಹೊರಟಿದ್ದಾಳೆ ತಿಳಿದು ಬಂದಿದೆ.
ಈಕೆ ತನ್ನ ಅತ್ತೆ- ಮಾವ ಅವರನ್ನೇ ಟಾರ್ಗೆಟ್ ಮಾಡಿ ಸಂಚು ರೂಪಿಸಿಕೊಂಡು ಬೇರೆ ಪುರುಷರೊಂದಿಗೆ ಸಂಪರ್ಕದಲ್ಲಿದ್ದುಕೊಂಡು ಅವರ ಮೂಲಕ ಪದೇ ಪದೇ ಗಂಡ ಮತ್ತು ಅವರ ಮನೆಯವರ ಮೇಲೆ ಸುಳ್ಳು ದೂರುಗಳು ಸಲ್ಲಿಸುವ ಮೂಲಕ ಕಾನೂನು ದುರುಪಯೋಗ ಮಾಡಿಕೊಳ್ಳುತ್ತಿರುವುದರ ಜೊತೆಗೆ ತುರ್ತು ಪರಿಸ್ಥಿತಿಯಲ್ಲಿ ಬಳಸಬೇಕಾದ ಅಂಬ್ಯುಲೆನ್ಸ್ ನ್ನು ದುರುಪಯೋಗ ಮಾಡಿಕೊಂಡು ದೊಡ್ಡ ಹೈ ಡ್ರಾಮಾ ಮಾಡಿ ಪೊಲೀಸರನ್ನ ನಂಬಿಸುವ ಪ್ರಯತ್ನಕ್ಕೆ ಮಾಡಿದ್ದಾಳೆ.
ಈಕೆಯ ನಡುವಳಿಕೆಯ ಕುರಿತು ಸಂಸಾರದಲ್ಲಿ ನೀಡುತ್ತಿರುವ ಕಿರುಕುಳದ ಬಗ್ಗೆ ಆಕೆಯ ಗಂಡ ಗಿರೀಶ್ ಸಹ ಪ್ರತಿ ದೂರು ನೀಡಿದ್ದಾನೆ. ಇನ್ನು ಕುಟುಂಬದ ವಿಚಾರವಾಗಿರುವುದರಿಂದ ಇಬ್ಬರನ್ನೂ ಕರೆಯಿಸಿ ವಿಚಾರಣೆ ನಡೆಸಿ ತಿಳುವಳಿಕೆ ನೀಡುವುದಾಗಿ ಪೊಲೀಸರು ತಿಳಿಸಿದ್ದು, ಇಬ್ಬರೂ ಕೇಳದೇ ಇದ್ದಲ್ಲಿ ಕಾನೂನು ರೀತಿಯಲ್ಲಿ ಹೋಗಬಹುದು ಎಂದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನೊಂದವ್ಯಕ್ತಿ ಗಿರೀಶ್ ಪತ್ರಿಕೆಯೊಂದಿಗೆ ಮಾತನಾಡಿ ನಮ್ಮ ತಂದೆ- ತಾಯಿಯನ್ನು ಬೇರೆ ಮಾಡುವಂತೆ ನನ್ನ ಹೆಂಡತಿ ಹಿಂಸೆ ನೀಡುತ್ತಿದ್ದಾಳೆ. ಸಂಸಾರದಲ್ಲಿ ಯಾವಾಗಲೂ ವಿನಾಕಾರಣ ಜಗಳ ತೆಗೆದು ಗಲಾಟೆ ಮಾಡಿ ಪದೇ ಪದೇ ವಾರದಲ್ಲಿ 3-4 ಬಾರಿ ತವರು ಮನೆಗೆ ಹೋಗಬೇಕು ಎಂದು ಖ್ಯಾತೆ ತೆಗೆಯುತ್ತಾಳೆ. ಇದಕ್ಕೆ ಒಪ್ಪದೆ ಇದ್ದಾಗ ನನ್ನನ್ನು ಅವಾಚ್ಯಪದಗಳಿಂದ ನಿಂಧಿಸಿ ರಂಪಾಟ ಮಾಡುತ್ತಾಳೆ. ನಾನು ಹಲ್ಲೆ ಮಾಡದೇ ಇದ್ದರೂ ನನ್ನ ಮತ್ತು ನನ್ನ ತಂದೆ,ತಾಯಿ ಹಾಗೂ ಯಾರಾದರೂ ಬುದ್ದಿ ಮಾತು ಹೇಳಲು ಬಂದವರ ಮೇಲೂ ಹಟಾತ್ ಆಗಿ ಯಾರೋ ವ್ಯಕ್ತಿಗೆ ಪೋನ್ ಮಾಡಿ ಅವರ ಸೂಚನೆಯಂತೆ ಪೊಲೀಸ್ ಠಾಣೆಗೆ ತೆರಳಿ ನಮ್ಮ ಮೇಲೆ ಇಲ್ಲ ಸಲ್ಲದ ಸುಳ್ಳು ದೂರುಗಳು ನೀಡುವುದು ಮಾಡಿ ನಮಗೆ ನೆಮ್ಮದಿ ಇಲ್ಲದಂತೆ ಮಾಡುತ್ತಿದ್ದಾಳೆ. ಈಕೆಯ ಕಿರುಕುಳಕ್ಕೆ ತಾಳಲಾರದೆ ಜೀವನೇ ಬೇಡವೆಂದು ಎನಿಸಿಬಿಟ್ಟಿದೆ. ಕಾನೂನು ಮತ್ತು ಪೊಲೀಸರು, ನ್ಯಾಯದ ಮೇಲೆ ನಂಬಿಕೆಯಿದೆ.ನನ್ನ ಹೆಂಡತಿಯಿಂದ ನಾವು ತುಂಬಾ ನೊಂದಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಇಬ್ಬರೂ ಈಗ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಪೊಲೀಸರು ಊರಿನಲ್ಲಿ ಮಹಜರ್ ನಡೆಸಿ ಪ್ರಕರಣದ ತನಿಖೆ ಮಾಡಿ ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕಿದೆ. ಹಾಗೂ ಐನಾತಿ ಕಿಲಾಡಿ ಹೆಣ್ಣು ಏನು ಮಾಡಿದರೂ ನಡೆಯುತ್ತೆ , ಎಂಬ ಭ್ರಮೆಯಲ್ಲಿದ್ದು ತನ್ನ ಅಕ್ರಮ ತಂಡದ ಸಹಕಾರದಿಂದ ಗಂಡನ ಮೆನೆಯವರ ಮೇಲೆ ಪೈಪೋಟಿಗೆ ಬಿದ್ದು ತಾನು ಹೇಳಿದ್ದೆಲ್ಲಾ ಪೊಲೀಸರು ನಂಬುತ್ತಾರೆಂಬ ಭ್ರಮೆಯಲ್ಲಿರುವ ಐನಾತಿ ಕಿಲಾಡಿ ಲೇಡಿಗೆ ಕಾನೂನು ಇರುವುದು ನೊಂದವರಿಗಾಗಿಯೇ ಹೊರತು ನಾಟಕವಾಡುವವರಿಗಲ್ಲ ಎಂಬುವುದು ಆಕೆಗೆ ಬುದ್ದಿ ಕಲಿಸಬೇಕಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರೇ ಅಲ್ಲವೇ.? ಈ ಪ್ರಕರಣದಲ್ಲಿ ನಿಜವಾದ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಕೆಲಸ ಪ್ರಾಮಾಣಿಕವಾಗಿ ಪೊಲೀಸರು ಮಾಡಬೇಕಿದೆ.