ಗೌರಿಬಿದನೂರು : ನಗರದ ಅಭಿಲಾಶ್ ಚಿತ್ರಮಂದಿರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳು ಪಟಾಕಿ ಸಿಡಿಸಿ ಕೇಕ್ ಕತ್ತರಿಸುವ ಮೂಲಕ ತಮ್ಮ ಹೆಚ್ಚಿನ ನಾಯಕ ನಟನ ಹುಟ್ಟುಹಬ್ಬವನ್ನು ಆಚರಣೆ ಮಾಡಿದರು.
ಇದೇ ವೇಳೆ ಅಭಿಮಾನಿ ಮುರುಳಿ ಮಾತನಾಡಿ ಚಿರಂಜೀವಿ ರವರ ಅಭಿಮಾನಿಗಳ ಸಮ್ಮುಖದಲ್ಲಿ ಅವರ 69ನೇ ಹುಟ್ಟುಹಬ್ಬ ಆಚರಣೆ ಮಾಡಲಾಯಿತು ಚಿರಂಜೀವಿ ರವರ ಗುಣ ಹೇಗಂದರೆ ಬ್ಲಡ್ ಬ್ಯಾಂಕ್, ಐ ಬ್ಯಾಂಕ್ ಸೇರಿದಂತೆ ಕೊರೋನಾ ಸಮಯದಲ್ಲಿ ಅವರು ಮಾಡಿದಂತಹ ಸೇವೆ ಇಡೀ ದೇಶವೇ ಕಂಡಿದೆ ಅಂಥವರ ಹುಟ್ಟುಹಬ್ಬವನ್ನು ನಾವು ಆಚರಣೆ ಮಾಡುತ್ತಿರುವುದು ಬಹಳ ದೊಡ್ಡ ಸಂಗತಿ ಎಂದರು.
ಅಭಿಮಾನಿಗಳು ಚಿರಂಜೀವಿ ರವರ ಪರ ಜೈಕಾರಗಳು ಕೂಗಿದರು. ಜೈ ಚಿರಂಜೀವಿ ಇದೆ ವೇಳೆ ಅಭಿಮಾನಿಗಳಾದ ಅರುಣ್ ಕುಮಾರ್, ಪ್ರದೀಪ್, ಮಹದೇವ್, ಅಶ್ವಥ್, ಮುನಿಸ್ವಾಮಿ, ನರಸಿಂಹಮೂರ್ತಿ ಉಬರ್, ಮಂಜುನಾಥ್, ಮನೋಜ್, ಮೂರ್ತಿ ಇತರರು ಉಪಸ್ಥಿತರಿದ್ದರು