ಬೆಂಗಳೂರು: ಜನರಿಗೆ ಉತ್ತಮ ಆಡಳಿತ ನೀಟುವ ನಿಟ್ಟಿನಲ್ಲಿ ಅ. 21 ರ ನಂತರ ವಾರಾಂತ್ಯ ಶನಿವಾರ- ಭಾನುವಾರ ರಜಾ ದಿನಗಳಲ್ಲಿ ನೋಂದಣಿ ಕಚೇರಿಗಳು ಕಾರ್ಯನಿರ್ವಹಿಸಲಿವೆ ಜನರಿಗೆ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ ಈ ಯೋಜನೆಯನ್ನು ಅ.21 ರಿಂದ ಚಾಲನೆ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಬೆಂಗಳೂರು ಮತ್ತು ನಗರ ಪ್ರದೇಶಗಳಲ್ಲಿ ಶನಿವಾರ ಮತ್ತು ಭಾನುವಾರ ನೋಂದಣಿಗೆ ಅವಕಾಶ ನೀಡುವಂತೆ ಮಾಡಿದ ಮನವಿ ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು. ರಜಾ ದಿನಗಳಲ್ಲಿ ಬೆಂಗಳೂರಿನಲ್ಲಿ 5 ನೋಂದಣಿ ಕಚೇರಿ, ಪ್ರತಿ ಜಿಲ್ಲೆಯಲ್ಲಿ ತಲಾ 1 ಕಚೇರಿಯಂತೆ 35 ನೋಂದಣಿ ಕಚೇರಿಗಳು ಕಾರ್ಯನಿರ್ವಹಣೆ ಮಾಡಲಿವೆ. ರೋಟೇಷನ್ ಆಧಾರದ ಮೇಲೆ ರಜಾ ದಿನದಲ್ಲಿ ನೋಂದಣಿ ಕಚೇರಿಗಳು ತೆರೆಯಲಿವೆ ಎಂದರು.
ಯಾವ ಕಚೇರಿಗಳು ರಜಾ ದಿನದಲ್ಲಿ ತೆರೆಯುತ್ತವೆ ಎನ್ನುವು ಮಾಹಿತಿಯನ್ನು ಮೊದಲೇ ಸಾರ್ವಜನಿಕರಿಗೆ ನೀಡಲಾಗುವುದು. ಉದ್ಯೋಗಸ್ಥರು ಸೇರಿದಂತೆ ಎಲ್ಲರಿಗೂ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಇದನ್ನು ಜಾರಿ ಮಾಡಲಾಗುತ್ತಿದೆ ಎಂದರು.
ನಕಲಿ ಖಾತೆ ಸೃಷ್ಟಿಸಿ ನೋಂದಣಿಗೆ ತಡೆ: ನಕಲಿ ಖಾತೆ ಸೃಷ್ಟಿಸಿ ನೋಂದಣಿ ಮಾಡುವ ದಂಧೆಯಿಂದ ಸರ್ಕಾರಕ್ಕೆ ಪ್ರತಿ ವರ್ಷ 500 ರಿಂದ 700 ಕೋಟಿ ರೂ ನಷ್ಟವಾಗುತ್ತಿದೆ. ಆದ್ದರಿಂದ ಈ ದಂಧೆಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ನೋಂದಣಿ ಮಾಡಿಸುವಾಗ ಇತರೆ (ಅದರ್ಸ್) ಕಲಂನಲ್ಲಿ ಲೇ ಔಟ್ ಅಭಿವೃದ್ಧಿ ಮಾಡಿರುವವರು ಕೂಡ ಆಶ್ರಯ ಅಥವಾ ಸರ್ಕಾರಿ ಯೋಜನೆ ಎಂದು ನಮೂದಿಸಿ ನೋಂದಣಿ ಮಾಡುತ್ತಿರುವುದರಿಂದ ಸರ್ಕಾರಕ್ಕೆ ಬರುವ ಆಧಾಯದಲ್ಲಿ ಖೋತಾ ಆಗಿ ನಷ್ಟವಾಗುತ್ತಿದೆ ಎಂದರು.
ಹಿಂದಿನ ಐಎಎಸ್ ಅಧಿಕಾರಿ ತ್ರಿಲೋಕ್‌ಚಂದ್ರ ಅವರು ನಾಲ್ಕು ಕಚೇರಿಗಳನ್ನು ತೆಗೆದುಕೊಂಡು ಅಧ್ಯಯನ , 1.07.2018 8 10.07.2019 2 250 ಕೋಟಿ ರೂ ನಷ್ಟವಾಗಿದೆ ಎಂದು ವರದಿ ನೀಡಿದ್ದಾರೆ. ಅಂದರೆ ವರ್ಷಕ್ಕೆ 500 ಕೋಟಿ ಅಂದಾಜು ನಷ್ಟವಾಗಿರುವ ಸಾಧ್ಯತೆ ಇದೆ ಎಂದರು.
ಆಧಾರ್ ಜೋಡಣೆ ಕಡ್ಡಾಯ ಖಾತೆ ತೋರಿಸಿ ನೋಂದಣಿ ಮಾಡುತ್ತಿರುವುದರಿಂದ ಹೆಚ್ಚು ಸಮಸ್ಯೆಗಳು ಎದುರಾಗುತ್ತಿವೆ. ಆದ್ದರಿಂದ ಆಧಾರ್ ಜೋಡಣೆ ಮತ್ತು ಇ ಖಾತೆ ಮಾಡಿಸುವುದನ್ನು ಕಡ್ಡಾಯ ಮಾಡಲಾಗಿದೆ. ನೋಂದಾಯಿತ ಆ ಆಸ್ತಿ ಗ್ರಾಮ ಪಂಚಾಯಿತಿ/ಸ್ಥಳೀಯ ಸಂಸ್ಥೆಗಳು/ ಮಹಾನಗರ ಪಾಲಿಕೆ/ ಹೀಗೆ ಯಾವ ವ್ಯಾಪ್ತಿಯದ್ದು ಎನ್ನುವುದನ್ನು ದಾಖಲು ಮಾಡಬೇಕು ಎಂದರು.
ಡಿಜಿಟಲ್ ಇಂಟಿಗ್ರೇಷನ್: ನಾಲ್ಕು ಜಿಲ್ಲೆಗಳಲ್ಲಿ ಡಿಜಿಟಲ್ ಇಂಟಿಗ್ರೇಷನ್ ಮಾಡಲಾಗಿದೆ. ಮುಂದಿನ ತಿಂಗಳಲ್ಲಿ ಇನ್ನು ನಾಲ್ಕು ಜಿಲ್ಲೆಗಳಲ್ಲಿ ಡಿಜಿಟೈಸೇಷನ್ ಮಾಡಲಾಗುವುದು. ಬಿಬಿಎಂಪಿಯಲ್ಲು ಪೇಪರ್ ನೋಂದಣಿ ಬದಲಾಗಿದೆ. ಮುಂದಿನ ತಿಂಗಳಿಂದ ಇ ಖಾತೆ ಅಡಿ ನೋಂದಣಿ ನಡೆಸಲಾಗುವುದು ಎಂದರು. ಕಾವೇರಿ-2 ಅಡಿ ಅದರ್ಸ ಹೆಸರಿನಲ್ಲಿ ಶೇ.91 ನೋಂದಣಿ ನಡೆಸಲಾಗುತ್ತಿದೆ. ಖಾತೆ ಯಾರಿಗಾದ್ರೂ ಕೊಡಲಿ. ಅದು ಆಗಲೇಬೇಕು. ಅದಿಲ್ಲದೆ ನೀವು ರಿಜಿಸ್ಟ್ರೇಷನ್ ಮಾಡಲಿಕ್ಕೆ ಸಾಧ್ಯವಿಲ್ಲ. ಇದರಿಂದ ಕೆಲವರಿಗೆ ತೊಂದರೆ ಆಗಬಹುದು ಆದರೆ ಆಗುತ್ತಿರುವ ಅನ್ಯಾಯ ತಪ್ಪಿಸಬಹುದಾಗಿದೆ ಎಂದರು.
ಡಿಜಿಟಲ್ ಇಂಟಿಗ್ರೇಷನ್ ಕಾವೇರಿ ಮತ್ತು ಡಿಜಿಟಲ್ ಖಾತಾ ನಡುವೆ ಹೊಂದಾಣಿಕೆ ಮಾಡಲು ತಿದ್ದುಪಡಿ ಮಾಡಿ ಬಿಲ್ ಮಂಡಿಸಿದ್ದೇವೆ. ರಾಜ್ಯಪಾಲರು ವಾಪಸ್ ಕಳುಹಿಸಿದರು. ಈ ಬಗ್ಗೆ ಪೂರ್ಣ ಮಾಹಿತಿ ನೀಡಿದ ಬಳಿಕ ರಾಜ್ಯಪಾಲರು ಅನುಮೋದನೆ ನೀಡಿ ಕೇಂದ್ರಕ್ಕೆ ಕಳುಹಿಸಿದ್ದಾರೆ. 14 ಲಕ್ಷ ಇ- ಆಸ್ತಿ ಡಿಜಿಟಲ್ ಇಂಟಿಗ್ರೇಷನ್ ಮಾಡಲಾಗಿದೆ ಎಂದರು.
ಪೌತಿ ಖಾತೆ ಆಂದೋಲನ: ರಾಜ್ಯದಲ್ಲಿ 48 ಲಕ್ಷ ಆಸ್ತಿಗಳು ಪೌತಿ ಖಾತೆಯಲ್ಲಿದೆ. ಇದನ್ನು ಆ ಕುಟುಂಬದ ಹಕ್ಕುದಾರರಿಗೆ ಖಾತೆ ಮಾಡಿಕೊಡಲು ಪೌತಿ ಖಾತೆ ಆಂದೋಲನ ಹಮ್ಮಿಕೊಳ್ಳಲಾಗುತ್ತಿದೆ. ದಿನಾಂಕ ಶೀಘ್ರವೇ ತಿಳಿಸಲಾಗುವುದು ಎಂದರು. ಪೌತಿ ಖಾತೆ ಆಂದೋಲನ ಸಂದರ್ಭದಲ್ಲಿ ಸಂಬಂದಿತರು ಅರ್ಜಿ ನೀಡಿ ಖಾತೆ ವರ್ಗಾಯಿಸಿಕೊಳ್ಳಬಹುದು. ಕುಟುಂಬದಲ್ಲಿಯೇ ಸಹಮತವಿಲ್ಲದೆ ವ್ಯತ್ಯಾಸವಿದ್ದರೆ ಆ ಮಾಹಿತಿಯೂ ಹೊರಬರಲಿದೆ ಎಂದರು. ಪೌತಿ ಖಾತೆ ಮಾಡಿದರೆ ಸರ್ವೇ, ಸ್ಕೆಚ್‌ಗಳು ಮುಂದಿನ ಹಂತದಲ್ಲಿ ಬರಲಿವೆ. ಹೊಸ ಮಾದರಿಯಲ್ಲಿ ಎರಡು ಕಡೆ ಪೈಲೆಟ್ ಪ್ರಾಜೆಕ್ಟ್ ಮಾಡಲಾಗುತ್ತಿದೆ ಎಂದರು.
ನಕಾಶೆ ದಾರಿ ಕಡ್ಡಾಯ ಯಾವುದೇ ಆಸ್ತಿಗಳಿಗೆ ಸಂಬಂದಿತರು ತೆರಳಲು ನಕಾಶೆ ದಾರಿ ಕಡ್ಡಾಯ. ಒಂದು ವೇಳೆ ದಾರಿ ಇಲ್ಲದೆ ಇದ್ದರೆ, ಅದನ್ನು ಬಿಡಿಸಿಕೊಡಲು ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.