ಬೆಂಗಳೂರು : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಸೋಲಿಗೆ ಚಂದ್ರಶೇಖರ ಸ್ವಾಮೀಜಿ ಕಾರಣ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಸುದ್ದಿಗರರೊಂದಿಗೆ ಮಾತನಾಡಿದ ಅವರು, ಸಂಸದರಾಗಿ ಡಿ.ಕೆ. ಸುರೇಶ್ ಉತ್ತಮವಾಗಿ ಅವರು ಕೆಲಸ ಮಾಡಿದ್ದರೂ ಏಕೆ ಅವರನ್ನು ಪರಾಭವ ಗೊಳಿಸಿದರು. ಈ ಸ್ವಾಮೀಜಿಗಳೇ ಕೊಂಡು ಸೇರಿ ಸೋಲಿಸಿದ್ದು ಎಂದು ದೂರಿದರು.
ಈ ಸ್ವಾಮೀಜಿ ದೇವೇಗೌಡರ ಸೃಷ್ಟಿ, ಬಾಲಗಂಗಾಧರನಾಥ ಸ್ವಾಮೀಜಿ ಜೊತೆ ವ್ಯತ್ಯಾಸ ಬಂದಾಗ ಮಠ ಮಾಡಿ ಇವರನ್ನು ಸ್ವಾಮೀಜಿ ಮಾಡಿದ್ದು ದೇವೇಗೌಡರು. ಈ ವಿಚಾರ ದೇಶಕ್ಕೆ ಗೊತ್ತು. ಈ ಸ್ವಾಮೀಜಿ ಸೇರಿ ಎಲ್ಲಾ ಸ್ವಾಮೀಜಿಗಳು ಸುರೇಶ್ ಅವರ ಸೋಲಿಗೆ ಕಾರಣ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಶೋಕ್ ಅವರನ್ನು ಸಿಎಂ ಮಾಡುತ್ತಾರೋ ಇಲ್ಲವೋ ಅದು ಆ ಪಕ್ಷಕ್ಕೆ ಬಿಟ್ಟ ವಿಚಾರ. ಅದೇ ರೀತಿ ಸಿಎಂ ನೇಮಕವನ್ನು ಕಾಂಗ್ರೆಸ್ ಪಕ್ಷದ ಶಾಸಕರು, ಹೈಕಮಾಂಡ್ ನಿರ್ಧರಿಸುತ್ತಾರೆ. ಸ್ವಾಮೀಜಿಗಳು ಹೇಳಿದ ರೀತಿಯಲ್ಲಿ ಮುಖ್ಯಮಂತ್ರಿಗಳನ್ನು ಮಾಡಲು ಆಗುವುದಿಲ್ಲ ಎಂದು ರಾಜಣ್ಣ ತಿಳಿಸಿದರು.