Monday, December 23, 2024
Homeಅಪರಾಧಪುರಾತನ ದೇವಾಲಯ ಟಾರ್ಗೆಟ್ ಕಿಡಿಗೇಡಿಗಳಿಂದ ನಿಧಿಗಾಗಿ ಶೋಧ.!

ಪುರಾತನ ದೇವಾಲಯ ಟಾರ್ಗೆಟ್ ಕಿಡಿಗೇಡಿಗಳಿಂದ ನಿಧಿಗಾಗಿ ಶೋಧ.!

ಗೌರಿಬಿದನೂರು :  ತಾಲ್ಲೂಕು ನಗರಗೆರೆ ಹೋಬಳಿಯ ಕೆರಒಳಗಿನ ಹಳ್ಳಿಯ ಶ್ರೀ ಬಂಡೆ ಲಿಂಗೇಶ್ವರ ಸ್ವಾಮಿ ದೇವಸ್ಥಾನದ ಹೊಸಲನ್ನು ಸಿಡಿ ಮದ್ದಿನಿಂದ ಬ್ಲಾಸ್ಟ್ ಮಾಡಿರುವ ಘಟನೆ 17-08-2024 ರಂದು ಶನಿವಾರ ಮಧ್ಯ ರಾತ್ರಿ ನಡೆದಿದೆ.

ಈ ಘಟನೆಯ ಸಲುವಾಗಿ ರಾಷ್ಟ್ರೀಯ ರೈತ ಸೇನೆ ಅಧ್ಯಕ್ಷರಾದ ವಿವೇಕ ರೆಡ್ಡಿ ರವರು ಮಾತನಾಡಿ ಈ ದೇವಾಲಯ ಸುಮಾರು 400 ವರ್ಷಗಳ ಇತಿಹಾಸವುಳ್ಳ ದೇವಾಲಯವಾಗಿದೆ ಇದನ್ನು ಕೃಷ್ಣದೇವರಾಯರ ಕಾಲದಲ್ಲಿ ಲೇಪಾಕ್ಷಿ ದೇವಾಲಯವನ್ನು ಕಟ್ಟುವಾಗ ಇದೇ ದಾರಿಯಲ್ಲಿ ಹೋಗಬೇಕಾದರೆ ಒಂದು ದಿನ ಇಲ್ಲಿ ಇದ್ದು ವಿಶ್ರಾಂತಿ ಪಡೆಯಲು ಈ ದೇವಸ್ಥಾನವನ್ನು ನಿರ್ಮಿಸಿದ್ದಾರೆ ಆದರೆ ಈ ದೇವಸ್ಥಾನದ ಪುರಾತನವಾದ್ದರಿಂದ ಇಲ್ಲಿ ನಿದಿಗಳಿವೆ ಎಂದು ಕೆಲವು ದುಷ್ಕರ್ಮಿಗಳು ದೇವಾಲಯದ ಬೀಗವನ್ನು ಮುರಿದು ದೇವಾಲಯದ ಹೊಸಲನ್ನು ಸಿಡಿಮದ್ದಿನಿಂದ ಬ್ಲಾಸ್ಟ್ ಮಾಡಿದ್ದಾರೆ ಇದು ಮೂರನೇ ಸಲ ಆಗಿರೋದ್ರಿಂದ ಈ ಕೂಡಲೇ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ದುಷ್ಕರ್ಮಿಗಳನ್ನು ಬಂಧಿಸಿ ಕಾನೂನು ಚೌಕಟ್ಟಿನಲ್ಲಿ ಶಿಕ್ಷೆಗೆ ಒಳಪಡಿಸಬೇಕು ಎಂದು ಮನವಿ ಮಾಡಿದರು

ಈ ಸಂದರ್ಭದಲ್ಲಿ ಊರಿನ ಮುಖಂಡರಾದ ವಿ.ಎಂ. ಮಂಜುನಾಥ್, ಹಾಗೂ ಊರಿನ ಗ್ರಾಮಸ್ಥರು ಭಾಗವಹಿಸಿದ್ದರು

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!