ಗ್ರಾಮಪಂಚಾಯಿತಿ, ಹೋಬಳಿವಾರು, ತಾಲ್ಲೂಕು ಮಟ್ಟದಲ್ಲಿ ಸಭೆಗಳು ನಡೆಯಲಿ.!
ಶಿಡ್ಲಘಟ್ಟ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಸ್ವತಂತ್ರವಾಗಿ ಬದುಕುವ ಹಕ್ಕು ಸಂವಿಧಾನ ಕಲ್ಪಿಸಿದೆ. ಹಲವು ವರ್ಷಗಳಿಂದ ಸಮಾಜದಲ್ಲಿ ತುಳಿತಕ್ಕೊಳಗಾದ ಜನರನ್ನ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅಸಮಾನತೆ, ಅಸ್ಪ್ರುಶ್ಯತೆಯಿಂದ ನೊಂದ ಜನರ ಸಮುದಾಯದ ಜನರಿಗೆ ಅರಿವುಮೂಡಿಸುವುದರ ದಲಿತರ ಮೂಲಭೂತ ಸಮಸ್ಯೆಗಳು ಆಲಿಸಿ ಬಗೆಹರಿಸುವ ನಿಟ್ಟಿನಲ್ಲಿ ದಲಿತರ ಕುಂದುಕೊರತೆಗಳ ಸಭೆಗಳು ನಡೆಸಿ ಶೋಷಿತ ಸಮುದಾಯಗಳ ಮೇಲಿನ ದೌರ್ಜನ್ಯ, ಅಸ್ಪ್ರುಶ್ಯತೆ ತೊಲಗಿಸಲು, ಸಮುದಾಯದ ಜನರ ರಕ್ಷಣೆಗೆ ನಡೆಸುವ ದಲಿತರ ಕುಂದುಕೊರತೆಗಳ ಸಭೆಗಳು ಸದ್ದಿಲ್ಲದೆ ಒಂದಷ್ಟು ದಲಿತ ಮುಖಂಡರಿಗೆ ಮಾತ್ರ ಸೀಮಿತವಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ದಲಿತ ಕಾಲೋನಿ, ಕೇರಿಗಳ ಸಾಕಷ್ಟು ಜನರಿಗೆ ಕಾನೂನು ಅರಿವಿಲ್ಲದೆ ದೌರ್ಜನ್ಯ, ಅನ್ಯಾಯಕ್ಕೊಳಗಾಗುವ ಅಮಾಯಕ ಜನರಿಗೆ ಕಾನೂನು ಅರಿವು ತಿಳಿಸಿಕೊಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.
ಇನ್ನೂ ಪೊಲೀಸ್ ಠಾಣೆಗಳಲ್ಲಿ ಗುರ್ತಿಸಿಕೊಂಡಿರುವ ಮುಖಂಡರೊಂದಿಗೆ ದಲಿತರ ಕುಂದುಕೊರತೆಗಳ ಸಭೆ ನಡೆಸಿ ಅಧಿಕಾರಿಗಳು ಕೈ ತೊಳೆದುಕೊಳ್ಳುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಅದೆಷ್ಟೊ ಮಂದಿ ಇಂದಿಗೂ ಪೊಲೀಸರು, ಪೊಲೀಸ್ ಠಾಣೆ ಎಂದರೆ ಹೆದರಿಕೊಳ್ಳುವ ಪರಿಸ್ಥಿತಿಯಿದೆ. ಹಾಗೂ ಪೊಲೀಸ್ ಠಾಣೆ ಮೆಟ್ಟಿಲು ತುಳಿಯದ ಅಮಾಯಕ ಜನರೂ ಇದ್ದಾರೆ.ನಾವೆಲ್ಲರೂ ಪ್ರಸ್ತುತ 2024 ವರ್ಷದಲ್ಲಿ ನಾವೆಲ್ಲರೂ ಇದ್ದೇವೆ ವಿಜ್ಞಾನ, ತಂತ್ರಜ್ಞಾನ, ಆಧುನಿಕತೆ ಬೆಳೆದು ದೇಶ ಮುಂದು ಸಾಗುತ್ತಿದೆ. ಆದರೆ ಊರುಗಳಲ್ಲಿ ಜಾತಿ ಪದ್ದತಿ ಅಸ್ಪ್ರುಶ್ಯತೆ, ಅಸಮಾನತೆ, ದಲಿತರಿಗೆ ದೇವಾಲಯ ಪ್ರವೇಶ ನಿರ್ಬಂಧ ಕಟ್ಟುಪಾಡುಗಳು ಇವೆಲ್ಲವೂ ಇನ್ನೂ ಜೀವಂತವಾಗಿರುವುದೇ ನೋವಿನ ಸಂಗತಿಯಾಗಿದೆ. ಊರುಗಳಲ್ಲಿ ಬಹುತೇಕ ಕಡೆ ದಲಿತರಿಗೆ ದೇವಾಲಯಗಳಿಗೆ ಪ್ರವೇಶವಿಲ್ಲ. ದೇವಾಲಯ ಪ್ರವೇಶ ಮಾಡಿದರೆ ಊರಿಂದ ಬಹಿಷ್ಕಾರ ಹಾಕುವುದು. ಹಲ್ಲೆ ಮಾಡುವುದು ಇಂತಹ ಅಮಾನವೀಯ ಘಟನೆಗಳು ನಡೆಯುತ್ತಲೆ ಇರುತ್ತವೆ. ಹೀಗಿರುವಾಗ ಸರ್ಕಾರಗಳು ಹಿಂದುಳಿದ ದಲಿತ ಸಮುದಾಯಗಳ ಹೇಳಿಗೆಗಾಗಿ ಅಭಿವೃದ್ದಿ ಹೊಂದಲು ಸಾಕಷ್ಟು ಯೋಜನೆಗಳು ರೂಪಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಇಲಾಖೆಯಲ್ಲಿ ದಕ್ಷ, ಪ್ರಾಮಾಣಿಕ ಅಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜದಲ್ಲಿ ಅಸ್ಪ್ರುಶ್ಯತೆ ತೊಲಗಿಸುವ ನಿಟ್ಟಿನಲ್ಲಿ ಸರ್ಕಾರಗಳು ನಿರಂತರವಾಗಿ ಪ್ರಯತ್ನ ಮಾಡುತ್ತಲೆ ಇದೆ.
ಗ್ರಾಮೀಣ ಪ್ರದೇಶಗಳಲ್ಲಿ ಅಮಾಯಕ ಜನರು ಇಂದಿಗೂ ನಾನಾ ರೀತಿಯಲ್ಲಿ ಸಮಸ್ಯೆಗಳು ಅನುಭವಿಸುತ್ತಿದ್ದು ಇಂತಹ ಜನರಿಗೆ ದೈರ್ಯ ತುಂಬಿ ಹಳ್ಳಿಗಳಲ್ಲಿರುವ ಕೀಳರಿಮೆ , ಜಾತಿತಾರತಮ್ಯ, ದಲಿತರ ವಿಶೇಷ ಹಕ್ಕುಗಳ ಬಗ್ಗೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಅರಿವು ಮೂಡಿಸುವ ಕೆಲಸ ಮಾಡಬೇಕಿದೆ. ಆದರೆ ಕೇವಲ ಪೊಲೀಸ್ ಠಾಣೆಗಳಿಗೆ ನಿಕಟ ಸಂಪರ್ಕಹೊಂದಿರುವ ಕೆಲವೇ ಕೆಲವು ದಲಿತ ಮುಖಂಡರೊಂದಿಗೆ ಮಾತ್ರ ಸಭೆ ನಡೆಸಿ ಅಧಿಕಾರಿಗಳು ಕೈತೊಳೆದುಕೊಳ್ಳುವ ಪ್ರಯತ್ನ ಮಾಡುತ್ತಿರುವುದು ಇನ್ನಾದರೂ ಬದಲಾಗಬೇಕಿದೆ. ಪೊಲೀಸ್ ಠಾಣೆ ಅಥವಾ ಆವರಣದಲ್ಲಿ ನಡೆಯುವ ದಲಿತರ ಕುಂದುಕೊರತೆಗಳ ಸಭೆಗಳು ಠಾಣೆ ಮಟ್ಟದಿಂದ, ಗ್ರಾಮ ಪಂಚಾಯಿತಿ ವ್ಯಾಪ್ತಿ, ಹೋಬಳಿವಾರು, ತಾಲ್ಲೂಕು ಮಟ್ಟದಲ್ಲಿ ಬೃಹತ್ ಸಭೆಗಳು ನಡೆಸಿದಾಗ, ಜನರಲ್ಲಿ ಅರಿವು ಮೂಡಿಸಿದಾಗ ಒಂದಷ್ಟು ಬದಲಾವಣೆಯಾಗಲು ಸಾಧ್ಯವಾಗುತ್ತದೆ.
ಇನ್ನು ತಮ್ಮ ಬೇಳೆ ಬೇಯಿಸಿಕೊಳ್ಳಲು ಒಂದಷ್ಟು ಮಂದಿ ಸಭೆಗಳಲ್ಲಿ ಅಧಿಕಾರಿಗಳನ್ನ ಹೊಗಳಿದರೆ, ಇನ್ನು ಪ್ರಾಮಾಣಿಕವಾಗಿ ಕಾನೂನು ಬದ್ದವಾಗಿ ಕೆಲಸ ಮಾಡುವ ಅಧಿಕಾರಿಗಳ ವಿರುದ್ದ ಬೆಟ್ಟು ಮಾಡಿ ತೋರಿಸುವುದು ಹಲವು ಸಭೆಗಳಲ್ಲಿ ಸಾಮಾನ್ಯವಾಗಿದೆ. ಕೇವಲ ಮುಖಂಡರಿಗೆ ಮಾತ್ರ ಸೀಮಿತವಾಗದೆ ದಲಿತರ ಕುಂದುಕೊರೆತಗಳ ಸಭೆಗಳ ಕುರಿತು ವ್ಯಾಪಕವಾಗಿ ಪ್ರಚಾರ, ಪತ್ರಿಕಾ ಪ್ರಕಟಣೆ ಹೊರಡಿಸಿ ಜನರಿಗೆ ಅರಿವು ಮೂಡಿಸಿ ಗ್ರಾಮೀಣ ಪ್ರದೇಶಗಳಲ್ಲಿ ಜನರ ನಡುವೆ ಉತ್ತಮ ವಾತಾವರಣ ನಿರ್ಮಿಸಿ ದಲಿತರ ಮೇಲಿನ ದೌರ್ಜನ್ಯ, ಅನ್ಯಾಯ, ಮೌಡ್ಯ ಅಸ್ಪ್ರುಶ್ಯತೆ ತೊಲಗಿಸುವ ಕೆಲಸ ಪೊಲೀಸ್ ಇಲಾಖೆಯ ಅಧಿಕಾರಿಗಳು ಮಾಡಬೇಕು ಎಂಬುವುದೇ ಎಲ್ಲರ ಆಶಯವಾಗಿದೆ.
ವಿಶೇಷ ವರದಿ: ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ