Monday, December 23, 2024
Homeಜಿಲ್ಲೆಹೂವಿನ ತೋಟಕ್ಕೆ ಬೆಂಕಿ ತಗುಲಿ ಅಪಾರ ಬೆಳೆ ಹಾನಿ ರೈತ ಕಂಗಾಲು.!

ಹೂವಿನ ತೋಟಕ್ಕೆ ಬೆಂಕಿ ತಗುಲಿ ಅಪಾರ ಬೆಳೆ ಹಾನಿ ರೈತ ಕಂಗಾಲು.!

ಶಿಡ್ಲಘಟ್ಟ : ದುಷ್ಕರ್ಮಿಗಳ ದುಷ್ಕೃತ್ಯದಿಂದ ಚಾಮಂತಿ ಹೂವಿನತೋಟಕ್ಕೆ ಬೆಂಕಿ ಬಿದ್ದು, ಬೆಳೆಹಾನಿಯಾಗಿದ್ದು ಇದರಿಂದ  ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಹೌದು ತಾಲೂಕಿನ ಕನ್ನಪ್ಪನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸುಮಾರು ಒಂದು ಎಕರೆಯಷ್ಟು ಜಾಗದಲ್ಲಿ ರೈತ ವೆಂಕಟೇಶಪ್ಪ ಎಂಬುವವರು ಬೆಳೆದಿದ್ದ ಹೂವಿನ ಗಿಡಗಳು ಬೆಂಕಿಗೆ ಸುಟ್ಟು ಕರಕಲಾಗಿದೆ. ಮಾರುಕಟ್ಟೆಯಲ್ಲಿ ಚಾಮಂತಿ ಹೂವಿಗೆ ಪ್ರತಿ  ಕೆಜಿಗೆ 300-350 ರೂ ಬೆಲೆ ಇದ್ದು,  ರೈತ ವೆಂಕಟೇಶಪ್ಪ ಒಂದು ತಿಂಗಳ ಹಿಂದೆ ಸಸಿ ತಂದು ನೆಟ್ಟು ಪೋಷಿಸಿದ್ದ ಆದರೆ ಬೆಳೆ ಬೆಳೆದು ಫಸಲು ಬರುವ ಮೊದಲೇ ಬೆಂಕಿಗೆ ಸಂಪೂರ್ಣ ನಾಶವಾಗಿದೆ. ಇದರಿಂದ ರೈತ ಕಂಗಲಾಗಿದ್ದಾನೆ. ಪಕ್ಕದ ಜಮೀನಿನವರು ನೀಲಗಿರಿ ಸೊಪ್ಪಿಗೆ ಬೆಂಕಿ ಹಚ್ಚಿರುವುದರಿಂದ ಬೆಂಕಿಯ ಶಾಖ ಹೂವಿನ ಬೆಳೆಗೂ ತಗುಲಿ ಬೆಳೆ ಸುಟ್ಟು ಹಾನಿಯಾಗಿದೆ ಎಂದು ರೈತ ವೆಂಕಟೇಶಪ್ಪ ಅವರು ಆರೋಪಿಸಿದ್ದಾರೆ.

ಈ ಬಿರು ಬೇಸಿಗೆಯಲ್ಲಿ ಬರುವ ಅಷ್ಟಿಷ್ಟು ನೀರಿನಲ್ಲಿ ರೈತ ಕಷ್ಟ ಪಟ್ಟು ಬೆಳೆ ಬೆಳೆದಿದ್ದ, ಆದರೆ ದುಷ್ಕರ್ಮಿಗಳ  ಕೃತ್ಯದಿಂದ ಸದ್ಯ ರೈತ ಕಂಗಾಲಾಗಿದ್ದು, ಬೇಸಿಗೆಯಲ್ಲಿ ಬೆಳೆ ಬೆಳಯುವುದೇ ಕಷ್ಟಕವಾಗಿದೆ. ನಮಗೆ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕೆಂದು ರೈತ ಒತ್ತಾಯಿಸಿದ್ದಾರೆ. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬೆಳೆ ಹಾನಿಗೆ  ಸೂಕ್ತ ಪರಿಹಾರ ಸಿಗಬೇಕಾಗಿದೆ.

ವರದಿ: ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ 

Social Media Links
RELATED ARTICLES

1 COMMENT

  1. Join forces with https://SellAccs.net and capitalize on the burgeoning market of online account transactions! As our partner, you’ll gain access to a robust platform designed for seamless buying and selling experiences. Benefit from competitive commissions, extensive support, and a vast network of potential clients. Together, let’s revolutionize digital commerce while maximizing your earning potential. Partner with https://SellAccs.net today and embark on a journey to unparalleled success!

    PLEASE CLICK THE UP COMING WEBSITE PAGE: https://SellAccs.net

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!