ಶಿಡ್ಲಘಟ್ಟ : ವಿಧಾನ ಪರಿಷತ್ ಚುನಾವಣೆ ಇದೇ ಜೂನ್ 03 ರಂದು ನಡೆಯಲಿದ್ದು, ಡಾ. ವೈ ಎ ನಾರಾಯಣಸ್ವಾಮಿ ಅವರು ಎನ್.ಡಿ.ಎ ಮೈತ್ರಿ ಅಭ್ಯರ್ಥಿಯಾಗಿದ್ದಾರೆ. ಸತತವಾಗಿ 18 -20 ವರ್ಷಗಳಿಂದ ಶಿಕ್ಷಕರ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ ಜೊತೆಗೆ ಏಳು ಬೀಳುಗಳನ್ನು ನೋಡಿರುವಂತಹ ವ್ಯಕ್ತಿ ವಿದ್ಯಾವಂತರಾಗಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ ಕ್ಷೇತ್ರದಲ್ಲಿ ಸುಮಾರು 20-25 ಸಾವಿರ ಶಿಕ್ಷಕ ಮತದಾರರಿದ್ದು ಪ್ರಜ್ಞಾವಂತ ಶಿಕ್ಷಕರು ನಮ್ಮಅಭ್ಯರ್ಥಿ ಡಾ. ವೈ.ಎ ನಾರಾಯಣಸ್ವಾಮಿ ಅವರಿಗೆ ಪ್ರಥಮ ಪ್ರಾಶಸ್ತ್ರ ಮತವನ್ನು ನೀಡಿ ಜಯಶೀಲರನ್ನಾಗಿ ಮಾಡಬೇಕು ಎಂದು ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ಬಿ.ಜೆಪಿ ಮುಖಂಡರಾದ ಸೀಕಲ್ ರಾಮಚಂದ್ರ ಗೌಡ ಮನವಿ ಮಾಡಿದರು.
ನಗರದ ಬಿಜೆಪಿ ಸೇವಾ ಸೌಧ ಕಛೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ನಮ್ಮ ಅಭ್ಯರ್ಥಿ ಈಗಾಗಲೇ 2-3 ಬಾರಿ ಕ್ಯಾಂಪೇನ್ ಮಾಡಿದ್ದಾರೆ ನಾವು ಸಹಾ ಶಾಲೆ-ಕಾಲೇಜುಗಳಿಗೆ ಬೇಟಿ ನೀಡಿದ್ದೇವೆ. ಮನೆ ಮನೆಗೆ ಬೇಟಿ ನೀಡಿ ಮತಯಾಚನೆ ಮಾಡುತ್ತಿದ್ದೇವೆ. ಡಾ. ವೈ.ಎ ನಾರಾಯಣಸ್ವಾಮಿ ಅವರು ಗೆಲ್ಲುವ ಸೂಚನೆ ಈಗಾಗಲೆ ನಮಗೆ ಸಿಕ್ಕಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜ್ವಲ್ ರೇವಣ್ಣ ಪ್ರಕರಣ ವೈಯಕ್ತಿಕ: ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಿಂದ ವಿಧಾನ ಪರಿಷತ್ ಎನ್.ಡಿ.ಎ ಮೈತ್ರಿ ಅಭ್ಯರ್ಥಿಯ ಮೇಲೆ ಪರಿಣಾಮ ಬೀರುತ್ತದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಪ್ರಜಲ್ ರೇವಣ್ಣ ವ್ಯಕ್ತಿ ವೈಯಕ್ತಿಕವಾಗಿ ಮಾಡಿರುವ ಅಪರಾಧವಾಗಿರಬಹುದು. ಅದು ವೈಯಕ್ತಿಕವಾದದ್ದು ಅದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಎಫ್.ಐ.ಆರ್ ಆಧರಿಸಿ ಈಗಾಗಲೇ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಸಹಾ ಪ್ರಜ್ವಲ್ ರೇವಣ್ಣಗೆ ಸೂಚನೆ ನೀಡಿದ್ದರು. ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟಣೆ ಮಾಡಿದ್ದಾರೆ. ಇದ್ಯಾವುದೂ ನಮಗೆ ಪರಿಣಾಮ ಬೀರುವುದಿಲ್ಲವೆಂದು ಸ್ಪಷ್ಟಪಡಿಸಿದರು.
ಮಾಜಿ ಶಾಸಕ ಎಂ. ರಾಜಣ್ಣ ಮಾತನಾಡಿ ಎನ್.ಡಿ.ಎ ಅಭ್ಯರ್ಥಿ ಡಾ.ವೈ ನಾರಾಯಣಸ್ವಾಮಿ ಅವರನ್ನು ಜಯಶೀಲರನ್ನಾಗಿ ಮಾಡುವ ನಿಟ್ಟಿನಲ್ಲಿ ಭಾರತೀಯ ಜನತಾ ಪಾರ್ಟಿ ಹಾಗೂ ಜೆಡಿಎಸ್ ಪಕ್ಷ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ವಿಧಾನ ಪರಿಷತ್ತಿನಲ್ಲಿ ಶಿಕ್ಷಕ ವೃಂದದವರ ಧ್ವನಿಯಾಗಿ ಸರ್ಕಾರದ ಮೇಲೆ ಒತ್ತಡ ತರುತ್ತಾರೆ. ಸಾಕಷ್ಟು ಅಭಿವೃದ್ದಿ ಕೆಲಸ ಮಾಡಿದ್ದಾರೆ. ಈ ಬಾರಿಯೂ ಎಲ್ಲಾ ಶಿಕ್ಷಕ ವೃಂದದವರು ಹೆಚ್ಚಿನ ಬಹುಮತ ನೀಡಿ ಗೆಲ್ಲುವ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸೀಕಲ್ ರಾಮಚಂದ್ರಗೌಡ, ಬಿಜೆಪಿ ನಗರ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಸೀಕಲ್ ಆನಂದ್ ಗೌಡ, ಬಿಜೆಪಿ ಮುಖಂಡರಾದ ಸುರೇಂದ್ರಗೌಡ, ನಾರ್ಥ್ ಈಸ್ಟ್ ಪ್ರಾಪರ್ಟಿ ಸುರೇಶ್, ಓಬಿಸಿ ಮೋರ್ಜಾ ಆಂಜನೇಯರೆಡ್ಡಿ, ವೆಂಕಟೇಶ್, ಚಾತುರ್ಯ, ಮಂಜುಳಮ್ಮ, ಮಳ್ಳೂರಯ್ಯ, ಪುರುಷೋತ್ತಮ್, ನಗರಸಭೆ ಸದಸ್ಯ ನಾರಾಯಣಸ್ವಾಮಿ, ಖ್ಯಾತ ವೈದ್ಯರಾದ ಡಾ ಸತ್ಯನಾರಾಯಣ ರಾವ್, ನಗರ ಘಟಕ ಅಧ್ಯಕ್ಷ ನರೇಶ್, ಪ್ರಧಾನಕಾರ್ಯದರ್ಶಿ ನಾಗೇಶ್ ಸೇರಿದಂತೆ ಇತರರು ಹಾಜರಿದ್ದರು.