ಗ್ರಾಮದ ಯುವಕರಿಂದ ಕಬ್ಬಡಿ ಪದ್ಯಾವಳಿ ಆಯೋಜನೆ.
ಶಿಡ್ಲಘಟ್ಟ : ತಾಲೂಕಿನ ದೇವರಮಳ್ಳೂರು ಗ್ರಾಮದ ಮಳ್ಳೂರಾಂಭದೇವಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ಡಿ.16 ರಂದು ಗ್ರಾಮದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ (ಆರ್‌ಸಿಜಿಕಬಡ್ಡಿ ಕಫ್) ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ವಿಜೇತ ತಂಡಗಳಿಗೆ ಪ್ರಥಮ ಬಹುಮಾನವಾಗಿ 30 ಸಾವಿರ ರೂ, ನಗದು ಜೊತೆ ಆಕರ್ಷಕ ಟ್ರೋಪಿ, ಎರಡನೇ ಬಹುಮಾನವಾಗಿ 20 ಸಾವಿರ ರೂ, ನಗದು ಬಹುಮಾನದ ಜೊತೆಗೆ ಆಕರ್ಷಕ ಟ್ರೋಪಿ, 3ನೇ ಬಹುಮಾನವಾಗಿ 10 ಸಾವಿರ ರೂ, ನಗದು, ಟ್ರೋಪಿ, ಹಾಗೂ ನಾಲ್ಕನೇ ಬಹುಮಾನವಾಗಿ 5 ಸಾವಿರ ರೂ, ನಗದು ಹಾಗೂ ಆಕರ್ಷಕ ಟ್ರೋಪಿ ನೀಡಲಾಗುವುದೆಂದರು.
ಕ್ರೀಡಾಕೂಟದ ಉದ್ಘಾಟನೆಯನ್ನು ಖ್ಯಾತ ಉದ್ಯಮಿಗಳೂ ಸಮಾಜ ಸೇವಕರಾದ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ನೆರವೇರಿಸಲಿದ್ದು, ಇದೇ ವೇಳೆ ಹಿರಿಯ ಕ್ರೀಡಾಪಟುಗಳಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಆಸಕ್ತರು ಕ್ರೀಡಾಕೂಟದ ವ್ಯವಸ್ಥಾಪಕರಾದ ಶ್ರೀನಾಥಗೌಡ 9964315355, ಹೇಮಂತ್ 9741201084, ಪ್ರಶಾಂತ್ 9069697744, ಗಗನ್ 8747971269 ಹಾಗೂ ಲಕ್ಷ್ಮೀನಾರಾಯಣ್ 8151811094 ಸಂಪರ್ಕಿಸಬಹುದು. ಕ್ರೀಡಾಕೂಟದಲ್ಲಿ ಭಾಗವಹಿಸುವ ತಂಡಗಳಿಗೆ 500 ರೂ, ಪ್ರವೇಶ ಶುಲ್ಕ ಇರುತ್ತದೆ ಎಂದು ಸಂಘಟಕರು ತಿಳಿಸಿದರು.