ಶಿಡ್ಲಘಟ್ಟ: ರಾಷ್ಟ್ರೀಯ ನಾಡ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತ ವತಿಯಿಂದ ತಾಲ್ಲೂಕು ಆಡಳಿತ ಸೌಧ ಕಛೇರಿಯ ಸಭಾಂಗಣದಲ್ಲಿ ಮಹರ್ಷಿ ಭಗೀರಥ ಜಯಂತೋತ್ಸವ ಸರಳವಾಗಿ ಆಚರಣೆ ಮಾಡಲಾಯಿತು.
ಮಹರ್ಷಿ ಭಗೀರಥ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಭಕ್ತಿ ಭಾವದಿಂದ ಪುಷ್ಪನಮನ ಸಲ್ಲಿಸಿದರು. ಆತ್ಮಗೌರವ ಮತ್ತು ಆತ್ಮಗಳ ಅಸ್ತಿತ್ವ ಮುಕ್ತಿ ಪಡೆಯಲು ಗಂಗೆಯ ಸಂಗಮ ಮುಖ್ಯ. ತನ್ನ ಪೂರ್ವಿಕರ ಮುಕ್ತಿ ಗೆ ಗಂಗೆಯನ್ನು ಭೂಲೋಕಕ್ಕೆ ಕರೆಸಿ, ಶಿವನನ್ನು ಒಲಿಸಿಕೊಳ್ಳುವ ಮಹರ್ಷಿ ಭಗೀರಥರ ಜಯಂತೋತ್ಸವ ಸರಳವಾಗಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಹರ್ಷಿ ಭಗೀರಥ ಸಂಘದ ಗೌರವಾಧ್ಯಕ್ಷ ನರಸಿಂಹಪ್ಪ, ಜಿಲ್ಲಾ ಖಜಾಂಚಿ ಎನ್.ಕುಮಾರ್, ಜಿಲ್ಲಾ ಸಫಾಯಿ ಕರ್ಮಚಾರಿಗಳ ಪುನರ್ವಸತಿ ಸಮಿತಿ ಸದಸ್ಯ ಸಿ.ವಿ.ಲಕ್ಷ್ಮಣರಾಜು, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಜಗದೀಶ್, ಸಿ.ಡಿ.ಪಿ.ಓ.ನೌತಾಜ್, ಹಕ್ಕುದಾಖಲೆ ಶಿರಸ್ತೆದಾರ್ ಆಸೀಯಾ ಬೀ,ಗ್ರೇಡ್ – 2 ತಹಶೀಲ್ದಾರ್ ಹರೀಶ್, ಕಂದಾಯ ಇಲಾಖೆಯ ಸಿಬ್ಬಂದಿ ಸೇರಿದಂತೆ ಮಹರ್ಷೀ ಭಗೀರಥ ಕುಲ ಬಾಂಧವರು ಇತರರು ಉಪಸ್ಥಿತರಿದ್ದರು.