ಶಿಡ್ಲಘಟ್ಟ: 2023-24 ನೇ ಸಾಲಿನ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ನಡೆಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ತಾಲ್ಲೂಕಿನ ಎಲ್ಲಾ ಇಲಾಖೆಗಳಿಂದ ಅಥ್ಲೆಟಿಕ್ ಕ್ರೀಡಾ ಕೂಟದಲ್ಲಿ ಸ್ಪರ್ಧಿಸುವವರು ನಿಗಧಿತ ದಿನಾಂಕ 12 ಜೂನ್ 2024ರ ಒಳಗಾಗಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಕೆ.ಎನ್ ಸುಬ್ಬಾರೆಡ್ಡಿ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು ತಾಲ್ಲೂಕು ಮಟ್ಟದ ಎಲ್ಲಾ ಸರ್ಕಾರಿ ನೌಕರರು ಅಥ್ಲೆಟಿಕ್ ಕ್ರಿಡೆಗಳಲ್ಲಿ ಭಾಗವಹಿಸುವವರು ಜಿಲ್ಲಾ ಮಟ್ಟದಲ್ಲಿ 19 ಜೂನ್ 2024 ಮತ್ತು 20 ಜೂನ್ 2024 ರಂದು ನೊಂದಣಿ ಮಾಡಿಕೊಳ್ಳಬಹುದಾಗಿದೆ. ಉಳಿದ ಗುಂಪು ಆಟಗಳಲ್ಲಿ ತಾಲ್ಲೂಕಿನ ಎಲ್ಲಾ ಇಲಾಖೆಗಳಿಂದ ಭಾಗವಹಿಸುವ ನೌಕರರು 12 ಜೂನ್ 2024 ರ ಒಳಗಾಗಿ ತಾಲ್ಲೂಕು ಸಂಘದ ಅಧ್ಯಕ್ಷರು ಸೇರಿದಂತೆ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಟಿ.ಟಿ ನರಸಿಂಹಪ್ಪ, ಕಾರ್ಯದರ್ಶಿ – ಅಕ್ಕಲರೆಡ್ಡಿ, ಕ್ರೀಡಾ ಕಾರ್ಯದರ್ಶಿ ಎಂ. ದೇವರಾಜು ಅವರನ್ನ ಸಂಪರ್ಕಿಸಿ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಕೋರಿದ್ದಾರೆ.