ಗೌರಿಬಿದನೂರು : ತಾಲ್ಲೂಕಿನ ನಗರಗೆರೆ ಹೋಬಳಿ ಮೇಳ ಗ್ರಾಮದ ಬಳಿ ಅಕ್ರಮವಾಗಿ ಜೂಜಾಟವಾಡುತ್ತಿದ್ದ ಅಡ್ಡೆಯ ಮೇಲೆ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ 10 ಜನ ಆರೋಪಿಗಳನ್ನ ಬಂಧಿಸಿದ್ದಾರೆ.
ಆರೋಪಿಗಳ ವಿವರ : ಶಿಡ್ಲಘಟ್ಟದ 1) ಕೇಶವಮೂರ್ತಿ @ ಪಟಾಕಿ ಕೇಶವ ಬಿನ್ ಮುನಿಶ್ಯಾಮಪ್ಪ, 2) ಕೆ.ನರಸಿಂಹಮೂರ್ತಿ ಬಿನ್ ಲೇಟ್ ಕದಿರಪ್ಪ, 3) ಕೆ.ಲೋಕೇಶ ಬಿನ್ ಕುಮಾರ್ 4) ಬಿ.ಸುರೇಶ ಬಿನ್ ಬಸವರಾಯಪ್ಪ 5) ಬಿ.ಸುರೇಶ ಬಿನ್ ಬಚ್ಚೇಗೌಡ 6) ಶಿವಕುಮಾರ್ ಬಿನ್ ಕೆಂಪಣ್ಯ 7) ಗೋವರ್ದನ್ ಬಿನ್ ರಾಮಕೃಷ್ಣಪ್ಪ 8) ಮನೋಹರ ವಿ ಬಿನ್ ವೆಂಕಟರವಣಪ್ಪ 9) ಗಿರಿದರ್ ಕೆ.ಜೆ ಬಿನ್ ಜಯದೇವಪ್ಪ ಮತ್ತು 10) ನಾರಾಯಣಸ್ವಾಮಿ ಬಿನ್ ಚಿಕ್ಕ ಮುನಿಶ್ಯಾಮಪ್ಪ ರವರಗಳನ್ನು ಹಾಗೂ 55820/- ರೂಗಳ ನಗದನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಭಾಗಿಯಾದ ಸಿಇಎನ್ ಪೊಲೀಸ್ ಠಾಣೆಯ ಡಿ.ವೈ.ಎಸ್.ಪಿ ರವಿಕುಮಾರ್.ಕೆ.ವೈ. ಸಿಬ್ಬಂದಿಯಾದ ಎ.ಎಸ್.ಐ ಸುಬ್ರಮಣಿ, ಸಿಹೆಚ್ ಸಿ ನಾರಾಯಣಸ್ವಾಮಿ, ಕೃಷ್ಣಪ್ಪ, ಸಿಪಿಸಿ ಬಾಲಕೃಷ್ಣ ಎನ್, ವಿಲಾಸ ಕಂಟೆಪ್ಪ ಗೋಳ ಮತ್ತು ಎಪಿಸಿ ತುಳಸೀರಾಮ ತಂಡವನ್ನು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕುಶಾಲ್ ಚೌಕ್ಸೆ, ಐ.ಪಿ.ಎಸ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ರಾಜಾ ಇಮಾಮ್ ಕಾಸಿಂ.ಪಿ ರವರು ಪ್ರಶಂಸಿದ್ದಾರೆ.
Good write-up. I certainly love this site. Keep writing! https://Lvivforum.Pp.ua/