Monday, December 23, 2024
Homeಕ್ರೀಡೆದೇಹದ  ಸದೃಡತೆಗೆ ಕ್ರೀಡೆ ಅತ್ಯಗತ್ಯ :  ಬಿ.ಎಂ. ರಾಧಾಕೃಷ್ಣ

ದೇಹದ  ಸದೃಡತೆಗೆ ಕ್ರೀಡೆ ಅತ್ಯಗತ್ಯ :  ಬಿ.ಎಂ. ರಾಧಾಕೃಷ್ಣ

ಶಿಡ್ಲಘಟ್ಟ: ಕ್ರಿಡೆಯಲ್ಲಿ – ಸೋಲು ಗೆಲುವು ಸಹಜ ಕ್ರಿಡೆಯಲ್ಲಿ ಭಾಗವಹಿಸುವುದು ಮುಖ್ಯವಾಗುತ್ತದೆ. ಜೊತೆಗೆ ವ್ಯಕ್ತಿಯ ಸರ್ವತೋಮುಖ ಏಳಿಗೆಗೆ ಕ್ರೀಡೆ ಅಗತ್ಯವಾಗಿದೆ. ದೇಹವನ್ನು ಸದೃಡವಾಗಿ ಕಾಪಾಡಿಕೊಳ್ಳಲು ಕ್ರೀಡೆ ಅತ್ಯಗತ್ಯ. ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಹೆಚ್ಚಿನ ಕ್ರೀಡೋತ್ಸವಗಳು ನಡೆಯುವಂತಾಗಲಿ ಎಂದು ಶಿಕ್ಷಕ ಬಿ.ಎಂ ರಾಧಾಕೃಷ್ಣ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಜಯಂತಿಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶನಿವಾರದಂದು ಆಯೋಜಿಸಿದ್ದ “ಗ್ರಾಮೀಣ ಕ್ರಿಡೋತ್ಸವ” ಖೋ ಖೋ ವಾಲಿ ಬಾಲ್, ಕ್ರೀಡೆಗಳು ನಡೆಯಿತು. ಜಿಲ್ಲಾ ಪಂಚಾಯತ್ ಚಿಕ್ಕಬಳ್ಳಾಪುರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಚಿಕ್ಕಬಳ್ಳಾಪುರ ಹಾಗೂ ಭಗತ್ ಸಿಂಗ್ ಅಥ್ಲೆಟಿಕ್ ಅಸೋಸಿಯೇಷನ್, ಮತ್ತು ಕರ್ನಾಟಕ ರಾಜ್ಯ ಯುವ ಸಂಘ ಸಂಸ್ಥೆಗಳ ಒಕ್ಕೂಟದ ವತಿಯಿಂದ 2024-25 ನೇ ಸಾಲಿನ ಗ್ರಾಮೀಣ ಕ್ರೀಡೋತ್ಸವ ಆಯೋಜಿಸಲಾಗಿತ್ತು.  ವಾಲಿ ಬಾಲ್ , ಖೋ ಖೋ ಆಟಗಳಲ್ಲಿ ಮಹಿಳಾ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ವಿಜೇತರಾದ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

ದೈಹಿಕ ಶಿಕ್ಷಕಿ ಸಿಕೆ. ಮಂಜುಳಾ, ಅವರು ಮಾತನಾಡಿ ಕ್ರೀಡೆ ವ್ಯಕ್ತಿಯನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯವಾಗಿಡುತ್ತದೆ. ಕ್ರೀಡೆಗೆ ವಯೋಮಾನದ ಅಂತರವಿಲ್ಲ. ಪ್ರತಿಯೊಬ್ಬರೂ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು. ಇಂದಿನ ಯುವ ಜನತೆಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು  ಎಂದರು.

ಈ ಸಂದರ್ಭದಲ್ಲಿ ಆಯೋಜಕರಾದ ರಾಷ್ಟ್ರೀಯ ಕ್ರೀಡಾಪಟು ಜಯಂತಿಗ್ರಾಮ ನಾರಾಯಣಸ್ವಾಮಿ, ಯುವ ಮುಖಂಡರಾದ ರವೀಂದ್ರ, ಭಿನ್ನಮಂಗಲ ಗಂಗಾಧರ, ಶಾಲಾ ಶಿಕ್ಷಕರಾದ ಗಾಯಿತ್ರಿ,  ಮೆಹಬೂಬ ಪಾಷ, ಮತ್ತಿತರರು ಉಪಸ್ಥಿತರಿದ್ದರು.

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!