ಶಿಡ್ಲಘಟ್ಟ : ವಿಜ್ಞಾನ ಹಾಗೂ ಗಣಿತ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಸುಲಭವಾಗಿ ಭೋದಿಸಲು ಕಲಿಕೆಯಲ್ಲಿ ಮುಂಚೂಣಿಗೆ ಬರಲು ರೀಚಿಂಗ್ ಹ್ಯಾಂಡ್ಸ್ ಸಂಸ್ಥೆ ಬೆಂಗಳೂರು ಇವರ ವತಿಯಿಂದ ನಗರದ ಸರ್ಕಾರಿ ಪ್ರೌಢ ಶಾಲೆಗೆ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುವ 105 ಮಾದರಿ ಪರಿಕರಗಳು ಸುಮಾರು 8.50 ಲಕ್ಷ ರೂ, ವೆಚ್ಚದಲ್ಲಿ ಶಾಲೆಗೆ ಉಚಿತವಾಗಿ ನೀಡಿದರು.
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ರೀಚಿಂಗ್ ಹ್ಯಾಂಡ್ಸ್ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಸರಳ ಕಾರ್ಯಕ್ರಮದಲ್ಲಿ ಸಂಸ್ಥೆಯ ಯೋಜನಾ ನಿರ್ದೇಶಕಿ ಸುಜಾತ ಬಂಡಾರಿ, ಶಾಲೆಗೆ ವಿಜ್ಞಾನ ಪರಿಕರಗಳನ್ನು ವಿತರಿಸಿ ಮಾತನಾಡಿದರು.,
ವಿದ್ಯಾರ್ಥಿಗಳಲ್ಲಿ ಕಠಿಣವಾದ ವಿಷಯಗಳನ್ನು ಸುಲಭವಾಗಿ ಅರ್ಥ ಮಾಡಿಸಲು ಸ್ಮಾರ್ಟ್ ಕ್ಲಾಸ್ ಮಾದರಿಯಲ್ಲಿ ಅಭಿವೃದ್ದಿಪಡಿಸಿರುವ ಮಾದರಿಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡು ಸುಲಭವಾಗಿ ಕಲಿಯುವುದಕ್ಕೆ ಅನುಕೂಲವಾಗಿದೆ ಹಾಗಾಗಿ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಪರಿಕರಗಳು ವಿತರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಯೋಜನಾ ಸಹ ಸಂಯೋಜಕ ಶಿಬು ಕೆ ತಾಮಸ್ ಸೇರಿದಂತೆ ಬಿ.ಇ.ಒ ಕಛೇರಿಯ ಅಧೀಕ್ಷರಾದ ಆರ್ . ಮಧುಸೂಧನ್ , ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಸೈಯೀದಾ ಇಷ್ರತ್ , ಶಿಕ್ಷಕರಾದ ಗೋಪಾಲಕೃಷ್ಣ , ಅನ್ನಪೂರ್ಣ ಹಿರೇಮಠ , ಸತೀಶ್ , ವಿಜ್ಞಾನ ಶಿಕ್ಷಕರಾದ ನಳಿನ , ಕುಸುಮ ಮತ್ತು ಶಾಲೆಯ ಮಕ್ಕಳು ಹಾಜರಿದ್ದರು.