ಶಿಡ್ಲಘಟ್ಟ : ದೇವಾಲಯಗಳಲ್ಲಿ ಕಳವು ಆದಂತಹ ಸಂದರ್ಭದಲ್ಲಿ ಕಳ್ಳರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಹಾಗೂ ದೇವಾಲಯಗಳಿಗೆ ಆಗಮಿಸುವ ಭಕ್ತರ ಹಿತದೃಷ್ಟಿಯಿಂದ ದೇವಸ್ಥಾನಗಳಲ್ಲಿ ಆಡಳಿತ ಮಂಡಳಿ ಅಥವಾ ಸಮಿತಿಯವರು ಕಡ್ಡಾಯವಾಗಿ ಸಿ.ಸಿ.ಕ್ಯಾಮರಾಗಳು ಅಳವಡಿಸಬೇಕು ಎಂದು ಪಿಎಸ್ಐ ಎಂ.ವೇಣುಗೋಪಾಲ್ ಅವರು ಕರೆ ನೀಡಿದರು.
ನಗರದ ಪೋಲಿಸ್ ಠಾಣೆಯ ವ್ಯಾಪ್ತಿಯ ದೇವಾಲಯಗಳ ಆಡಳಿತ ಮಂಡಳಿ, ಸಮಿತಿಯ ಮುಖ್ಯಸ್ಥರು ಹಾಗೂ ಅರ್ಚಕರ ಸಭೆಯನ್ನು ಕರೆದು ಮಾತನಾಡಿದ ಅವರು ಇತ್ತೀಚೆಗೆ ದೇವಸ್ಥಾನಗಳಲ್ಲಿ ಕಳ್ಳತನ ಪ್ರಕರಣಗಳು ಕಂಡು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ದೇವಾಲಯಗಳಿಗೆ ಬರುವ ಭಕ್ತಾದಿಗಳ ಹಿತದೃಷ್ಟಿಯಿಂದ ದೇವಾಲಯಗಳಲ್ಲಿ ಆಗುವ ಕಳ್ಳತನ ಪ್ರಕರಣಗಳನ್ನ ತಡೆಗಟ್ಟುವ ನಿಟ್ಟಿನಲ್ಲಿ ಸಿಸಿ ಟಿವಿ ಕ್ಯಾಮರಗಳು ಅಳವಡಿಸುವುದರಿಂದ ದೇವಾಲಯಗಳಲ್ಲಿ ಕಳ್ಳತನವಾದಂತಹ ಸಂದರ್ಭದಲ್ಲಿ ಕಳ್ಳರು ಸುಲಭವಾಗಿ ಸಿಕ್ಕಿಬೀಳುತ್ತಾರೆ. ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಪೊಲೀಸರ ಗಮನಕ್ಕೆ ತಿಳಿಸುವಂತೆ ತಿಳಿಸಿದರು.
ವಿಶೇಷ ದಿನಗಳು ಮತ್ತು ಹಬ್ಬಗಳ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ ದೇವರ ಮೂರ್ತಿ ವಿಗ್ರಹಗಳಿಗೆ ಚಿನ್ನಾಭರಣಗಳು ಧರಿಸುವ ಅಲಂಕಾರ ಗೊಳಿಸಿದಾಗ ಪೊಲೀಸ್ ಠಾಣೆ ಮಾಹಿತಿ ನೀಡಿದ್ದಲ್ಲಿ ಮುಂಜಾಗ್ರತವಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಬಂದೋಬಸ್ತ್ ನೀಡಲಾಗುವುದು ಜೊತೆಗೆ ಪೊಲೀಸರು ಸಹಾ ವಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ನಗರ ಠಾಣೆಯ ಪೊಲೀಸ್ ಸಿಬ್ಬಂದಿ ಅಶ್ವಥ್ , ಶಶಿಕುಮಾರ್ , ಕೃಷ್ಣ , ಶಿವಕುಮಾರ್ ಸೇರಿದಂತೆ ನಗರದ ವಿವಿಧ ದೇವಾಲಯಗಳ ಆಡಳಿತ ಮಂಡಳಿಯ ಮುಖ್ಯಸ್ಥರು ಹಾಗೂ ಅರ್ಚಕರು ಹಾಜರಿದ್ದರು.