ಶಿಡ್ಲಘಟ್ಟ : ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳು ತುಂಬಿ 78 ನೇ ವರ್ಷದ ಸಂಭ್ರಮಾಚರಣೆಗೆ ಇಡೀ ದೇಶದ ಜನ ಕಾತುರ ಉತ್ಸಾಹದಿಂದ ಎದುರುನೋಡುತ್ತಿದ್ದಾರೆ.ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಾಟಕ್ಕೆ ಕ್ಷಣಗಣನೆ ಶುರುವಾಗಿದೆ. ಶಿಡ್ಲಘಟ್ಟ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ನಾಡ ಹಬ್ಬಗಳ ಆಚರಣ ಸಮಿತಿ ವತಿಯಿಂದ ಸ್ವಾತಂತ್ರೋತ್ಸವಕ್ಕೆ ಸಕಲ ಸಿದ್ದತೆಗಳು ಮಾಡಿಕೊಂಡಿದ್ದು, ನಗರ ಪೊಲೀಸ್ ಠಾಣೆ, ಆರಕ್ಷಕ ವೃತ್ತ ನಿರೀಕ್ಷಕರ ಕಛೇರಿಗೆ ಹೊಸದಾಗಿ ಬಣ್ಣ ಹಾಕಲಾಗಿದ್ದು, ವಧುವಣ ಗಿತ್ತಿಯಂತೆ ಸಿಂಗಾರಗೊಂಡು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.ನೋಡುಗರ ಕಣ್ಮನ ಸೆಳೆಯುವಂತೆ ಆಕರ್ಷಕವಾಗಿದೆ.
ನಾವು ಪ್ರತಿವರ್ಷ ಸ್ವಾತಂತ್ರ್ಯ ಸಿಕ್ಕ ದಿನವನ್ನು ಭಾರತೀಯರಾದ ನಾವು ಹೆಮ್ಮೆಯಿಂದ ನೆನೆಯಬೇಕಿದೆ. ಜೊತೆಗೆ ಅದರ ಮಹತ್ವ ತಿಳಿಯಬೇಕಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ದೇಶಕ್ಕಾಗಿ ಪ್ರಾಣತೆತ್ತ, ಬಲಿದಾನವಾದ ಹುತಾತ್ಮ ಮಹನೀಯರು ಹಾಗೂ ದೇಶದ ಹೆಮ್ಮೆಯ ವೀರರನ್ನು ನೆನೆದು, ಅವರಿಗೆ ನಮನ ಸಲ್ಲಿಸುವ ಮೂಲಕ ಭಾರತೀಯರಾದ ನಾವು 2024ರ ಆಗಸ್ಟ್ 15 ಕ್ಕೆ 78 ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡುತ್ತಿದ್ದೇವೆ. ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಕನ್ನಡ ಪರ, ರೈತ ಪರ, ದಲಿತ ಪರ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಸಾರ್ವಜನಿಕರು, ನಾಗರೀಕರು ಭಾಗವಹಿಸಲಿದ್ದಾರೆ.