ಶಿಡ್ಲಘಟ್ಟ : ತಾಲ್ಲೂಕಿನ ದೊಣ್ಣಹಳ್ಳಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಹಾಗೂ ವಿಶ್ವಜ್ಞಾನಿ ಡಾ.ಬಿ.ಆರ್. ಅಂಬೇಡ್ಕರ್ ಅವರ 133 ನೇ ಜಯಂತೋತ್ಸವವನ್ನು ದೊಣ್ಣಹಳ್ಳಿ ಗ್ರಾಮದ ಜೈ ಭೀಮ್ ಯುವಕರ ಸಂಘ ಮತ್ತು ಮಹಿಳಾ ಸ್ತ್ರೀಶಕ್ತಿ ಸಂಘ ವತಿಯಿಂದ ಭಾನುವಾರ ಸಡಗರದಿಂದ ಆಚರಿಸಲಾಯಿತು
ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕುಂದಲಗುರ್ಕಿ ಗ್ರಾಮ ಪಂಚಾಯಿತಿ ಪಿಡಿಓ ಆದಿಲಕ್ಷ್ಮಮ್ಮ ಮಾತನಾಡಿ, ಸಂವಿಧಾನ ದೇಶದ ಉಸಿರು,ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ ಅಂಬೇಡ್ಕರ್ ಇವರ ಜೀವನ ಇಂದಿನ ಯುವ ಪೀಳಿಗೆಗೆ ಆದರ್ಶವಾಗಿದ್ದು ಎಲ್ಲರೂ ಅವರ ತತ್ವಗಳನ್ನು ಪಾಲಿಸಲು ಸಲಹೆ ನೀಡಿದರು.
ಸಂವಿಧಾನದ ಮುಖಾಂತರ ಹಕ್ಕುಗಳನ್ನು ಕೊಟ್ಟಿರುವ ಏಕೈಕ ಮಹಾನ್ ಚೇತನ ಡಾಕ್ಟರ್ ಬಿ.ಆರ್ ಅಂಬೇಡ್ಕರ್, ಪ್ರತಿಯೊಬ್ಬರೂ ಸಂವಿಧಾನದ ಆಶಯದಂತೆ ನಡೆಯಬೇಕು. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಭಾರತೀಯರಿಗೆ ಮತದಾನ ಹಕ್ಕು ಕೊಡಿಸಿದ ಕೀರ್ತಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದರು.ಇನ್ನೂ ಸಮಾಜದಲ್ಲಿ ಹೆಣ್ಣಾಗಲೀ – ಗಂಡಾಗಲಿ ಸಮಾನತೆಯಿಂದ ನಮ್ಮ ಹಕ್ಕನ್ನು ಕೇಳುತಿದ್ದಿವಿ ಅಂದ್ರೆ ಅದಕ್ಕೆ ಪ್ರಮುಖ ಕಾರಣ .ಡಾ.ಅಂಬೇಡ್ಕರ್ ರವರಗಿದ್ದು, ಸಂವಿಧಾನದಲ್ಲಿ ಮಹಿಳೆಯರಿಗೆ ಸಹ ಸಮಾನ ಹಕ್ಕುಗಳನ್ನು ನೀಡಲಾಗಿದೆ ಎಂದರು.
ಇನ್ನು ಇದೇ ಸಂದರ್ಭದಲ್ಲಿ ಮತದಾನದ ಕುರಿತು ಜಾಗೃತಿ ಮತ್ತು ಪ್ರತಿಜ್ಞಾವಿಧಿ ಭೋದಿಸಲಾಯಿತು. ಜಯಂತಿ ಪ್ರಯುಕ್ತ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಜೈ ಭೀಮ್ ಯುವಕರ ಸಂಘದ ಬಿ ಎಚ್ ರಮೇಶ್, ಡಿಎನ್ ವಿಶ್ವನಾಥ್, ಡಿಎಂ ಮೋಹನ್, ಡಿಎಲ್ ಗಿರೀಶ್, ವೆಂಕಟಸ್ವಾಮಿ, ರೆಡ್ಡಪ್ಪ,, ಮಾರೇಶ್, ಮಹೇಶ್, ರಘು ಡಿ.ವಿ. ಪ್ರತಾಪ್ ಡಿಎನ್, ಶ್ರೀ ರಾಮ್ ಡಿಇ ದ್ಯಾವಪ್ಪ, ಪತಿಕುಮಾರ್, ಹನುಮಂತಪ್ಪ, ರಾಜಪ್ಪ, ಮುನಿಗಿಡ್ಡಪ್ಪ ಸೇರಿದಂತೆ ಇತರರು ಹಾಜರಿದ್ದರು.