Tuesday, December 24, 2024
Homeಜಿಲ್ಲೆಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಪೂಜೆ: ಮಾಜಿ ಸಚಿವ ಎನ್ ಎಚ್ ಶಿವಶಂಕರ ರೆಡ್ಡಿ ಭಾಗಿ.

ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಪೂಜೆ: ಮಾಜಿ ಸಚಿವ ಎನ್ ಎಚ್ ಶಿವಶಂಕರ ರೆಡ್ಡಿ ಭಾಗಿ.

ಗೌರಿಬಿದನೂರು: ಶ್ರೀ ಕೃಷ್ಣ ಅಧರ್ಮವನ್ನು ಮಟ್ಟ ಹಾಕಿ ಧರ್ಮವನ್ನು ಉಳಿಸುತ್ತಾ ಬಂದಿದ್ದಾನೆ. ಕೃಷ್ಣನ ಬಗ್ಗೆ ಎಷ್ಟು ಗುಣಗಾನ ಮಾಡಿದರೂ ಸಾಲದು ಎಂದು ಮಾಜಿ ಸಚಿವ ಎನ್ ಎಚ್ ಶಿವಶಂಕರ ರೆಡ್ಡಿ ತಿಳಿಸಿದರು.

ನಗರದ ನಾಗಯ್ಯ ರೆಡ್ಡಿ ಬಡಾವಣೆಯಲ್ಲಿರುವ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಧ್ವಾರ ಸಹಿತ ಕೌಸ್ತುಭ ಶ್ರೀ ಕಡಗೋಲ ಕೃಷ್ಣ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಶ್ರೀಕೃಷ್ಣ ಪರಮಾತ್ಮ ಜಗತ್ತಿಗೆ ಧರ್ಮದ ಮಾರ್ಗವನ್ನು ತೋರಿಸಿದರು, ಇವತ್ತು ಕೂಡ ಭಗವದ್ಗೀತೆ ಮುಖಾಂತರ ಧರ್ಮ ಸಂಸ್ಥಾಪನೆಯನ್ನು ಯುಗ ಯುಗಗಳಲ್ಲಿ ಕೂಡ ಮಾಡತ್ಕಂತ ಮಾರ್ಗದರ್ಶವನ್ನು ಅವರ ಭಗವದ್ಗೀತೆ ಮುಖಾಂತರ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ, ಮಹಾಭಾರತವನ್ನು ನಡಿಸಿದ ಸೂತ್ರಧಾರಿ ಎಂದು ಪುರಾಣಗಳಲ್ಲಿ ಕೇಳಿದ್ದೇವೆ ಆಗಾಗಿ ಯಾವತ್ತೂ ಕೂಡ ಧರ್ಮಕ್ಕೆ ಜಯವಿರತ್ತೆ ನಾವೇಲ್ಲ ಧರ್ಮದ ಪರ ಇರಬೇಕು ಏನೇ ಕಷ್ಟಕಾರ್ಪಣ್ಯಗಳು ಬಂದರೂ ಕೂಡ ನಾವು ಧೈರ್ಯದಿಂದ ನಡೆದಿಕೊಂಡರೆ ಭಗವಂತ ನಮ್ಮೆಲ್ಲರನ್ನೂ ಕಾಪಾಡುತ್ತಾನೆ, ನಾವು ಧರ್ಮವನ್ನು ರಕ್ಷಣೆ ಮಾಡಿದರೆ ಧರ್ಮವೇ ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದು ಶ್ರೀ ಕೃಷ್ಣ ಪರಮಾತ್ಮ ಹೇಳಿದ್ದಾರೆ.

ನಮ್ಮ ದೇಶದಲ್ಲಿ ಅಲ್ಲದೇ ವಿದೇಶಗಳಲ್ಲೂ ಶ್ರೀಕೃಷ್ಣನನ್ನು ಆರಾಧಿಸುವ ಅಪಾರ ಭಕ್ತರು ಇದ್ದಾರೆ, ಇಡೀ ಜಗತ್ತೆ ಶ್ರೀ ಕೃಷ್ಣನ ಬಗ್ಗೆ ಅಪಾರವಾದ ಭಕ್ತಿ ಗೌರವ ಹೊಂದಿದ್ದಾರೆ , ನಾಗಯ್ಯ ರೆಡ್ಡಿ ಬಡಾವಣೆಯಲ್ಲಿ ಇಲ್ಲಿ ಎಲ್ಲಾ ತರಹದ ಜಾತಿಯ ಜನರು ವಾಸವಾಗಿದ್ದಾರೆ, ಬಹಳಷ್ಟು ಜನರು ಇಲ್ಲಿ ಬಡತನ ಕುಟುಂಬದವರು , ಮಧ್ಯಮ ವರ್ಗದ ಕುಟುಂಬದವರು ಇದ್ದರೂ ಕೂಡ ಸೌಹಾರ್ದತೆಯಿಂದ ಸಹಬಾಳ್ವೆಯಿಂದ ಯಾವುದೋ ಕೂಡ ಜಗಳಯಿಲ್ಲದೆ ,ಬೇಧವಿಲ್ಲದೆ ಜೀವನ ನಡೆಸುತ್ತಿದ್ದಾರೆ, ಇಲ್ಲಿ ಎಲ್ಲಾ ಧರ್ಮದ ದೇವಸ್ಥಾನಗಳು ಇಲ್ಲಿ ನಿರ್ಮಿಸಿದ್ದಾರೆ ಅದುದರಿಂದ ಎಲ್ಲಾ ದೈವಶಕ್ತಿಗಳು ಇರುವಂತ ಸನ್ನಿಧಿಯಾಗಿದೆ ಅದರಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಇಲ್ಲಿನ ನಿವಾಸಿಗಳಿಗೆ ಶ್ರೀಕೃಷ್ಣ ಆಶೀರ್ವಾದ ಮಾಡಲಿ ಅವರ ಕೃಪೆ ಎಲ್ಲಾರ ಮೇಲೆ ಇರಲಿ ಹಾಗೇ ಈ ದಿನ ಪೂಜೆಯಲ್ಲಿ ಪಾಲ್ಗೊಂಡಿದಕ್ಕೆ ಸಂತೋಷವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಗೋಪಾಲ ಕೃಷ್ಣಚಾರ್, ಸುಧೀಂದ್ರ ಚಾರ್ ,ಪ್ರಾಣೇಶ್, ವೆಂಕಟೇಶಪ್ಪ, ನರಸಿಂಹಪ್ಪ, ಬಡಗಿ ವೆಂಕಟೇಶಪ್ಪ, ಲಾಲಾ ಸಾಬ್, ಸವಿಗ್ನಮ್ಮ, ಕಮಲ, ಪದ್ಮ, ಲಕ್ಷ್ಮಿ, ವಿಜಯಲಕ್ಷ್ಮಿ, ಕೃಷ್ಣಪ್ಪ , ಜಗನ್ನಾಥ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!