ಶಿಡ್ಲಘಟ್ಟ : ರೈಲಿನ ಹಳಿಗೆ ತಲೆಕೊಟ್ಟು ಒಂದೆ ಕುಟುಂಬದ ಅಕ್ಕ – ತಮ್ಮ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.
ಇಂದು ಬೆಳಗ್ಗೆ ರೈಲ್ವೆ ಹಳಿಗಳ ಮೇಲೆ ರುಂಡ- ಮುಂಡ ಬೇರೆ ಬೇರೆಯಾಗಿ ಎರಡು ಮೃತ ದೇಹಗಳು ಪತ್ತೆಯಾಗಿದ್ದು, ಗುರುವಾರ ರಾತ್ರಿ ಪಾಳಿಯ ರೈಲಿಗೆ ತಲೆಗೆ ಕೊಟ್ಟು ಇಬ್ಬರು ಜೀವ ಕಳೆದುಕೊಂಡಿರುವುದು ಬೆಳ್ಳಂ ಬೆಳಗ್ಗೆ ಬೆಳಕಿಗೆ ಬಂದಿದೆ. ರೈಲ್ವೆ ಸಿಬ್ಬಂದಿ ಹಾಗೂ ಸಾರ್ವಜನಿಕರು ವಾಹು ವಿಹಾರಕ್ಕೆ ಹೋದಂತದ ಸಂದರ್ಭದಲ್ಲಿ ಎರಡು ಮೃತ ದೇಹಗಳು ರೈಲು ಹಳಿಗಳ ಮೇಲೆ ಕಂಡುಬಂದಿದೆ. ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಶಿಡ್ಲಘಟ್ಟ ಪ್ರೇಮನಗರದ ನಿವಾಸಿಗಳಾದ ತಮ್ಮ ಪ್ರಭು (22 ವರ್ಷ) ಅಕ್ಕ ನವ್ಯ (24ವರ್ಷ ) ಬೆಂಗಳೂರು ನಿಂದ – ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಮಾರ್ಗವಾಗಿ ಕೋಲಾರಕ್ಕೆ ತೆರಳುವ ರೈಲಿಗೆ ರಾತ್ರಿ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ರೈಲ್ವೆ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಘಟನೆಗೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ತಿಳಿದುಬರಲಿದೆ.