ಚಿಕ್ಕಬಳ್ಳಾಪುರ : ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ವೆಸಗಿ ಗರ್ಭಿಣಿ ಮಾಡಿದ್ದ ಆರೋಪಿಗೆ ಬರೋಬ್ಬರಿ 20 ವರ್ಷಗಳು ಕಠಿಣ ಶಿಕ್ಷೆ, ಹಾಗೂ 5000 ಸಾವಿರ ದಂಢ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ 2020 ನೇ ಜನವರಿ ಮಾಹೆಯಲ್ಲಿ ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕಿಯನ್ನ ಪುಸಲಾಯಿಸಿ ತನ್ನ ದ್ವಿ ಚಕ್ರ ವಾಹನದಲ್ಲಿ ಅಪಹರಿಸಿಕೊಂಡು ಹೋಗಿ ಮನೆಯಲ್ಲಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಬಾಲಕಿಯ ಮೇಲೆ ಲೈಂಗಿಕ ಅತ್ಯಾಚಾರ ಮಾಡಿ ಗರ್ಭಿಣಿ ಮಾಡಲಾಗಿತ್ತು.
ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಮೊ.ಸಂ.03/2020 ರಂತೆ ಕಲಂ 363,366(ಎ),376 ಐಪಿಸಿ, ಕಲಂ 4,8,12 ಷೋಕ್ಸೋ ಆಕ್ಟ್ ಅಡಿಯಲ್ಲಿ ಮೊಕದ್ದಮೆ ದಾಖಲು ಮಾಡಿದ್ದು ತನಿಖೆಯನ್ನು ಪೂರ್ತಿಗೊಳಿಸಿ ಸುರೇಶ್.ಕೆ, ಸಿ.ಪಿ.ಐ ಅವರು ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸದರಿ ಪ್ರಕರಣದ ವಿಚಾರಣೆಯು ಚಿಕ್ಕಬಳ್ಳಾಪುರದ ಎಫ್.ಟಿ.ಎಸ್.ಸಿ-1ನೇ ನ್ಯಾಯಾಲಯದಲ್ಲಿ ನಡೆದಿದ್ದು,
ದಿನಾಂಕ:09/02/2024 ರಂದು ವಿಚಾರಣೆಯು ಮುಗಿದಿರುತ್ತದೆ. ನ್ಯಾಯಾಧೀಶರಾದ ಸವಿತಾ ಕುಮಾರಿ.ಎನ್. ಅವರು ಆರೋಪಿಗೆ ಕಲಂ 5 (ಎಲ್) ದಂಡನೀಯ ಅಪರಾಧದ ಕಲಂ 6 ಆಫ್ ಷೋಕ್ಸೋ ಆಕ್ಟ್ ಅಪರಾಧಕ್ಕಾಗಿ 20 ವರ್ಷಗಳ ಕಠಿಣ ಶಿಕ್ಷೆ ಮತ್ತು 5.000/- ರೂ. ದಂಡವನ್ನು ವಿಧಿಸಿ ಶಿಕ್ಷೆ ನೀಡಿರುತ್ತಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಲಕ್ಷ್ಮೀನರಸಿಂಹಪ್ಪ ರವರು ವಾದ ಮಂಡಿಸಿರುತ್ತಾರೆ. ನ್ಯಾಯಾಲಯದ ಆದೇಶದಿಂದ ಅತ್ಯಾಚಾರಿಗಳ ಎದೆಯಲ್ಲಿ ನಡುಕ ಶುರುವಾಗಿದೆ. ತಪ್ಪು ಮಾಡುವ ಮುಂಚೆ ನೂರು ಬಾರಿ ಯೋಚಿಸಿ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟ ಅಲೋಚನೆಯೂ ಮಾಡದಂತಹ ಮಹತ್ವದ ತೀರ್ಪು ನೀಡಿ ನ್ಯಾಯಾಲಯ ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಿದೆ