ಚಿಕ್ಕಬಳ್ಳಾಪುರ : ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಲಕಾಪುರ ಗ್ರಾಮದ ಸರ್ದಾರ್ ಎಂಬುವವರ ಮನೆಯಲ್ಲಿ 18 ಆಗಸ್ಟ್ 2024 ರಂದು ಕಳ್ಳತನ ಮಾಡಿ ಬಂಗಾರ, ಬೆಳ್ಳಿ ದೋಚುತ್ತಿದ್ದ ಗ್ಯಾಂಗ್ ನ್ನು ಪೊಲೀಸರು ಬಂಧಿಸಿ ಆರೋಪಿಗಳಿಂದ ಬಂಗಾರ, ಬೆಳ್ಳಿ, ಮಾಲನ್ನು ವಶಪಡಿಸಿಕೊಂಡು ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳು : 1) ಸಿದಿಕ್ @ ಸಿದ್ದಿಕ್ ಸಾಬ್ ಬಿನ್ ನಿಸಾರ್ ಅಹಮ್ಮದ್, 35 ವರ್ಷ, ಮುಸ್ಲಿಂ ಜನಾಂಗ, ಚಾಲಕ ವೃತ್ತಿ, ವಾಸ: ಅಲಕಾಪುರ ಗ್ರಾಮ, ತೊಂಡ ಬಾವಿ ಹೋಬಳಿ, ಗೌರಿಬಿದನೂರು ತಾಲೂಕು, 2) ಜಮ್ಮಿರ್ @ ಶೇಕ್ ಜಮೀರ್ ಬಿನ್ ನಿಸಾರ್ ಅಹಮ್ಮದ್. 24 ವರ್ಷ, ಮುಸ್ಲಿಂ ಜನಾಂಗ, ಕೂಲಿ ಕೆಲಸ, ವಾಸ: ಅಲಕಾಪುರ ಗ್ರಾಮ, ತೊಂಡಬಾವಿ ಹೋಬಳಿ, ಗೌರಿಬಿದನೂರು ತಾಲೂಕು. ಮತ್ತೊರ್ವ 3).ಇಲ್ಲು @ಇಲಿಯಾಜ್ ಬಿನ್ ನಿಸ್ಸಾರ್ ಅಹಮದ್, 30 ವರ್ಷ, ಮುಸ್ಲಿಂ ಜನಾಂಗ, ಚಾಲಕ ವೃತ್ತಿ, ಅಲಕಾಪುರ ಗ್ರಾಮ, ತೊಂಡೇಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು. ಮೂವರು ಪ್ರಕರಣದ ಆರೋಪಿಗಳು ಮತ್ತು ಕಳವು ಮಾಲನ್ನು ವಶಪಡಿಸಿಕೊಂಡು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.