ದೇಶದ ಪ್ರಧಾನಿಯಾಗಿ ಮೋದಿ ಪ್ರಮಾಣ ವಚನ. ಶಿಡ್ಲಘಟ್ಟದಲ್ಲಿ ಬಿಜೆಪಿ – ಜೆಡಿಎಸ್ ನಿಂದ ಸಂಭ್ರಮಾಚರಣೆ.
ಶಿಡ್ಲಘಟ್ಟ : 12 ನೇ ಶತಮಾನದಲ್ಲಿ ಬಸವಣ್ಣ ಅವರನ್ನು ಜಗತ್ತು ಗುರು ಎಂದು ಕರೆಯುತ್ತಿದ್ದರು. ಆದಾದ ಬಳಿಕ 21ನೇ ಶತಮಾನದಲ್ಲಿ ನರೇಂದ್ರ ಮೋದಿಯವರನ್ನ ಜಗತ್ ಗುರು ಎಂದು ಕರೆಯುತ್ತಿದ್ದಾರೆ. ಅತೀ ಹೆಚ್ಚು ಜನ ಸಂಖ್ಯೆಯನ್ನು ಹೊಂದಿರುವ ಭಾರತ ದೇಶ ಹಿಂದೂ ರಾಷ್ಟ್ರವಾಗಿದೆ. ಹತ್ತು ವರ್ಷಗಳಿಂದ ನರೇಂದ್ರಮೋದಿಯವರು ಉತ್ತಮ ಆಡಳಿತ ನೀಡಿದ್ದಾರೆಂದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎನ್. ರವಿಕುಮಾರ್ ಹೇಳಿದರು.
ನಗರದ ಬಿಜೆಪಿ ಸೌಧ ಕಛೇರಿಯ ಆವರಣದಲ್ಲಿ “ವಿಜಯೋತ್ಸವ ಕಾರ್ಯಕ್ರಮ” ವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದಿಂದ ಎನ್ ಡಿ ಎ ಮೈತ್ರಿ ಕೂಟದಿಂದ 19 ಸಂಸದರನ್ನ ಆಯ್ಕೆ ಮಾಡಿರುವ ನಾಡಿನ ಸ್ವಾಭಿಮಾನ ಮತದಾರರಿಗೆ ಧನ್ಯವಾದಗಳು ಸಲ್ಲಿಸುತ್ತೇನೆ. ಬಯಲು ಸೀಮೆ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಗೂ ಚಿತ್ರದುರ್ಗ ನಾಲ್ಕು ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಎನ್.ಡಿ.ಎ ಅಭ್ಯರ್ಥಿಗಳಿಗೆ ಅಧಿಕಾರಿ ಕೊಟ್ಟು ಸಂಸದರನ್ನಾಗಿ ಆಯ್ಕೆ ಮಾಡಿದ್ದು, ಮುಂದಿನ ದಿನಗಳಲ್ಲಿ ಬಯಲು ಸೀಮೆಗೆ ಇರುವಂತಹ ನೀರವಾರಿ ಸಮಸ್ಯೆಯನ್ನ ಬಗೆಹರಿಸುವ ನಿಟ್ಟಿನಲ್ಲಿ ಎಲ್ಲಾ ಸದಸ್ಯರನ್ನು ಕರೆತರಲಾಗುವುದು. ನಮ್ಮ ಪಕ್ಷದ ವರಿಷ್ಠರಾದ ದೇವೇಗೌಡರು ಈಗಾಗಲೇ ನರೇಂದ್ರಮೋದಿ ಅವರ ಬಳಿ ಚರ್ಚಸಿ ನಮ್ಮ ಬಯಲು ಸೀಮೆಗೆ ನೀರು ಕೊಡಬೇಕೆಂದು ಹೇಳಿದ್ದಾರೆ. ನಾವು ಪ್ರಾಮಾಣಿಕವಾಗಿ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತವಾಗಿ ನೀರು ತೆಗೆದುಕೊಂಡು ಬರುತ್ತೇವೆಂದು ತಿಳಿಸಿದರು.
ರಾಜ್ಯದಲ್ಲಿ 19 ಎನ್.ಡಿ.ಎ ಅಭ್ಯರ್ಥಿಗಳು ಗೆಲ್ಲುವುದಕ್ಕೆ ರಾಜ್ಯದ ಮುಖ್ಯಂಮತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಕಾರಣ ಜೆಡಿಎಸ್ ಪಕ್ಷವನ್ನು ನಿರ್ನಾಮ ಮಾಡುತ್ತೇವೆಂದು ಹೇಳಿರುವುದೇ ಇವರ ಸಾಧನೆ. ಮೊದಲು ಬಡವರ ಪರ ಕೆಲಸ ಮಾಡಲಿ ಅಭಿವೃದ್ದಿ ಕಡೆ ಗಮನಹರಿಸಲಿ ಎಂದು ಗುಡುಗಿದರು.
ಬಿಜೆಪಿ ಮುಖಂಡರು ಹಾಗೂ ಖ್ಯಾತ ಉದ್ಯಮಿಗಳಾದ ಸೀಕಲ್ ರಾಮಚಂದ್ರಗೌಡ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶದಲ್ಲಿರುವಂತಹ ಶೇಕಡಾ 80% ರಷ್ಟು ರಾಜಕೀಯ ಪಕ್ಷಗಳು ಒಂದಾಗಿ ಮೋದಿಯವರ ವಿರುದ್ದ ಚುನಾವಣೆ ಮಾಡಿದರು. ಜಾತಿ ಹೆಸರಿನಲ್ಲಿ ಗ್ಯಾರಂಟಿಗಳ ಹೆಸರಿನಲ್ಲಿ ಜನರಿಗೆ ಮಂಕುಬೂದಿ ಎರಚುವ ಕೆಲಸ ಮಾಡಿದ್ದಾರೆ. ರಾಹುಲ್ ಗಾಂಧಿ ಅವರು ಹೋಗಿದ್ದ ಕಡೆಯಲ್ಲಾ ಹೇಳುತ್ತಿದ್ದರು ಕರ್ನಾಟಕಲ್ಲಿ ಐದು ಗ್ಯಾರಂಟಿಗಳು ಜಾರಿಗೆ ತಂದಿದ್ದೇವೆ ಜೊತೆಗೆ ದೇಶದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ಖಾತೆಗೆ ಕಟಾ ಕಟ್ ಅಂತ ಹಣ ಬರುತ್ತೆ ಎಂದು ಹೇಳುತ್ತಿದ್ದರು ಭಾರತ್ ಜೋಡೋ ಜಾತ್ರೆ, ಭಾರತ್ ನ್ಯಾಯ ಯಾತ್ರೆ ನಡೆಸಿದರು. ಕರ್ನಾಟಕದಲ್ಲಿ ಗ್ಯಾರಂಟಿಗಳ ಮೂಲಕ ಜನರಿಗೆ ಮಕ್ಮಲ್ ಟೋಪಿ ಸರ್ಕಾರ ಬಂದಿದೆ.
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಮಲ್ಲೇಶ್ ಬಾಬು ಅವರನ್ನು ಹೆಚ್ಚು ಮತಗಳಿಂದ ಗೆಲ್ಲಿಸಿರುವ ಉದಾಹರಣೆಯಿದೆ. ಅದೇ ರೀತಿ ಚಿಕ್ಕಬಳ್ಳಾಪುರದಲ್ಲಿ ಡಾ ಕೆ ಸುಧಾಕರ್ ಅವರಿಗೆ ಒಂದು ಓಟು ಹೆಚ್ಚಿಗೆ ಬಂದರೆ ರಾಜೀನಾಮೆ ಕೊಡುತ್ತೇವೆಂದು ಸವಾಲಾಕಿದ್ದರು ಅವರೆಲ್ಲರಿಗೂ ಜನ ತಕ್ಕ ಪಾಠ ಕಲಿಸಿದ್ದಾರೆ. ಮೋದಿಯವರನ್ನು ರಾಜಕೀಯವಾಗಿ ಕಟ್ಟಿಹಾಕುವುದಕ್ಕೆ ಸಾಧ್ಯವಿಲ್ಲವೆಂದು ಸಾಭೀತಾಗಿದೆ.
ಕರ್ನಾಟದಿಂದ ಜೆಡಿಎಸ್ ಪಕ್ಷದಿಂದ ಎರಡು ಸ್ಥಾನಗಳು ಗೆದ್ದಿದ್ದು ಹೆಚ್.ಡಿ ಕುಮಾರಸ್ವಾಮಿ ಅವರು ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದಾರೆ. ಅವರು ಕೇಂದ್ರದಲ್ಲಿ ಸಚಿವರಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಗಿಂತ ನಾಲ್ಕು ಪಟ್ಟು ಎತ್ತರಕ್ಕೆ ಬೆಳೆದು ಹೋಗಿದ್ದಾರೆ ಅವರಿಗೆ ಕೃಷಿಯನ್ನು ಖಾತೆ ನೀಡಿದ್ದೆ ಆದಲ್ಲಿ ಬಯಲು ಸೀಮೆ ಜಿಲ್ಲೆಗಳಿಗೆ ಆಗಬೇಕಿರುವ ಕೆಲಸಗಳು ಮುಖ್ಯಮಂತ್ರಿಗಳು ಸಹಾ ಮಾಡಲಿಕ್ಕೆ ಸಾಧ್ಯವಿಲ್ಲದೇ ಇರುವ ಕೆಲಸಗಳು ನಾವೆಲ್ಲರೂ ಹೋಗಿ ಅವರ ಕೆಲಸ ಮಾಡಿಸಿಕೊಂಡು ಬರುತ್ತೇವೆ. ಜೆಡಿಎಸ್ ಮತ್ತು ಬಿಜೆಪಿ ಇಬ್ಬರೂ ಸೇರಿ ಕಾಂಗ್ರೇಸ್ ನ್ನು ಕಟ್ಟಿಹಾಕಿದ್ದರಿಂದ ರಾಜ್ಯದಲ್ಲಿ ಹೆಚ್ಚು ಸ್ಥಾನಗಳು ಬಂದಿದ ಎಂದರು.
ಬಿಜೆಪಿ- ಜೆಡಿಎಸ್ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಹಿಯನ್ನು ಹಂಚಿ ಸಂಭ್ರಮಾಚರಣೆ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಸೀಕಲ್ ಆನಂದ್ ಗೌಡ, ಮುಖಂಡರಾದ ಕಂಬದಹಳ್ಳಿ ಸುರೇಂದ್ರಗೌಡ, ಮಾಜಿ ಶಾಸಕ ಎಂ.ರಾಜಣ್ಣ, ಹುಜಗೂರು ರಾಮಣ್ಣ, ಧನಂಜಯ್ ರೆಡ್ಡಿ, ಬಂಕ್ ಮುನಿಯಪ್ಪ, ಆಂಜನೇಯರೆಡ್ಡಿ, ಮಾಜಿ ತಾ.ಪಂ. ಅಧ್ಯಕ್ಷರಾದ ಲಕ್ಷ್ಮೀನಾರಾಯಣರೆಡ್ಡಿ, ರಮೇಶ್ ಬಾಯರಿ ಸೇರಿದಂತೆ ಇತರರು ಉಪಸ್ಥಿರಿದ್ದರು.