ಶಿಡ್ಲಘಟ್ಟ : ಕಾವೇರಿ 2.0 ತಂತ್ರಾಂಶದಲ್ಲಿ ಈ ಹಿಂದೆಯಲ್ಲಾ ಆಯಾ ತಾಲ್ಲೂಕಿನಲ್ಲೆ ಆಯಾ ತಾಲ್ಲೂಕು ವ್ಯಾಪ್ತಿಗೆ ಸಂಬಂಧಪಟ್ಟ ಜಮೀನು, ನಿವೇಶನಗಳ ವಿವಿಧ ಬಗೆಯ ದಸ್ತಾವೇಜುಗಳು ತಾಲ್ಲೂಕು ಉಪ ನೋಂದಣಿ ಕಛೇರಿಯಲ್ಲಿ ನೋಂದಣಿ ಮಾಡಬೇಕಾಗಿತ್ತು. ಇನ್ನು ಮುಂದೆ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ತಾಲ್ಲೂಕುಗಳು ಅಂದರೆ ಶಿಡ್ಲಘಟ್ಟ, ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರು, ಚಿಂತಾಮಣಿ, ಚಿಕ್ಕಬಳ್ಳಾಪುರ, ಜಿಲ್ಲೆಯಲ್ಲಿ ಎನಿವೇರ್ ರಿಜಿಸ್ಟ್ರೇಷನ್ ವ್ಯವಸ್ಥೆ ಜಾರಿ ಮಾಡಿ ಸರ್ಕಾರದ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ( ಮುದ್ರಾಂಕ ಮತ್ತು ನೋಂದಣಿ) A.G ವೀಣಾ ಅವರು ಅಧಿಸೂಚನೆ ಹೊರಡಿಸಿದ್ದಾರೆ.
ಈ ಹಿಂದೆ ಆಯಾ ತಾಲ್ಲೂಕು ವ್ಯಾಪ್ತಿಯ ಜಮೀನು/ ನಿವೇಶನಗಳ ದಸ್ತಾವೇಜುಗಳು ಆಯಾ ತಾಲ್ಲೂಕಿನ ಉಪ ನೋಂದಣಾಧಿಕಾರಿಗಳ ಕಛೇರಿಗಳಿಗೆ ಕಾವೇರಿ 2.0 ತಂತ್ರಾಂಶದ ಗಣಕಯಂತ್ರ ನೀಡಿದ ನಿಗಧಿತ ಸಮಯಕ್ಕೆ ತೆರಳಿ ನೋಂದಣಿ ಮಾಡಿಸಬೇಕಾಗಿತ್ತು. ಪ್ರಸ್ತುತ ಎನಿವೇರ್ ರಿಜಿಸ್ಟ್ರೇಷನ್ ವ್ಯವಸ್ಥೆ ಸರ್ಕಾರ ಜಾರಿ ಮಾಡಿ ಜನ ಸಂದಣಿಯಿಲ್ಲದೆ ಜಿಲ್ಲೆಯಾದ್ಯಂತ ದಸ್ತಾವೇಜು ನೋಂದಣಿಗೆ ವಿಶೇಷ ವ್ಯವಸ್ಥೆ ಜಾರಿಗೊಳಿಸಿದೆ. ಆ ಮೂಲಕ ಕಾವೇರಿ 2.0 ತಂತ್ರಾಂಶ ಮತ್ತಷ್ಟು ಅನುಕೂಲ ಹಾಗೂ ಸರಳಗೊಳಿಸಿದೆ.
ಈಸಂಬಂಧ ಪತ್ರಿಕೆಯೊಂದಿಗೆ ಶಿಡ್ಲಘಟ್ಟ ತಾಲ್ಲೂಕು ಉಪ ನೋಂದಣಾಧಿಕಾರಿ ಎನ್.ಆರ್. ರೇಣುಕಾ ಪ್ರಸಾದ್ ಅವರು ಮಾತನಾಡಿ ನಾಗರೀಕರು, ಸಾರ್ವಜನಿಕರು ಯಾವುದೇ ವ್ಯಕ್ತಿಯ ದಸ್ತಾವೇಜುಗಳ ನೋಂದಣಿ ಪ್ರಕ್ರಿಯೆ ಜನ ಸಂದಣಿಯಿಲ್ಲದೆ ತ್ವರಿತಗತಿಯಲ್ಲಿ ಆಗಬೇಕು ಜನರಿಗೆ ಮತ್ತಷ್ಟು ಅನುಕೂಲವಾಗಬೇಕು ಎಂಬ ಉತ್ತಮ ಉದ್ದೇಶದಿಂದ ಈಗಾಗಲೇ ಸರ್ಕಾರ ಕಾವೇರಿ 2.0 ತಂತ್ರಾಂಶ ಅನುಷ್ಟಾನಗೊಳಿಸಿದ್ದು ನೋಂದಣಿ ಪ್ರಕಿಯೆ ನಡೆಯುತ್ತಿದೆ. ಪ್ರಸ್ತುತ ಕಾವೇರಿ 2.0 ತಂತ್ರಾಂಶ ಸರಳಗೊಳಿಸಿ ಸಾರ್ವಜನಿಕರಿಗೆ ಎನಿವೇರ್ ರಿಜಿಸ್ಟ್ರೇಷನ್ ವ್ಯವಸ್ಥೆ ಜಾರಿಗೊಳಿಸಿದೆ. ಜಿಲ್ಲೆಯ ನಾಗರೀಕರು, ಸಾರ್ವಜನಿಕರು, ಅವಕಾಶವನ್ನ ಸದುಪಯೋಗಪಡಿಸಿಕೊಳ್ಳಬೇಕು ಜಿಲ್ಲೆಯಾದ್ಯಂತಹ ಕ್ರಯಪತ್ರ, ವಿಭಾಗ, ದಾನ, ಜಿಪಿಎ, ಕ್ರಯದ ಕರಾರು, ಇನ್ನಿತರೆ ವಿವಿಧ ಬಗೆಯ ದಸ್ತಾವೇಜುಗಳು ಯಾವುದೇ ರೀತಿಯ ಜನ ಸಂದಣಿ ಇಲ್ಲದೆ ತ್ವರಿತಗತಿಯಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಇದರಿಂದ ಜನರಿಗೆ ತುಂಬಾ ಅನುಕೂಲ ಹಾಗೂ ಮತ್ತಷ್ಟು ತಂತ್ರಾಂಶ ಸರಳವಾಗಿದೆ ಎಂದು ಮಾಹಿತಿ ನೀಡಿದರು.
ಅಂತೂ ಸರ್ಕಾರ ಕಾವೇರಿ 2.0 ತಂತ್ರಾಂಶದಲ್ಲಿ ಎನಿವೇರ್ ರಿಜಿಸ್ಟ್ರೇಷನ್ ವ್ಯವಸ್ಥೆ ಜಾರಿಗೊಳಿಸಿರುವುದರಿಂದ ಯಾವುದೇ ವ್ಯಕ್ತಿಯು ನೋಂದಣಿ ದಸ್ತಾವೇಜನ್ನು ಜನ ಸಂದಣಿ ಇಲ್ಲದ ಜಿಲ್ಲೆಯ ವ್ಯಾಪ್ತಿಯ ಯಾವುದಾದರು ಉಪನೋಂದಣಿ ಕಛೇರಿಯಲ್ಲಿ ತಮ್ಮ ಆಸ್ತಿ ದಸ್ತಾವೇಜನ್ನು ನೋಂದಾಯಿಸಿಕೊಳ್ಳಬಹುದಾಗಿದೆ ‘ ಎನಿವೇರ್ ರಿಜಿಸ್ಟ್ರೇಷನ್’ ವ್ಯವಸ್ಥೆಯಡಿ ಅವಕಾಶ ನೀಡಿರುವುದು ವಿನೂತನ ವಿಶೇಷವಾಗಿದೆ. ಇನ್ನು ಮುಂದೆ ಜಿಲ್ಲೆಯಲ್ಲಿ ಯಾವ ತಾಲ್ಲೂಕಿನಲ್ಲಿ ಬೇಕೋ ಅಲ್ಲಿ ದಸ್ತಾವೇಜುಗಳು ನೋಂದಣಿ ಮಾಡಿಕೊಂಡು ಅನುಕೂಲ ಪಡೆಯಬಹುದಾಗಿದೆ. ಇದರಿಂದ ಜನರಿಗೆ ಮತ್ತಷ್ಟು ಉಪಯೋಗವಾಗಲಿದೆ.