Tuesday, December 24, 2024
Homeಜಿಲ್ಲೆತೀರ್ಥ ಶಾಲೆಯಲ್ಲಿ ಕೃಷ್ಣೋತ್ಸವ, ನಂದ ಲೀಲೋತ್ಸವ.

ತೀರ್ಥ ಶಾಲೆಯಲ್ಲಿ ಕೃಷ್ಣೋತ್ಸವ, ನಂದ ಲೀಲೋತ್ಸವ.

ಗೌರಿಬಿದನೂರು: ಪಟ್ಟಣದ ಮುನೇಶ್ವರ ಬಡಾವಣೆಯ ತೀರ್ಥ ಶಾಲೆಯಲ್ಲಿ ಭಗವಾನ್ ಶ್ರೀ ಕೃಷ್ಣ ಪರಮಾತ್ಮನ ಜಯಂತಿ ಪ್ರಯುಕ್ತ ವಿಜೃಂಭಣೆಯಿಂದ ಕೃಷ್ಣೋತ್ಸವ ಮತ್ತು ನಂದ ಲೀಲೋತ್ಸವವನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು.


ಕಿಶೋರ- ಕಿಶೋರಿಯರ ಕೃಷ್ಣ ರಾಧೆಯರ ಕೊಳಲು,ಕೊಡ ಬಾಲ ಮುರಳಿ ಕೃಷ್ಣರ ಮತ್ತು ಬಾಲರಾಧೆಯರ ಛದ್ಮ ವೇಷಗಳು ನಂದಗೋಕಲದಂತೆ ಭಾಸವಾಯಿತು. ದೀಪಾ ಆರಾಧನೆ, ಕೃಷ್ಣ ಲೀಲೆ,ಕೀರ್ತನೆ, ಭಜನೆ ಮತ್ತು ಸಾಂಪ್ರದಾಯಿಕ ನೃತ್ಯ ಗಾಯನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಈ ಸುಸಂದರ್ಭದಲ್ಲಿ ಪೋಷಕರ ಮತ್ತು ಭಕ್ತರ ಮನಸೂರೆಗೊಂಡವು. ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಥೆಯ ಅಧ್ಯಕ್ಷ ಡಾ.ಕೆ.ವಿ. ಪ್ರಕಾಶ್ ಮಾತನಾಡಿ,ಭಗವಾನ್ ಶ್ರೀ ಕೃಷ್ಣನ ಸಂದೇಶಗಳು ಮತ್ತು ಭಗವದ್ಗೀತೆ ಮನುಕುಲಕ್ಕೆ ದಾರಿ ದೀಪ.ಮಾಧವನ ಮಾಣಿಕ್ಯದ ಮಾತುಗಳು ಮತ್ತು ಶ್ರೀ ಕೃಷ್ಣನ ಚೈತನ್ಯದಾಯಕ ತತ್ವ ಲಹರಿಗಳು ಪೃಥ್ವಿಯ ಮೇಲೆ ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗುತ್ತಿವೆ. ಧರ್ಮೋ ರಕ್ಷತಿ ರಕ್ಷಿತಃ, ಶ್ರೀ ಕೃಷ್ಣಂ ವಂದೇ ಜಗದ್ಗುರಂ ಎಂಬ ಪ್ರೇರಣೆಯ ಮಾತುಗಳಿಂದ ಮಾನವನಲ್ಲಿ ಮಾನವನನ್ನು ಕಾಣಬೇಕು. ಸಂಸಾರ ದಾಟಿಸುವ ಶ್ರೀ ಕೃಷ್ಣ ಭಕ್ತಿಯ ಅನಂತಸಾಗರ, ಅಖಂಡ ಬ್ರಹ್ಮಾಂಡದ ಜಗದ್ಗುರು. ಆದ್ದರಿಂದ ಶ್ರೀ ಕೃಷ್ಣ ತತ್ವವನ್ನು ಅಳವಡಿಸಿಕೊಂಡರೆ ಜೀವನ ಪರಿಪೂರ್ಣವಾಗುತ್ತದೆ. ಭಗವಂತನ ಸಂದೇಶ ಸಮಾಜಕ್ಕೆ ಸಕಾಲಿಕ ಮತ್ತು ಮೌಲಿಕ.ಭಗವಾನ್ ಶ್ರೀಕೃಷ್ಣನ ವಚನಾಮೃತಗಳು ಎಂದೆಂದಿಗೂ ಶಾಶ್ವತ ಮತ್ತು ಅಮರ ಎಂದು ಅಭಿಪ್ರಾಯಪಟ್ಟರು. ಮುಖ್ಯ ಶಿಕ್ಷಕಿ ಎಂ. ಶೋಭಾ ಪೂಜೆ ನೆರವೇರಿಸಿ ಮಾತನಾಡಿ, ಭಗವಾನ್ ಶ್ರೀ ಕೃಷ್ಣನ ಉತ್ಕೃಷ್ಟವಾದ ಭಕ್ತಿಯ ಸಾರವನ್ನು ನಮ್ಮ ಜೀವನದಲ್ಲಿ ಜೀವಂತಗೊಳಿಸುವ ದಿನವೇ ಜನ್ಮಾಷ್ಟಮಿ.ಕೃಷ್ಣನನ್ನು ನಂದ ಎಂದು ಕರೆಯುವರು.ನಂದಾ ಎಂದರೆ ಆನಂದ, ಜ್ಞಾನ, ಸಂತೋಷ ಮತ್ತು ಅನಂತತೆಯ ಸಾಕಾರ ಎಂದು ತಿಳಿಸಿದರು. ವಿಶೇಷವಾಗಿ ಮುಸ್ಲಿಂ ಬಾಂಧವರ ಮಕ್ಕಳು ಛದ್ಮ ವೇಷ ಧರಿಸಿ ಭಾವೈಕ್ಯತೆಯನ್ನು ಬಿಂಬಿಸಿದರು. ಕೃಷ್ಣೋತ್ಸವದಲ್ಲಿ ಯೂನಿಯನ್ ಬ್ಯಾಂಕ್ ಪ್ರಬಂಧಕ ಚಂದ್ರಶೇಖರ್, ಪತ್ರಕರ್ತರಾದ ಪ್ರದೀಪ್, ಸಮೀರಾಚಾರಿ, ಸಂಕಲ್ಪ ಗೌರೀಶ್, ಶಾಲಾ ಶಿಕ್ಷಕಿಯರಾದ ಭಾರ್ಗವಿ, ಸಾಯಿ ಪ್ರಿಯ, ಚಂದ್ರಮ್ಮ,ಪೋಷಕರು ಮತ್ತು ಭಗವಂತನ ಭಕ್ತಾದಿಗಳು ಉಪಸ್ಥಿತರಿದ್ದರು.

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!