Tuesday, December 24, 2024
Homeಜಿಲ್ಲೆಮಗುವಿನ ರಕ್ತ ಕ್ಯಾನ್ಸರ್ ಚಿಕಿತ್ಸೆಗೆ ಅರ್ಥಿಕ ನೆರವು.

ಮಗುವಿನ ರಕ್ತ ಕ್ಯಾನ್ಸರ್ ಚಿಕಿತ್ಸೆಗೆ ಅರ್ಥಿಕ ನೆರವು.

ಶಿಡ್ಲಘಟ್ಟ : ತಾಲ್ಲೂಕಿನ ವೈ ಹುಣಸೇನಹಳ್ಳಿ ಗ್ರಾಮದ ನಿವಾಸಿ ಆರತಿ ಜಗದೀಶ್ ಎಂಬುವವರ ಸುಮಾರು 04 ವರ್ಷ ವಯಸ್ಸಿನ ಮಗು (ತನ್ಮಯ್ ತೇಜ್) ರಕ್ತ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಮಗುವಿನ ಚಿಕಿತ್ಸೆಗೆಗಾಗಿ ಅರ್ಥಿಕ ಸಹಾಯ ನೀಡಲಾಯಿತು ಎಂದು ಜಿಲ್ಲಾ ನಿರ್ದೇಶಕ ಪ್ರಶಾಂತ್ ಸಿ.ಎಸ್ ತಿಳಿಸಿದರು.

ಕುಟುಂಬದ ಆರ್ಥಿಕ ಪರಿಸ್ಥಿತಿ ತೀರಾ ಬಡತನದಲ್ಲಿದ್ದು, ಮಗುವಿನ ಚಿಕಿತ್ಸೆಗೆ ಸಹಾಯ ಮಾಡುವಂತೆ ಪೋಷಕರು ಮನವಿ ಸಲ್ಲಿಸಿಕೊಂಡಿರುತ್ತಾರೆ. ಪೂಜ್ಯರಾದ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ರೂ.40,000/- ಸಹಾಯಧನವನ್ನು ಮಂಜೂರು ಮಾಡಿರುತ್ತಾರೆ. ಸಹಾಯಧನದ ಮಂಜೂರಾತಿ ಪತ್ರವನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಯೋಜನಾಧಿಕಾರಿ ಸುರೇಶ್ ಗೌಡ. ಎಸ್ , ಮೇಲ್ವಿಚಾರಕಾರ ಪಾಲನಾಯಕ್ ಹಾಗೂ ಸೇವಾಪ್ರತಿನಿಧಿ ವರಲಕ್ಷ್ಮಮ್ಮ ಹಾಗೂ ಒಕ್ಕೂಟದ ಸದಸ್ಯರು ಸೇರಿದಂತೆ ಇತರರು  ಉಪಸ್ಥಿತರಿದ್ದರು.

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!