ನಮ್ಮ ಬಗ್ಗೆ

ಸ್ನೇಹಿತರೆ, ಬಂದುಗಳೇ, ಹಿತೈಷಿಗಳೆ ಎಲ್ಲರಿಗೂ ನಮಸ್ಕಾರ…

ವಿಶ್ವದಲ್ಲೆ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತ. ದೇಶದ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕೆ/ಮಾಧ್ಯಮದ ಮೂಲಕ ಜನಜಾಗೃತಿ, ದೇಶಾಭಿಮಾನ, ಭ್ರಷ್ಠಾಚಾರ ನಿರ್ಮೂಲನೆ, ಸಂವಿಧಾನದ ಸಮಾನತೆಯ ಆಶೆಯಗಳೊಂದಿಗೆ  ಅನಿಲ್ ಕುಮಾರ್ ಕೆ ಎ (ಕೋಟಹಳ್ಳಿ) ಸಂಪಾದಕತ್ವದಲ್ಲಿ “ಸಂವಿಧಾನ ಶಕ್ತಿ” ಕನ್ನಡ ಮತ್ತು ಆಂಗ್ಲವಾರ ಪತ್ರಿಕೆಯು 2023 ರಿಂದ ಆರಂಭವಾಗಿದೆ. ಉತ್ತಮ ಸಮಾಜ, ಸಮ‌ಸಮಾಜ ಕಟ್ಟುವ ನಿಟ್ಟಿನಲ್ಲಿ ಜೊತೆಗೆ ಶೋಷಿತ ಸಮುದಾಯಗಳ ಜನರ ಪ್ರತಿಧ್ವನಿಯಾಗಿ, ಸಮಾನತೆಯ ಪ್ರತಿಬಿಂಬವಾಗಿ ಸಂವಿಧಾನ‌ ಶಿಲ್ಪಿ ಬಾಬಾ ಸಾಹೆಬ್ ಡಾ. ಬಿ.ಆರ್ ಅಂಬೇಡ್ಕರ್ ಹಾಗೂ ‘ಸಮಾನತೆ, ವಿಶ್ವಬಾಂಧವ್ಯ, ವ್ಯಕ್ತಿ ಸ್ವಾತಂತ್ಯ್ರ, ಸತ್ಯ, ಅಹಿಂಸೆ, ದಯಾಪರತೆ ಮೊದಲಾದ ತತ್ವಗಳ ತಳಹದಿಯ ಮೇಲೆ ಆದರ್ಶ ಸಮಾಜವೊಂದನ್ನು ರೂಪಿಸುವ ಯುಗ ಪ್ರವರ್ತಕ ಬಸವಣ್ಣನವರ ಆದರ್ಶಗಳೊಂದಿಗೆ ಸಮಸಮಾಜ ನಿರ್ಮಿಸುವ ನಿಟ್ಟಿನಲ್ಲಿ ದೇಶಾಭಿಮಾನ ಮತ್ತು ಜನಜಾಗೃತಿಯಿಂದ ಮಾತ್ರ ಸಾಧ್ಯವಾಗುತ್ತದೆ.‌ ಯುವ ಸಮುದಾಯದ ಬೆಂಬಲದೊಂದಿಗೆ ಬದಲಾವಣೆಗಾಗಿ ಹೊಸ ಪ್ರಯತ್ನ ಇದಾಗಿದೆ. ಪ್ರಸ್ತುತ ಸಂವಿಧಾನ ಶಕ್ತಿ ಕನ್ನಡ ಮತ್ತು ಆಂಗ್ಲವಾರ ಪತ್ರಿಕೆಯನ್ನು ಪ್ರಾರಂಭಿಸಿದ್ದು, ಜೊತೆಗೆ ಪತ್ರಿಕೆಯ‌ ಹೆಸರಿನಲ್ಲೆ ಅಧಿಕೃತ ವೆಬ್ ಸೈಟ್ samvidhanashakthi.com ಪ್ರಾರಂಭವಾಗಿದೆ.ಸಮಾಜದಲ್ಲಿ ನಡೆಯುವ ನೈಜ ಘಟನೆಗಳು, ಜನ ಸಾಮಾನ್ಯರ ಕಷ್ಟ,ನೋವು‌ ನಲಿವುಗಳು ಸರ್ಕಾರಗಳು/ ನಮ್ಮನ್ನ ಆಳುವವರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.ರಾಜಕೀಯ, ವಿಷಯ- ವಿಚಾರಗಳ ವಿಶ್ಲೇಷಣೆ, ಪ್ರತಿಭೆಗಳನ್ನು ನಾಡಿಗೆ ಪರಿಚಯಿಸುವ ಮೂಲಕ ನಾಡಿನ ಪ್ರತಿಭೆಗಳನ್ನು ಅನಾವರಣ ಮಾಡಲಾಗುತ್ತದೆ.ಮಾಹಿತಿ, ಜಾಗೃತಿ ಮತ್ತು ದೇಶಾಭಿಮಾನ ಬೆಳೆಸುವ ದೊಡ್ಡ ಜವಾಬ್ದಾರಿ ಇಂದಿನ ಸಂದರ್ಭದಲ್ಲಿ ಇದ್ದು, ಮಾಧ್ಯಮದ ಮೂಲಕ ಹೊಸ ವಿಚಾರವಂತರಿಗೆ ಅವಕಾಶ, ಮಾನಸಿಕ ಭಯೋತ್ಪಾದನೆಯನ್ನು ತಡೆದು ಜನರಿಗೆ ನೆಮ್ಮದಿ ಮತ್ತು ಸಮಾನತೆಯ ಜೀವನ ಕಟ್ಟಲು ನಮ್ಮದೊಂದು ಪ್ರಯತ್ನ.

ಸಂವಿಧಾನ‌ ಶಕ್ತಿ‌.‌ SAMVIDHANA SHAKTHI ಕನ್ನಡ ಮತ್ತು ಆಂಗ್ಲವಾರ ಪತ್ರಿಕೆಯು REGISTRAR OF NEWSPAPERS FOR INDIA Government of India ದಿಂದ RNI KARBIL/2023/88420 ನೋಂದಣಿಯಾಗಿದೆ.  ಕಾನೂನು ರೀತ್ಯ ಎಲ್ಲಾ ಹಂತಗಳನ್ನು ಪೂರೈಸುತ್ತಾ ಬಂದಿದೆ. ಸಂವಿಧಾನ ಶಕ್ತಿ ಪತ್ರಿಕೆಯನ್ನು ಮುಂದಿನ ದಿನಗಳಲ್ಲಿ ಯುವ ಶಕ್ತಿ ಬೆಂಬಲದೊಂದಿಗೆ ದೊಡ್ಡ ಮಟ್ಟದಲ್ಲಿ ಪತ್ರಿಕೆಯನ್ನು ಬೆಳಸಿ ದಿನ ಪತ್ರಿಕೆಯನ್ನ ಪ್ರಾರಂಭ ಮಾಡುವ ಸಂಕಲ್ಪ ಹೊಂದಿದ್ದು, ಸಂವಿಧಾನದ ಮೂಲ ಆಶಯಗಳನ್ನ ಎತ್ತಿ ಹಿಡಿದು ಜನಸಾಮಾನ್ಯರ ದ್ವನಿಯಾಗಿ, ಸಮಾನತೆಯ ಪ್ರತಿಬಿಂಬವಾಗಿ ಕೆಲಸ ಮಾಡಲಾಗುತ್ತದೆ. ನಮ್ಮ ಹೊಸ ಪ್ರಯತ್ನ ತಾವು ಕೈ‌ ಜೋಡಿಸಿ ಬೆಂಬಲಿಸಿ ಪ್ರೋತ್ಸಾಹಿಸಿ.ಸಂವಿಧಾನ‌ ಶಕ್ತಿ. ಕನ್ನಡ ಮತ್ತು‌ ಆಂಗ್ಲವಾರ ಪತ್ರಿಕೆಯಲ್ಲಿ ಸುದ್ಧಿ, ಲೇಖನಗಳ ಜೊತೆಗೆ ವಿಶ್ಲೇಷಣೆ ಆಸಕ್ತ ಓದುಗರಿಗೆ ಹಲವಾರು ಮೂಲಗಳಿಂದ ತಲುಪಿಸಲಾಗುತ್ತದೆ. ಸಂವಿಧಾನ‌ ಶಕ್ತಿ ಕನ್ನಡ ಮತ್ತು ಆಂಗ್ಲವಾರ ಪತ್ರಿಕೆಯು ದೇಶಾಭಿಮಾನ, ಭಾಷಾಭಿಮಾನ, ಇತಿಹಾಸ, ಸಂಸ್ಕøತಿ, ಕೃಷಿ, ಆಧ್ಯಾತ್ಮ, ಕಾನೂನು, ರಾಜಕೀಯ ಮಹಿಳಾ ಚಿಂತನೆಗಳು, ವೈಜ್ಞಾನಿಕ, ಶಿಕ್ಷಣ,ವ್ಯಾಪಾರ, ವ್ಯವಹಾರ,ಚಲನಚಿತ್ರ ಮತ್ತು ಕ್ರೀಡೆ ಇಂತಹ ಹಲವಾರು ವಿಶೇಷಗಳ ಬೃಹತ್ ಆಗರ, ಇಂತಹ ವಾರ ಪತ್ರಿಕೆಯನ್ನು ಜೀವನ ಪರ್ಯಂತ ಓದಲು ಮತ್ತು ಸಂಗ್ರಹ ಯೋಗ್ಯ ಮಾಹಿತಿ, ಆಧಾರದ ಈ ಪತ್ರಿಕೆಗೆ ಚಂದಾದಾರ ಆಗುವ ಮೂಲಕ ತಾವು ಸಮಾಜಸೇವೆ ಮಾಡಬಹುದು. ಸಂವಿಧಾನ‌ ಶಕ್ತಿ ವಾರ ಪತ್ರಿಕೆಗೆ ಚಂದಾದಾರರಾಗಿ  ಪತ್ರಿಕೆಯ ಸದಸ್ಯತ್ವ ಪಡೆದರೆ, ಪತ್ರಿಕೆ ಮನೆ ಬಾಗಿಲಿಗೆ ಅಂಚೆ/ಕೊರಿಯರ್/ನೇರವಾಗಿ ತಲುಪುತ್ತದೆ. ಅದ್ಬುತವಾದ ವಿಚಾರಗಳ ತಿಳಿದುಕೊಳ್ಳುವ ಮೂಲಕ ಜ್ಞಾನ ಸಂಪಾದನೆ ಮಾಡಬಹುದು.

ಪತ್ರಿಕೆಯ ಚಂದಾದಾರರಿಗೆ ಉಪಯೋಗ: ವರ್ಷದ ಎಲ್ಲಾ ಸಂಚಿಕೆಗಳು ಸಂವಿಧಾನ ಶಕ್ತಿ ವಾರ ಪತ್ರಿಕೆ ದೊರೆಯುತ್ತದೆ. ವರ್ಷದಲ್ಲಿ ಒಂದು ಬಾರಿ ತಮ್ಮ ಅಥವಾ ತಾವು ಸೂಚಿಸಿದವರ ಹುಟ್ಟು ಹಬ್ಬ ಅಥವಾ ಮದುವೆ ವಾರ್ಷಿಕೋತ್ಸವದ ಶುಭಾಷೆಯಗಳನ್ನು ಪತ್ರಿಕೆಯ ವತಿಯಿಂದ ಉಚಿತವಾಗಿ ಪ್ರಕಟಿಸಲಾಗುವುದು.

ನೀವು ವರದಿಗಾರರಬಹುದು: ನಿಮ್ಮ ಊರು, ಗ್ರಾಮ ಪಂಚಾಯಿತಿ, ಹೋಬಳಿ ತಾಲ್ಲೂಕು ವ್ಯಾಪ್ತಿಯಲ್ಲಿ ನಡೆಯುವ ಘಟನೆಗಳು ಕುರಿತು ವರದಿಯನ್ನು ಕಳುಹಿಸಬಹುದಾಗಿದೆ. ಕೆಲವೇ ಸಮಯದಲ್ಲಿ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು ಜೊತೆಗೆ ಲೇಖನ, ವಿಶೇಷ ವರದಿಗಳು ಪತ್ರಿಕೆಯಲ್ಲಿ ಪ್ರಕಟಮಾಡಲಾಗುವುದು. ಪತ್ರಿಕೆ ಐ.ಡಿ ಕಾರ್ಡ್ ಕೇವಲ ನಿಮ್ಮ ಗುರುತಿಗಾಗಿ ನೀಡುತ್ತದೆ. ಹೊರತು ಯಾರ ಮೇಲೂ ದಬ್ಬಾಳಿಕೆ ಮಾಡಲು ಅಲ್ಲ. ಉತ್ತಮ ಕ್ರಿಯಾಶೀಲ ಪತ್ರಕರ್ತನಿಗೆ ಸೌಜನ್ಯತೆ ತಾಳ್ಮೆ ಅವಶ್ಯಕ. ನಾವು ಅದನ್ನು ತಮ್ಮಿಂದ ಬಯಸುತ್ತೇವೆ.ಯಾವುದೇ ನಮ್ಮ ವರದಿಗಾರರು ತಮ್ಮ ಹುದ್ದೆ ಅಥವಾ ಐ.ಡಿ ಕಾರ್ಡ್ ದುರುಪಯೋಗ ಪಡೆಸಿಕೊಳ್ಳುವುದು ಸಾರ್ವಜನಿಕರಿಗೆ ಕಂಡು ಬಂದರೆ ತಕ್ಷಣ ಮೊಬೈಲ್ ಸಂಖ್ಯೆ : 9739896361 ಸಂಪರ್ಕಿಸಿ.
ಪತ್ರಿಕೆ ಹೆಸರಿನಲ್ಲಿ ಹಣ ವಸೂಲಿ ಮಾಡುವುದು ಅಧಿಕಾರಿಗಳು/ಸಾರ್ವಜನಿಕರನ್ನು ಹೆದರಿಸುವುದು ಕಂಡು ಬಂದರೆ ಯಾವುದೇ ಮುನ್ನಸೂಚನೆ ಇಲ್ಲದೆ ಹುದ್ದೆಯಿಂದ ತೆಗೆದು ಹಾಕಲಾಗುವುದು.ಹೊಸ ವರದಿಗಾರರಾಗಲು ಪತ್ರಿಕೆ ಕಳಿಸುವುದು,ಸುದ್ಧಿ, ಜಾಹೀರಾತು, ಐ.ಡಿ ಕಾರ್ಡ್, ಕಾನೂನು, ವಿಶೇಷ ಸುದ್ದಿ, ನಮ್ಮ ವರದಿಗಾರರ ಬಗ್ಗೆ ಚರ್ಚಿಸಲು ಸಂಪಾದಕರು ಸಂಪಾದಕರು 9739896361 (ಬೆಳಗ್ಗೆ 10.00ರಿಂದ ಸಂಜೆ 6.00 ವರೆಗೆ) ಜಾಹೀರಾತು ಹಣ/ ಚಂದಾ ಹಣವನ್ನು ಸಾರ್ವಜನಿಕರು ಹಣ ನೀಡಿದರೇ ಕಡ್ಡಾಯವಾಗಿ ರಶೀದಿ ಪಡೆಯಬೇಕು,ಜಾಹೀರಾತು/ಚಂದಾ ಹಣವಾಗಿ ಬಂದರೇ PhonePe / Google Pay 9739896361 ಈ ಸಂಖ್ಯೆಗೆ ಮಾತ್ರ ಸಂದಾಯ ಮಾಡತಕ್ಕದ್ದು. ಸುದ್ಧಿ, ಲೇಖನ,ಕವನ, ಕಥೆ ಇನ್ನಿತರ ಬರಹಗಳನ್ನು ಕಡ್ಡಾಯವಾಗಿ – ಆನ್ ಲೈನ್‍ ವೆಬ್ ಸೈಟ್ ನಲ್ಲಿ ಪ್ರಕಟಿಸಲು WhatsApp No : 9739896361 ಅಥವಾ Email Id: samvidhanashakthi.@gmail.com ಕಳಿಸಬೇಕು. ಯಾವುದೇ ವಿಚಾರದಲ್ಲೂ ಸಂಪಾದಕರ ತಿರ್ಮಾನವೇ ಅಂತಿಮವಾಗಿರುತ್ತದೆ.

ಅನಿಲ್ ಕುಮಾರ್ ಕೆ.ಎ (ಕೋಟಹಳ್ಳಿ)
ಸಂಪಾದಕರು & ಪ್ರಕಾಶಕರು

ಸಂವಿಧಾನ ಶಕ್ತಿ‌.
ಕನ್ನಡ ಮತ್ತು ಆಂಗ್ಲವಾರ ಪತ್ರಿಕೆ.‌
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ 9739896361.

ಪತ್ರಿಕೆಯನ್ನ ಬೆಳಸಿ‌ ಹಾರೈಸಿ ಪ್ರೋತ್ಸಾಹಿಸಿ
ಧನ್ಯವಾದಗಳು