ಜೆಡಿಎಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳಿಂದ ಬೃಹತ್ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಣೆ.
ಶಿಡ್ಲಘಟ್ಟ : ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಬಿ.ಎನ್.ರವಿಕುಮಾರ್ ಅವರ ಹುಟ್ಟು ಹಬ್ಬವನ್ನು ತಾಲ್ಲೂಕಿನ ಜೆಡಿಎಸ್ ಪಕ್ಷದ ಕಾರ್ಯಕರ್ತರು, ಹಾಗೂ ಅಭಿಮಾನಿ ಬಳಗದಿಂದ ಪ್ರತಿ ವರ್ಷದಂತೆ ಈ ಬಾರಿಯೂ ನಗರದ ಆಶಾಕಿರಣ ಅಂಧ ಮಕ್ಕಳ ಶಾಲೆಯ ಆವರಣದಲ್ಲಿ ಮಕ್ಕಳ ಕೈಯಲ್ಲಿ ಬೃಹತ್ ಕೇಕ್ ಕತ್ತರಿಸಿ ಸಿಹಿಯನ್ನ ಹಂಚುವ ಮೂಲಕ ಹುಟ್ಟು ಹಬ್ಬವನ್ನ ಆಚರಿಸಿದರು.
ಶಾಸಕರ ಹುಟ್ಟು ಹಬ್ಬದ ಪ್ರಯುಕ್ತ ಅಂಧ ಮಕ್ಕಳ ಶಾಲೆಯ ವಿಧ್ಯಾರ್ಥಿಗಳಿಗೆ ಸಮವಸ್ತ್ರ ಗಳನ್ನು ವಿತರಣೆ ಮಾಡಲಾಯಿತು.
ತಾಲ್ಲೂಕಿನ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತ್ತು ಬಿ.ಎನ್.ರವಿಕುಮಾರ್ ಅವರ ಅಭಿಮಾನಿಗಳ ಬಳಗದ ವತಿಯಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಗೆ ಆಯ್ಕೆಯಾಗಿರುವ ಶಿಡ್ಲಘಟ್ಟ ದ ಯುವ ಪ್ರತಿಭೆ ಶಶಾಂಕ್ ಅವರ ತಾಯಿ ಅವರಿಗೆ ಶಾಸಕರ ಕಡೆಯಿಂದ ಜನ್ಮ ಅಂಗವಾಗಿ ಅರ್ಥಿಕ ಸಹಾಯಧನ ವಿತರಣೆ ಮಾಡಿದರು. ಬಳಿಕ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳ ಮತ್ತು ಹೊರ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಡಿ.ಸಿ. ರಾಮಚಂದ್ರ ಮುಖಂಡರಾದ ತಾದೂರು ರಘು ಬಂಕ್ ಮುನಿಯಪ್ಪ , ಹುಜುಗೂರು ರಾಮಣ್ಣ , ಮೇಲೂರು ಉಮೇಶ್ , ಹನುಮಂತಪುರ ವಿಜಯ ಕುಮಾರ್ , ಎಸ್.ಎಂ.ರಮೇಶ್ , ನಂದು ಕಿಶನ್ , ನಗರ ಸಭೆ ಸದಸ್ಯ ವೆಂಕಟಸ್ವಾಮಿ ರಾಘವೇಂದ್ರ (ರಘು) ಹೈದರ್ ಅಲೀ ಸೇರಿದಂತೆ ನೂರಾರು ಜೆಡಿಎಸ್ ಕಾರ್ಯಕರ್ತರು ಮತ್ತು ಬಿ.ಎನ್.ಆರ್.ಅಭಿಮಾನಿಗಳು ಭಾಗವಹಿಸಿದ್ದರು.