Monday, December 23, 2024
Homeರಾಜ್ಯಭ್ರಷ್ಟ ಎಸಿಗಳ ವಿರುದ್ಧ ಕ್ರಮಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚನೆ.!

ಭ್ರಷ್ಟ ಎಸಿಗಳ ವಿರುದ್ಧ ಕ್ರಮಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚನೆ.!

ಬೆಂಗಳೂರು:  ಭ್ರಷ್ಟಾಚಾರದಲ್ಲಿ ಮುಳುಗಿರುವ ಉಪ ವಿಭಾಗಾಧಿಕಾರಿಗಳ ವಿರುದ್ದ ಗಂಭೀರವಾದ ದೂರುಗಳ ಬಂದಿರುವ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿ ಇರುವ ಪ್ರಕರಣಗಳನ್ನು ವಿಲೇವಾರಿ ಮಾಡದಂತಹ ಉಪ ವಿಭಾಗಾಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ರಾಜ್ಯದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾ‌ರ್ ಕಟಾರಿಯಾ ಅವರಿಗೆ ಸೂಚಿಸಿದ್ದಾರೆ.

ಮಂಡ್ಯ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ತುಮಕೂರು, ಕೊಪ್ಪಳ, ಮೈಸೂರು, ಮಂಗಳೂರು ಹಾಗೂ ಬೆಳಗಾವಿ ಜಿಲ್ಲೆಗಳ ಆಯ್ದ 30 ಉಪ-ವಿಭಾಗಾಧಿಕಾರಿಗಳು ಹಾಗೂ ವಲಯ ಆಯುಕ್ತರ ಜೊತೆ ವಿಡಿಯೊ ಸಂವಾದದ ಮೂಲಕ ಅವರು ಸಭೆ ನಡೆಸಿದ್ದಾರೆ. ಲೋಕಸಭಾ ಚುನಾವಣೆಯ ನಂತರ ಪ್ರಕರಣಗಳು ಇತ್ಯರ್ಥವಾಗದೇ ಇರುವುದನ್ನು ಗಮನಿಸಿದ ಅವರು ಅಧಿಕಾರಿಗಳ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ

‘ಹಲವು ವರ್ಷಗಳಿಂದ ನ್ಯಾಯಾಲಯಗಳಿಗೆ ಜನ ಅಲೆದಾಡಿ ವ್ಯವಸ್ಥೆಯ ಮೇಲೆ ವಿಶ್ವಾಸ ಕಳೆದುಕೊಂಡು ಬೇಸರಗೊಂಡಿದ್ದಾರೆ. ಇದಕ್ಕೆ ಅಧಿಕಾರಿಗಳೇ ಹೊಣೆಯಾಗಿದ್ದು, ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ಶೀಘ್ರವೇ ಇತ್ಯರ್ಥಗೊಳಿಸಬೇಕು ಎಂದು ಎಲ್ಲಾ ಅಧಿಕಾರಿಗಳಿಗೂ ಗುರಿ ನಿಗದಿ ಮಾಡಲಾಗಿತ್ತು. ಮಾರ್ಚ್‌ವರೆಗೆ ವಿಲೇವಾರಿ ವೇಗವಾಗಿ ಇತ್ತು. ಆ ನಂತರ ಇಳಿಮುಖವಾಗಿದೆ. ಪ್ರಶ್ನಿಸಿದರೆ ಚುನಾವಣೆಯ ನೆಪ ಹೇಳುತ್ತಾರೆ. ದುಡ್ಡು ಮಾಡೋದಕ್ಕೆ ಚುನಾವಣೆ ಅಡ್ಡ ಬರುವುದಿಲ್ಲ. ಆದರೆ ಜನರ ಕೆಲಸ ಮಾಡಲು ಮಾತ್ರ ಚುನಾವಣೆ ಅಡ್ಡಬರುತ್ತದೆಯೇ’ ಎಂದು ಅಧಿಕಾರಿಗಳನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡು ಪ್ರಶ್ನಿಸಿದರು.

ರಾಜ್ಯದಾದ್ಯಂತ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಒಟ್ಟು 36,430 ಪ್ರಕರಣಗಳು ಬಾಕಿ ಇವೆ. ಬೆಂಗಳೂರು ಉತ್ತರ ವಲಯದಲ್ಲೇ ಗರಿಷ್ಠ, 5,419 ಪ್ರಕರಣಗಳು ಮತ್ತು ಬೆಂಗಳೂರು ದಕ್ಷಿಣ ವಲಯದಲ್ಲಿ 4,351 ಪ್ರಕರಣಗಳು ಬಾಕಿ ಇವೆ. ಜೊತೆಗೆ ಈ ಎರಡೂ ವಿಭಾಗಗಳಲ್ಲಿ ತಮ್ಮ ವ್ಯಾಪ್ತಿಗೆ ಬರದೇ ಇರುವ ಪ್ರಕರಣಗಳನ್ನೂ ಸಹ ದಾಖಲಿಸಿಕೊಂಡಿದ್ದಾರೆ ಎಂಬುದನ್ನು ಸಚಿವರು ಗಮನಿಸಿದ್ದಾರೆ. ಇಂತಹ ಪ್ರಕರಣಗಳನ್ನು ದಾಖಲಿಸಿಕೊಳ್ಳಲು ಎಷ್ಟು ಹಣ ತೆಗೆದುಕೊಂಡಿದ್ದೀರಿ’ ಎಂದು ಉತ್ತರ ವಿಭಾಗದ ವಿಭಾಗಾಧಿಕಾರಿ ಪ್ರಮೋದ್ ಪಾಟೀಲ್‌ ಮತ್ತು ದಕ್ಷಿಣ ವಿಭಾಗದ ವಿಭಾಗಾಧಿಕಾರಿ ರಜನೀಕಾಂತ ಚೌವ್ಹಾಣ್ ಅವರನ್ನು ಪ್ರಶ್ನಿಸಿದರು.

ಐದು ತಿಂಗಳಿಂದ ಒಂದೂ ಪ್ರಕರಣ ವಿಲೇವಾರಿ ಮಾಡದ ಮಧುಗಿರಿ ಉಪ-ವಿಭಾಗಾಧಿಕಾರಿ ಶಿವಪ್ಪ ಹಾಗೂ ತುಮಕೂರು ಉಪ-ವಿಭಾಗಾಧಿಕಾರಿ ಗೌರವ್ ಶೆಟ್ಟಿ ಅವರನ್ನು ತರಾಟೆಗೆ ತೆಗೆದುಕೊಂಡರು. ಉನ್ನತ ಹುದ್ದೆಗಳಲ್ಲಿರುವ ಅಧಿಕಾರಿಗಳು ಲಂಚಬಾಕರಾಗಿ ಕೆಲಸ‌ಮಾಡುತ್ತಿರುವುದಕ್ಕೆ ಇದೊಂದು ಸಾಕ್ಷಿಯಾಗಿದೆ. ಪ್ರಾಮಾಣಿಕವಾಗಿ ತಮ್ಮ ಚೌಕಟ್ಟಿನಲ್ಲಿ ಸಂವಿಧಾನ ಬದ್ದ, ಕಾನೂನು ಬದ್ದವಾಗಿ ಕೆಲಸ ಮಾಡದೇ ಅಡ್ಡದಾರಿಗಳಲ್ಲಿ ದುಡ್ಡು ಮಾಡೋದಕ್ಕೆ ಹೊರಟಿದ್ದು ಮತ್ತಷ್ಟು ಇಲಾಖೆಗಳ ಅಧಿಕಾರಿಗಳ ವಿರುದ್ದ ತನಿಖೆಯಾದಲ್ಲಿ ಭ್ರಷ್ಟರು ಸಿಕ್ಕಿಬೀಳಲಿದ್ದಾರೆ.!

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!