ಶಿಡ್ಲಘಟ್ಟ : ಮನೆಯಲ್ಲಿ ಯಾರೂ ಇಲ್ಲದೆ ಇರುವ ಸಮಯದಲ್ಲಿ ಮನೆಯ ಬೀಗ ಹೊಡೆದು ಸುಮಾರು 197 ಗ್ರಾಂ ಚಿನ್ನದ ಒಡವೆಗಳು 50 ಸಾವಿರ ನಗದು ಕಳವು ಮಾಡಿದ್ದ ಆರೋಪಿಗಳನ್ನ ಕೆಲವೇ ದಿನಗಳಲ್ಲಿ ಬಂಧನ ಮಾಡುವಲ್ಲಿ ಶಿಡ್ಲಘಟ್ಟ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಜಂಗಮಕೋಟೆ ಗ್ರಾಮದ ವಾಸಿ ನಾರಾಯಣಪ್ಪ ಎಂಬುವವರು ಜೂನ್ 29 ರಂದು ಮನೆಗೆ ಬೀಗ ಹಾಕಿಕೊಂಡು ತೋಟದ ಬಳಿ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದೇ ಇರುವುದನ್ನ ನೋಡಿಕೊಂಡ ಕಳ್ಳರು ಮನೆಗೆ ಬೀಗ ಬಿರುದು ಮನೆಯ ಬೀರುವಿನಲ್ಲಿದ್ದ 197 ಗ್ರಾಂ ಚಿನ್ನದ ಒಡವೆಗಳು 50 ಸಾವಿರ ನಗದು ಹಣ ಕಳವು ಆಗಿರುವ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಪ್ರಕರಣ ದಾಖಲಿಸಿಕೊಂಡು ಸರ್ಕಲ್ ಇನ್ಸ್ ಪೆಕ್ಟರ್ ಎಂ. ಶ್ರೀನಿವಾಸ್ ನೇತೃತ್ವದ ಪೊಲೀಸರ ತಂಡ ಕಳ್ಳರ ಪತ್ತೆಗೆ ಬಲೆ ಬೀಸಿದ್ದರು.
ಘಟನೆ ನಡೆದ ಕೆಲವೇ ದಿನಗಳಲ್ಲಿ ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಎ1 ಆರೋಪಿ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಹುಂಗೇನಹಳ್ಳಿ ನಿವಾಸಿ ವಿವೇಕ್ ಕುಮಾರ್, ಎ2 ಆರೋಪಿ ಶಿಡ್ಲಘಟ್ಟ ತಾಲ್ಲೂಕಿನ ದೊಡ್ಡಚೊಕ್ಕಂಡಹಳ್ಳಿ ನಿವಾಸಿ – ರವಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳಿಂದ ವಿವೋ ಕಂಪನಿಯ ಎರಡು ಮೊಬೈಲ್ ಗಳು, ಕೆ.ಎ. 41-9431 ಟಾಟಾ ಸುಮೋ ವಾಹನ, 20 ಗ್ರಾಂ ತೂಕದ ಮೂರು ಚಿನ್ನದ ಉಂಗುರು, 03 ಗ್ರಾಂ ತೂಕದ ಒಂದು ಜೊತೆ ಕಿವಿ ಓಲೆ, 07 ಗ್ರಾಂ ತೂಕದ ಒಂದು ಜೊತೆ ಜುಮುಕಿ ಒಟ್ಟು ಒಂದು ಲಕ್ಷ ಬೆಲೆ ಬಾಳುವ ಒಡವೆಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕದ್ದ ಒಡವೆಗಳಲ್ಲಿ ಸುಮಾರು 166.5 ಗ್ರಾಂ ಒಡವೆಗಳು ಕೊಟ್ಯಾಕ್ ಮಹೀಂದ್ರ ಬ್ಯಾಂಕಿನಲ್ಲಿ ಅಡವಿಟ್ಟು ಹಣ ಪಡೆದುಕೊಂಡಿರುವುದು ಪತ್ತೆಯಾಗಿದೆ.
ಎ 1 ಆರೋಪಿ ವಿವೇಕ್ ಕುಮಾರ್ ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣವೊಂದರಲ್ಲಿ ದಸ್ತಗಿರಿಯಾಗಿ ಜೈಲಿಗೆ ಜೋಗಿ ಬಂದಿರುತ್ತಾನೆ. ಎ2 ಆರೋಪಿ ರವಿ ಬೇರೆ ಪ್ರಕರಣದಲ್ಲಿ ಆರೋಪಿಯಾಗಿರುವುದು ತನಿಖೆಯಲ್ಲಿ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. ಹೆಚ್ಚಿನ ತನಿಖೆಯನ್ನು ಸರ್ಕಲ್ ಇನ್ಸ್ ಪೆಕ್ಟರ್ ಎಂ. ಶ್ರೀನಿವಾಸ್ ಅವರ ನೇತೃತ್ವದಲ್ಲಿ ತನಿಖೆಯನ್ನು ಕೈಗೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಭಾಗಿಯಾದ ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಸತೀಶ್ ಕೆ. ಪೊಲೀಸ್ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕುಶಾಲ್ ಚೌಕ್ಸೆ ಅವರು ಶ್ಲಾಘೀಸಿದ್ದಾರೆ.