ಶಿಡ್ಲಘಟ್ಟ : ರಾಷ್ಟ್ರೀಯ ನಾಡ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತದಿಂದ ಪತ್ರಕರ್ತರ ನಡುವೆ ತಾರತಮ್ಯ ಮಾಡಿರುವ ಪ್ರಸಂಗ 78 ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ನಡೆಯಿತು.
ಹೌದು ತಾಲ್ಲೂಕಿನಲ್ಲಿ ಹಲವು ವರ್ಷಗಳಿಂದ ದಿನ ಪತ್ರಿಕೆ, ದೃಶ್ಯ ಮಾದ್ಯಮಗಳಲ್ಲಿ ವರದಿಗಾರರಾಗಿ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿದ್ದಾರೆ. ಮರಕ್ಕೆ ರೆಂಬೆ – ಕೊಂಬೆಗಳಲ್ಲೆ ಒಂದೇ, ತಾಯಿಗೆ ಮಕ್ಕಳೆಲ್ಲಾ ಒಂದೇ ಎಂಬ ಮಾತಿದೆ. ತಾಲ್ಲೂಕಿನಲ್ಲಿ 2-3 ಪತ್ರಕರ್ತರ ಸಂಘಗಳಿವೆ, ಯಾವುದೇ ಸಂಘಗಳಲ್ಲಿ ಇಲ್ಲದೆ ಹೊರಗಡೆ ಉಳಿದಿರುವವರು ಇದ್ದಾರೆ. ಕೇವಲ ಸಂಘಗಳಲ್ಲಿ ಇದ್ದವರು ಮಾತ್ರ ಪತ್ರಕರ್ತರೇ.? ಎಂಬ ಪ್ರಶ್ನೆ ಮೂಡುತ್ತದೆ. ರಾಜ್ಯ ಮಟ್ಟದ ದಿನ ಪತ್ರಿಕೆಗಳಿಗೆ ವರದಿಗಾರಿಕೆ ಮಾಡುವ ಪತ್ರಕರ್ತರಿದ್ದಾರೆ. ಆದರೆ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಎಲ್ಲರನ್ನೂ ಸಮಾನವಾಗಿ ಕಾಣುವುದು ತಾಲ್ಲೂಕು ಆಡಳಿತದ ಕರ್ತವ್ಯ ಹಾಗೂ ಜವಬ್ದಾರಿಯಾಗಿರುತ್ತದೆ. ಇದನ್ನ ಮರೆತ ರಾಷ್ಟ್ರಿಯ ನಾಡ ಹಬ್ಬಗಳ ಆಚರಣಾ ಸಮಿತಿ ಕೇವಲ ತಮಗೆ ಬೇಕಾದವರ ಹೆಸರು ಹೇಳಿದ್ದಲ್ಲದೆ ಪತ್ರಕರ್ತರಲ್ಲದವರ ಹೆಸರಿನ ಅಧ್ಯಕ್ಷರನ್ನೂ ವೇದಿಕೆ ಅಹ್ವಾನಿಸಿ ಉಳಿದ ಪತ್ರಕರ್ತರಿಗೆ ಮುಜುಗರ ಉಂಟು ಮಾಡುವುದರ ಜೊತೆಗೆ ತಾರತಮ್ಯ ಮಾಡಿರುವುದು ಅಲ್ಲದೆ ಅಸಮಾನತೆಯನ್ನ ತೋರುವ ಮೂಲಕ ಲೋಪ ಮಾಡಿದ್ದಾರೆ.
ಭಾರತ ಪ್ರಜಾಪ್ರಭುತ್ವ ರಾಷ್ಟ್ರ, ಬಾಬಾ ಸಾಹೇಬ್ ಡಾ ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಅಭಿವ್ಯಕ್ತಿ, ಸಮಾನತೆ, ಸ್ವಾತಂತ್ರ್ಯ, ಕಲ್ಪಿಸಿಕೊಟ್ಟಿದ್ದಾರೆ. ಆದರೆ ಸಂವಿಧಾನದ ಮೂಲ ಆಶಯಗಳು ಪಾಲಿಸುವಲ್ಲಿ ಇಂದಿಗೂ ಅಧಿಕಾರಿಗಳು ವಿಫಲರಾಗಿದ್ದಾರೆ. ಪತ್ರಕರ್ತರು ಸಮಾಜದ ಕಣ್ಣು, ಸಮಾಜದಲ್ಲಿನ ಅಂಕುಡೊಂಕುಗಳು ತಿದ್ದಿ ಸಮಾಜದಲ್ಲಿ ನಡೆಯುವ ವಾಸ್ತವ ಘಟನೆಗಳು, ಜನರಿಗೆ ಪತ್ರಿಕೆ, ಮಾದ್ಯಗಳ ಮೂಲಕ ತಿಳಿಸುವ ಕೆಲಸದಲ್ಲಿ ಸಾಕಷ್ಟು ಪರ್ತಕರ್ತರು ತೊಡಗಿಸಿಕೊಂಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಪತ್ರಕರ್ತರಿಗೆ ಕುಳಿತುಕೊಳ್ಳಲು ಕನಿಷ್ಟ ಕುರ್ಚಿಗಳ ವ್ಯವಸ್ಥೆ ಇಲ್ಲದೆ,ಕಾರ್ಯಕ್ರಮ ಆರಂಭದಿಂದಲೂ ಮುಕ್ತಾಯದವರೆಗೂ ಬಿಸಿನಲ್ಲೆ ನಿಂತುಕೊಂಡು ಸುದ್ದಿ ಪೊಟೋ ತೆಗೆಯುವುದು, ವಿಡಿಯೋ ಚಿತ್ರೀಕರಣ ಮಾಡುವಂತಾಯಿತು.
ಯಾರದ್ದೊ ಮುಲಾಜಿಗೆ ಒಳಗಾಗಿ ಗಡಿಬಿಡಿಯಾಗಿ ತಮಗೆ ಬೇಕಾದ ಒಂದೆರಡು ಹೆಸರುಗಳನ್ನ ಕರೆದು ಅಸಮಾನತೆಯನ್ನ ಪ್ರದರ್ಶಿಸಿದರು. ಪ್ರತಿಯೊಂದು ಸರ್ಕಾರಿ ಕಾರ್ಯಕ್ರಮ, ನಾಡಹಬ್ಬಗಳ ಆಚರಣೆಯಲ್ಲಿ ಶಿಷ್ಟಾಚಾರ ಪಾಲಿಸಬೇಕಾಗುತ್ತದೆ. ಆದರೆ ಅಧಿಕಾರಿಗಳು ಇವೆಲ್ಲವೂ ಮರೆತು ಹಣ ಬಲ, ಜಾತಿ ಬಲ, ಜನ ಬಲ, ಅಧಿಕಾರದ ಬಲಕ್ಕೆ ಒಳಗಾಗಿ ಕೆಲಸ ಮಾಡುತ್ತಿರುವುದು ಬೇಸರದ ಸಂಗತಿಯಾಗಿದೆ. ದೇಶದ ಸಂವಿಧಾನ, ಕಾನೂನುಗಳ ಮುಂದೆ ಎಲ್ಲರೂ ಸಮಾನರೇ.!