Tuesday, December 24, 2024
Homeಜಿಲ್ಲೆಗ್ರಾಮಗಳ ಅಭಿವೃದ್ದಿಯೇ ದೇಶದ ಅಭಿವೃದ್ದಿ : ಡಾಕ್ಟರ್ ಜಿ.ಎನ್ ದಯಾನಂದ್

ಗ್ರಾಮಗಳ ಅಭಿವೃದ್ದಿಯೇ ದೇಶದ ಅಭಿವೃದ್ದಿ : ಡಾಕ್ಟರ್ ಜಿ.ಎನ್ ದಯಾನಂದ್

ಶಿಡ್ಲಘಟ್ಟ : ಗ್ರಾಮೀಣ ಭಾಗದಲ್ಲಿ ಶಾಲೆಗಳನ್ನು ಹಾಗೂ ಗ್ರಾಮೀಣ ಪರಿಸರವನ್ನು ಅಭಿವೃದ್ಧಿ ಗೊಳಿಸುವುದು ನಮ್ಮ ಟ್ರಸ್ಟಿನ ಗುರಿ. ಏಕೆಂದರೆ ಗ್ರಾಮಗಳ ಅಭಿವೃದ್ಧಿಯೇ ನಮ್ಮ ದೇಶದ ಅಭಿವೃದ್ಧಿಯಾಗಿದೆ ಎಂದು ವಾಗ್ದೇವಿ ಶೈಕ್ಷಣಿಕ ಮತ್ತು ಗ್ರಾಮಾಭಿವೃದ್ಧಿ ಟ್ರಸ್ಟಿನ ಅಧ್ಯಕ್ಷರು ವಿಜ್ಞಾನಿಗಳಾದ ಡಾಕ್ಟರ್ ಜಿಎನ್ ದಯಾನಂದ್ ತಿಳಿಸಿದರು.

ಅಬ್ಲೂಡು ಕ್ಲಸ್ಟರ್ ನ ತಾತಹಳ್ಳಿ ಸ.ಊ ಹಿ. ಪ್ರಾ. ಶಾಲೆಗೆ ಶ್ರೀ ವಾಗ್ದೇವಿ ಶೈಕ್ಷಣಿಕ ಮತ್ತು ಗ್ರಾಮಾಭಿವೃದ್ಧಿ ಟ್ರಸ್ಟಿನ‌ ವತಿಯಿಂದ 1ರಿಂದ 3ನೇ ತರಗತಿ ನಲಿಕಲಿ ಮಕ್ಕಳಿಗೆ ಪೀಠೋಪಕರಣಗಳನ್ನು ಕೊಡುಗೆಯಾಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು

ಟ್ರಸ್ಟ್ ನ ಸದಸ್ಯರಾದ ಶ್ರೀ ನಂದಕುಮಾರ್ ಮಾತನಾಡಿ ಈ ತಾತಹಳ್ಳಿ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಿರುತ್ತಾರೆ, ಭವಿಷ್ಯದ ತಾತಹಳ್ಳಿ ಇಲ್ಲಿ ರೂಪುಗೊಳ್ಳುತ್ತಿದೆ ಎಂದು ಹೇಳಿದರು.

ಶಾಲಾ ಮಕ್ಕಳೊಂದಿಗೆ SDMC ಸಮಿತಿಯ ಅಧ್ಯಕ್ಷರಾದ ಶ್ರೀ ಮುರಳಿ, ಸದಸ್ಯರಾದ ಅಜಯ್, ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಸರಸ್ವತಮ್ಮ,
ಸಹ ಶಿಕ್ಷಕರಾದ ಶ್ರೀ ಸುದರ್ಶನ ಪಿ, ಕಲಾದರ್ ಎಸ್, ನಾಗರಾಜ, ಶಾಂತಮ್ಮ ವಿ ಹಾಜರಿದ್ದರು,
ಕಾರ್ಯಕ್ರಮಕ್ಕೆ ಪ್ರಾರ್ಥನೆಯನ್ನು ವಿದ್ಯಾರ್ಥಿಗಳಾದ, ಸಂದ್ಯಾ ಮತ್ತು ತಂಡದವರು, ಸ್ವಾಗತವನ್ನು 8ನೇ ತರಗತಿಯ ವಿದ್ಯಾರ್ಥಿ ಬದ್ರಿನಾಥ್, ವಂದನಾರ್ಪಣೆಯನ್ನು 8 ನೇ ತರಗತಿಯ ವಿದ್ಯಾರ್ಥಿನಿ ಪಾವನ ಹಾಗೂ ಕಾರ್ಯಕ್ರಮದ ನಿರೂಪಣೆಯನ್ನು 8 ನೇ ತರಗತಿಯ ವಿದ್ಯಾರ್ಥಿನಿಯಾದ ಅನನ್ಯ ನಡೆಸಿಕೊಟ್ಟರು.

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!