ಅಂತಿಮ ದರ್ಶನಕ್ಕೆ ಹರಿದು ಬಂದ ಅಪಾರ ಅಭಿಮಾನಿಗಳು, ಗಣ್ಯರಿಂದ ಅಂತಿಮ ನಮನ.
ಶಿಡ್ಲಘಟ್ಟ: ಪರಿಸರ ಪ್ರೇಮಿ ಕಾಂಗ್ರೇಸ್ ಯುವ ಮುಖಂಡ ಗ್ರಾ.ಪಂ ಸದಸ್ಯ ಬೆಳ್ಳೂಟಿ ಸಂತೋಷ್ ಅವರು ಸೋಮವಾರ ಮುಂಜಾನೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ ಸಮಾಜ ಸೇವೆ, ಪರಿಸರದ ಮೇಲೆ ಅತ್ಯಂತ ಕಾಳಜಿ ಹೊಂದಿದ್ದ ವ್ಯಕ್ತಿ ತಮ್ಮ ಮಕ್ಕಳನ್ನು ಪೋಷಿಸುವಂತೆ ಗಿಡ ಮರಗಳನ್ನು ಬೆಳೆಸುವ ಕೆಲಸ ಮಾಡುವ ಮೂಲಕ ಪರಿಸರ ಪ್ರೇಮಿಯಾಗಿದ್ದರು. ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಇಂದು ಬೆಳಂ ಬೆಳಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆಳ್ಳೂಟಿ ಸಂತೋಷ್ ಇನ್ನಿಲ್ಲ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ಅವರ ಸ್ವ ಗ್ರಾಮಕ್ಕೆ ಅವರ ಅಪಾರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.
ರಾಜ್ಯದ ಕಂದಾಯ ಸಚಿವರಾದ ಕೃಷ್ಣಬೈರೇಗೌಡ, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್, ಕೋಲಾರ ಲೋಕಸಭಾ ಕ್ಷೇತ್ರ ಅಭ್ಯರ್ಥಿ ಕೆ.ವಿ ಗೌತಮ್, ಮಾಚಿ ಸಚಿವ ವಿ. ಮುನಿಯಪ್ಪ, ಶಾಸಕ ಬಿ.ಎನ್ ರವಿಕುಮಾರ್, ಕಾಂಗ್ರೇಸ್ ಮುಖಂಡರಾದ ಶಶಿಧರ್ ಮುನಿಯಪ್ಪ, ರಾಜೀವ್ ಗೌಡ, ಪುಟ್ಟು ಆಂಜಿನಪ್ಪ, ಕೊಚಿಮುಲ್ ನಿರ್ದೇಶಕ ಆರ್ ಶ್ರೀನಿವಾಸ್, ಮಾಜಿ ಶಾಸಕ ರಾಜಣ್ಣ, ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೇಶವರೆಡ್ಡಿ,ನಗರ ಠಾಣೆ ಪಿಎಸ್ಐ ವೇಣುಗೋಪಾಲ್, ತಾದೂರು ರಘು ಸೇರಿದಂತೆ ಇನ್ನು ಅನೇಕ ಮುಖಂಡರು ಹಾಗೂ ತಾಲ್ಲೂಕಿನ ಜನತೆ ಅವರ ಮನೆಯ ಬಳಿ ಸಾಗರೋಪಾದಿಯಲ್ಲಿ ಬಂದು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.
ಬೆಳ್ಳೂಟಿ ಗ್ರಾಮದ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೃತರು ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.