Monday, December 23, 2024
HomeUncategorizedNPS , UPS ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, NPS ನೌಕರರಿಂದ ಕಪ್ಪು ಪ್ರದರ್ಶನ.  

NPS , UPS ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, NPS ನೌಕರರಿಂದ ಕಪ್ಪು ಪ್ರದರ್ಶನ.  

ಶಿಡ್ಲಘಟ್ಟ :   ದೇಶಾದ್ಯಂತ NPS ವಿರೋಧಿಸಿ ನೌಕರರ ನೌಕರರ ಹಲವು ವರ್ಷಗಳ ಹೋರಾಟ   ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ OPS ಜಾರಿಗೊಳಿಸುವ ಬದಲು UPS, (Unified pension scheme) (ಏಕೀಕೃತ ಪಿಂಚಣಿ ಯೋಜನೆ) ಜಾರಿಗೊಳಿಸಲು ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ. NPS , UPS ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, OPS ಹಳೇ ಪಿಂಚಣಿ ಯೋಜನೆಗೆ ಬೆಂಬಲಿಸಿ ತಾಲ್ಲೂಕು  NPS ನೌಕರರ ಸಂಘದ ಅಧ್ಯಕ್ಷರಾದ ಗಜೇಂದ್ರ ವಿ ಎನ್ ಅವರ ನೇತೃತ್ವದಲ್ಲಿ ನಗರದ ವಿವಿಧ ಸರ್ಕಾರಿ ಇಲಾಖೆಗಳ ಬಳಿ ನೌಕರರು ಕಪ್ಪು ಪಟ್ಟಿ ಧರಿಸಿ ಪ್ರದರ್ಶಿಸಿದರು.

ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರದ ನೌಕರರ ಸಂಘಟನೆಗಳ ಮುಖಂಡರ ಸಭೆ ನಡೆಸಿ ನಿವೃತ್ತಿಯ ನಂತರ ನೌಕರರಿಗೆ 50% ಪಿಂಚಣಿ ನೀಡುವ ಭರವಸೆಯನ್ನು ನೀಡಿದ್ದಾರೆ. ಅದರೆ UPS ಸಹ NPS ಯೋಜನೆಯ ಇನ್ನೊಂದು ಮುಖವಾಗಿದ್ದು ನೌಕರರ ಪಿಂಚಣಿಗಾಗಿ ವೇತನದಲ್ಲಿ ಶೇಕಡಾ  10% ರಷ್ಟು ಕಡಿತಗೊಳಿಸುವುದು ಮುಂದುವರೆಯಲಿದೆ. ನಿವೃತ್ತಿ ನಂತರ ನೌಕರರ ವೇತನದಲ್ಲಿ ಹಿಡಿದಿರುವ ಮೊತ್ತದ 60% ಇಡಿಗಂಟನ್ನು ನೌಕರರಿಗೆ ಹಿಂದಿರುಗಿಸುವ ಬಗ್ಗೆ ಖಚಿತತೆ ಇಲ್ಲ, ನೌಕರರ ಭವಿಷ್ಯಕ್ಕೆ ಮಾರಕವಾಗಿರುವ NPS ಮತ್ತು UPS ಎರಡೂ ವಿರೋಧಿಸಿ ಇಂದು ನೌಕರರು  ದೇಶಾದ್ಯಂತ ಕಪ್ಪು ಪಟ್ಟಿ ಕಟ್ಟಿ ಕರ್ತವ್ಯ ನಿರ್ವಹಿಸುವ ಮೂಲಕ OPS ಮರುಸ್ಥಾಪನೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿದ್ದಾರೆ.

ನಗರದಲ್ಲಿರುವ ತಾಲ್ಲೂಕಿನ ಶಕ್ತಿ ಕೇಂದ್ರ ತಾಲ್ಲೂಕು ಆಡಳಿತ ಸೌಧ, ತಾಲ್ಲೂಕು ಪಂಚಾಯತಿ ಕಾರ್ಯಾಲಯ, ಸಾರ್ವಜನಿಕ ಆಸ್ಪತ್ರೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ನೌಕರರು ಕಪ್ಪು ಪಟ್ಟಿ ಧರಿಸಿ OPS ಗೆ ಬೆಂಬಲ ಸೂಚಿಸಿದರು.

ಈ ಸಂದರ್ಭದಲ್ಲಿ NPS ಹಾಗೂ OPS  ಎಲ್ಲಾ ನೌಕರರು ತಾಲ್ಲೂಕು ಮಟ್ಟದ ಅಧಿಕಾರಿಗಳು ಬೆಂಬಲ ನೀಡಿದರು. ತಾಲ್ಲೂಕು NPS ನೌಕರರ ಸಂಘದ ಅಧ್ಯಕ್ಷ ಗಜೇಂದ್ರ ವಿ.ಎನ್,  ಪ್ರಧಾನ ಕಾರ್ಯದರ್ಶಿ ನರಸಿಂಹರಾಜು, ಖಜಾಂಚಿ ಟಿ.ಟಿ.ನರಸಿಂಹಪ್ಪ, ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮುರಳಿ, ಮೋಹನ್,  ಶಿಕ್ಷಕ ಅಶ್ವತಪ್ಪ , ವೆಂಕಟೇಶ್, ನಂದೀಶ್ , ನಬೀ ಸಾಹೇಬ್, ಪರಮೇಶ್ ಹಾಗೂ ರವಿ ಸೇರಿದಂತೆ ವಿವಿಧ ಇಲಾಖೆಯ ನೌಕರರು ಭಾಗವಹಿಸಿದ್ದರು.

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!